ಸಚಿನ್ ಅವರ ಫೆರಾರಿ ಕಾರಿನ ಹಾದಿ ಹಿಡಿದ ಮತ್ತೊಂದು ಕಾರು ಯಾವುದು ಗೊತ್ತೇ ?

Written By:

ವಿಶ್ವ ಕ್ರಿಕೆಟ್‌ನ ನಕ್ಷತ್ರ ಸಚಿನ್ ತೆಂಡೂಲ್ಕರ್ ತಮ್ಮ ವಾಹನಗಳ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಂಡಿದ್ದಾರೆ. ಹೀಗಿದ್ದರೂ, ಸಚಿನ್ ಅವರು ಕಾಲಕಾಲಕ್ಕೆ ತಮ್ಮ ಸಂಗ್ರಹದಲ್ಲಿರುವ ಕೆಲವು ಸೂಪರ್ ಕಾರುಗಳನ್ನು ಮಾರುತ್ತಾರೆ.

ಮಾಸ್ಟರ್ ಬ್ಲಾಸ್ಟರ್ ಎಂದೇ ಖ್ಯಾತಿ ಪಡೆದಿರುವ ಸಚಿನ್ ಅತ್ಯಂತ ಹೆಚ್ಚು ಕಾರು ಮತ್ತು ಬೈಕುಗಳ ಸಂಗ್ರಹ ಹೊಂದಿದ್ದು, ತಾವು ಖರೀದಿಸಿದ ಕೆಲವು ಕಾರುಗಳನ್ನು ಆಗಿಂದಾಗೆ ಮಾರುವ ವಿಶಿಷ್ಟ ಪ್ರವೃತಿ ಅಳವಡಿಸಿಕೊಂಡಿದ್ದಾರೆ, ಎನ್ನುವ ವಿಚಾರ ಎಷ್ಟೋ ಜನಕ್ಕೆ ತಿಳಿದೇ ಇಲ್ಲ ಎನ್ನಬಹುದು.

ಹಾಗಾದ್ರೆ ಸಚಿನ್ ಅವ್ರು ಯಾವ್ ಕಾರನ್ನು ಮಾರಿದ್ದಾರೆ ? ಎನ್ನುವ ಪ್ರೆಶ್ನೆಗೆ ಮುಂದೆ ತಿಳಿಸಲಾಗಿದೆ. ಹೌದು, 'ಗಾಡ್ ಆಫ್ ಕ್ರಿಕೆಟ್' ಅವರು ತಮ್ಮ ರೇಸ್ ಆವೃತಿಯ ನಿಸ್ಸಾನ್ ಜಿಟಿ-ಆರ್ ಇಗೊಸ್ಟ್ ಆವೃತಿಯ ಕಾರನ್ನು ಮಾರಿದ್ದಾರೆ.

ನಿಸ್ಸಾನ್ ಜಿಟಿ-ಆರ್ ಇಗೊಸ್ಟ್ ರೇಸ್ ಕಾರನ್ನು ಸಚಿನ್ ಅವರು 2011ರಲ್ಲಿ ಖರೀದಿಸಿದ್ದರು. ಈ ಕಾರು ಸದ್ಯ ಸಚಿನ್ ಅವರ ಗ್ಯಾರೇಜ್ ಇಂದ ಮುಕ್ತಿ ಪಡೆಯಲಿದೆ ಎನ್ನಲಾಗಿದೆ.

ಫೆರಾರಿ 360 ಮೊಡೆನಾ ಕಾರನ್ನು ಸೂರತ್ ಮೂಲದ ವ್ಯಾಪಾರಿಗೆ ಮಾರಾಟ ಮಾಡಿದ ನಂತರ ಈ ನಿಸ್ಸಾನ್ ಜಿಟಿ-ಆರ್ ಇಗೊಸ್ಟ್ ರೇಸ್ ಕಾರನ್ನು ಸಚ್ಚಿನ್ ಖರೀದಿಸಿದ್ದರು.

ಬಹಷ್ಟು ವಿವಾದಗಳನ್ನು ಸೃಷ್ಟಿಸಿದ್ದ ಫೆರಾರಿ ಕಾರಿನಿಂದ ಮುಕ್ತಿ ಪಡೆದ ಸಚಿನ್, 'ಗಾಡ್ಜಿಲ್ಲಾ' ಎಂದು ಕರೆಯಲ್ಪಡುವ ಈ ಸೂಪರ್ ಜಪಾನ್ ಕಾರನ್ನು ಬರಮಾಡಿಕೊಂಡಿದ್ದರು.

ಕಾರ್ಬನ್ ಫೈಬರ್ ಜೊತೆ 20 ವಿಭಿನ್ನ ರೀತಿಯ ಆಂತರಿಕ ಆಯ್ಕೆಗಳನ್ನು ಹೊಂದಿರುವ ಈ ಕಾರು, ಹಲವಾರು ಒಳಾಂಗಣ ಮತ್ತು ಬಾಹ್ಯ ಮಾರ್ಪಾಡುಗಳ ಆಯ್ಕೆ ಪಡೆದುಕೊಂಡಿದೆ.

ನಿಸ್ಸಾನ್ ಜಿಟಿ-ಆರ್ ಇಗೊಸ್ಟ್ ರೇಸ್ ಕಾರು ಶಕ್ತಿಯುತ 3.6-ಲೀಟರ್ ಡುಯಲ್ ಟರ್ಬೊ ವಿ6 ಎಂಜಿನ್ ಹೊಂದಿದ್ದು, ಈ ಎಂಜಿನ್ 612 ಏನ್ಎಂ ತಿರುಗುಬಲದಲ್ಲಿ 523ರಷ್ಟು ಅಶ್ವಶಕ್ತಿ ಹೊಂದಿರಲಿದೆ.

6 ಸ್ಪೀಡ್ ಡುಯಲ್ ಕ್ಲಚ್ ಪಡೆದಿರುವ ಈ ಶಕ್ತಿಯುತ ಕಾರಿನಲ್ಲಿ ಸ್ವಯಂಚಾಲಿತ ಗೇರ್‌ಬಾಕ್ಸ್ ಇರಿಸಲಾಗಿದ್ದು, 0 ಕಿ.ಮೀ ವೇಗದಿಂದ 100 ಕಿ.ಮೀ ವೇಗವನ್ನು ಪಡೆಯಲು ಈ ಕಾರು ಕೇವಲ 2.9 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

ಅತಿ ಹೆಚ್ಚು 320 ಕಿ.ಮೀ ಗರಿಷ್ಠ ವೇಗವನ್ನು ಪಡೆಯಬಹುದಾದ ಈ ಕಾರನ್ನು ನಟ ಜಾನ್ ಅಬ್ರಹಾಂ ಮತ್ತು ಮಾಜಿ ಎಫ್1 ಚಾಲಕ ನರೈನ್ ಕಾರ್ತಿಕೇಯನ್ ಹೊಂದಿದ್ದಾರೆ.

Story first published: Wednesday, May 31, 2017, 14:10 [IST]
English summary
Read in Kannada about Sachin sold Nissan GT-R Egoist Edition which he had purchased in 2011. Know more about this vehicle's specifications and more.
Please Wait while comments are loading...

Latest Photos