ಮರಳುಗಾಡಿನಲ್ಲಿ ಇಂಡಿಯಾ ಬಾಜಾ ರ‍್ಯಾಲಿ ಶುರು- ಆಪ್‌ರೋಡಿಂಗ್ ಪ್ರಿಯರಿಗೆ ಹಬ್ಬವೋ ಹಬ್ಬ..!!

ಭಾರತದಲ್ಲಿ ಮೋಟಾರ್ ಸ್ಪೋರ್ಟ್ಸ್ ಉತ್ತೇಜಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಆರಂಭಗೊಂಡಿರುವ ಬಾಜಾ ಇಂಡಿಯಾ ರ‍್ಯಾಲಿಯು ಈ ಭಾರೀ ಜೈಸಲ್ಮೇರ್ ಮರಳುಗಾಡಿನಲ್ಲಿ ಆಯೋಜಿಸಲಾಗಿದೆ. ರ‍್ಯಾಲಿಯಲ್ಲಿ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಸ್ಪರ್ಧಿ‌ಗಳು ಭಾಗಿಯಾಗಿದ್ದು, ರ‍್ಯಾಲಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಫ್ರಿಕಾದ ಡಾಕರ್ ರ‍್ಯಾಲಿಗೆ ಪೂರಕವಾಗಿ ಆರಂಭಗೊಂಡಿರುವ ಇಂಡಿಯಾ ಬಾಜಾ ರ‍್ಯಾಲಿ ಈ ಬಾರಿ ಜೈಸಲ್ಮೇರ್ ಮರಳುಗಾಡಿನಲ್ಲಿ ಆಯೋಜನೆ ಮಾಡಲಾಗಿದ್ದು, ದ್ವಿಚಕ್ರ ವಾಹನಗಳ ವಿಭಾಗದಲ್ಲಿನ ವಿಜೇಯ ಶಾಲಿಗಳು ಬೃಹತ್ ಮೊತ್ತದ ಬಹುಮಾನ ಪಡೆಯಲಿದ್ದಾರೆ.

ಇದಲ್ಲದೇ ಇಂಡಿಯಾ ಬಾಜಾ ರ‍್ಯಾಲಿ ವಿಜೇಯಶಾಲಿಗಳು ಆಫ್ರಿಕಾದ ಪ್ರಖ್ಯಾತ "ಆಫ್ರಿಖಿಯಾ ಮರ್ಜಾಗೋ ರ‍್ಯಾಲಿ"ಗೂ ಅವಕಾಶ ಪಡೆಯಲಿದ್ದಾರೆ. ಹೀಗಾಗಿ ಜೈಸಲ್ಮೇರ್ ಮರಳುಗಾಡಿನಲ್ಲಿ ಬೈಕ್ ರೇಸ್ ಸ್ಪರ್ಧಿಗಳು ಭಾರೀ ಕಸರಸ್ತು ಆರಂಭಿಸಿದ್ದಾರೆ.

ಜೈಸಲ್ಮೇರ್ ಮರಳುಗಾಡಿನಲ್ಲಿ ಒಟ್ಟು 6 ವಿಭಾಗಗಳಲ್ಲಿ ಬೈಕ್ ಮತ್ತು ಕಾರು ರ‍್ಯಾಲಿ ನಡೆಯಲಿದ್ದು, 450 ಕಿಮಿ ಕ್ರಮಿಸಬೇಕಾಗಿದೆ. 3 ದಿನಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಚಾಂಪಿಯನ್‌ಗಳು ಕಣಕ್ಕಿಳಿದಿದ್ದಾರೆ.

ಟಾಪ್ ರ‍್ಯಾಲಿ ರೈಡರ್ ಸಿ.ಎಸ್. ಸಂತೋಷ್ ಅನುಪಸ್ಥಿತಿಯಲ್ಲೂ ಈ ಭಾರೀ ಭಾರತೀಯ ಸ್ಪರ್ಧೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು, ನ್ಯಾಷನಲ್ ಚಾಂಪಿಯನ್ ಆರ್. ನಟರಾಜ್ ಮತ್ತು ಅಬ್ಧುಲ್ ವಾಹಿದ್ ತನ್ವೀರ್ ಕಣದಲ್ಲಿದ್ದಾರೆ.

ಇಂಡಿಯಾ ಬಾಜಾ ರ‍್ಯಾಲಿಯಲ್ಲಿ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದು, ಟಿವಿಎಸ್ ರೇಸಿಂಗ್ ವಿಭಾಗದಲ್ಲಿ ಆರ್. ನಟರಾಜ್ ಮತ್ತು ಅಬ್ಧುಲ್ ವಾಹಿದ್ ತನ್ವೀರ್ ಸೆಣಸಾಟ ನಡೆಸಲಿದ್ದಾರೆ.

ಇನ್ನು ರ‍್ಯಾಲಿಯಲ್ಲಿ ಭಾಗಿಯಾಗಿರೋ ಡಾಕರ್ ರ‍್ಯಾಲಿ ಮಾಜಿ ಚಾಂಪಿಯನ್ ಮಾರ್ಕ್ ಕೊಮಾ, ಇಂಡಿಯಾ ಬಾಜಾ ರ‍್ಯಾಲಿ ಬಗ್ಗೆ ಸಾಕಷ್ಟು ಖುಷಿ ವ್ಯಕ್ತಪಡಿಸಿದ್ದಾರೆ. ಭಾರತದಲ್ಲೂ ಆಪ್-ರೋಡಿಂಗ್ ಕೌಶಲ್ಯತೆ ಬೆಳೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಭಾರತೀಯ ಸ್ಪರ್ಧಿಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಅಂತರ್‌ರಾಷ್ಟ್ರೀಯ ಮೋಟಾರ್ ರ‍್ಯಾಲಿಗಳಿಗೆ ಅವಕಾಶ ಪಡೆಯಲು ಭಾರತೀಯ ಸ್ವರ್ಧಿಗಳಿಗೆ ಇಂಡಿಯಾ ಬಾಜಾ ರ‍್ಯಾಲಿ ಸಾಕಷ್ಟು ಅನುಕೂಲಕರವಾಗಿದ್ದು, ಆಪ್-ರೋಡಿಂಗ್ ಪ್ರಿಯರಿಗೆ ಬಾಜಾ ರ‍್ಯಾಲಿ ಸಖತ್ ಥ್ರಿಲ್ ನೀಡುತ್ತಿರುವುದಂತೂ ಸುಳ್ಳಲ್ಲ.

ಪೂರ್ವ ಆಫ್ರಿಕಾದಲ್ಲಿ ನಡೆಯುವ ಪ್ರಖ್ಯಾತ ಡಾಕರ್ ರ‍್ಯಾಲಿ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
The Second Edition of the India Baja rally flagged off from Jaisalmer Today.
Please Wait while comments are loading...

Latest Photos