ಓಲಾ,ಉಬರ್ ಸಂಸ್ಥೆಗಳಿಗೆ ಕ್ಯಾಬ್ ಚಾಲಕರ ಟಾಂಗ್- ಸೇವೆಗೆ ಸಜ್ಜಾಗುತ್ತಿದೆ ಸೇವಾ ಆ್ಯಪ್

ಸ್ವಂತ ಆ್ಯಪ್ ಅಭಿವೃದ್ದಿ ಮೂಲಕ ದೆಹಲಿ ಕ್ಯಾಬ್ ಚಾಲಕರು ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಬಿಸಿಮುಟ್ಟಿಸಲು ಸಜ್ಜಾಗಿದ್ದಾರೆ.

By Praveen

ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ದೆಹಲಿ ಕ್ಯಾಬ್ ಚಾಲಕರು ಬಿಸಿಮುಟ್ಟಿಸಲು ಮುಂದಾಗಿದ್ದಾರೆ. ಹೆಚ್ಚುವರಿ ಆದಾಯಕ್ಕೆ ಕತ್ತರಿ ಹಾಕಿದ್ದರ ವಿರುದ್ಧ ಸಿಡಿದೆದ್ದಿರುವ ಕ್ಯಾಬ್ ಚಾಲಕರು, ತಮ್ಮದೇ ಸ್ಪಂತ ಆ್ಯಪ್ ಅಭಿವೃದ್ದಿ ಮಾಡಿಕೊಂಡಿಕೊಂಡಿದ್ದಾರೆ.

ಓಲಾ,ಉಬರ್ ಸಂಸ್ಥೆಗಳಿಗೆ ಕ್ಯಾಬ್ ಚಾಲಕರ ಟಾಂಗ್- ಸೇವೆಗೆ ಸಜ್ಜಾಗುತ್ತಿದೆ ಸೇವಾ ಆ್ಯಪ್

ಹೊಸ ಆ್ಯಪ್‌ಗೆ "ಸೇವಾ" ಎಂದು ಹೆಸರಿಡಲಾಗಿದ್ದು, ಈ ಮೂಲಕ ತಮ್ಮ ವಿಶ್ವಾಸಿ ಗ್ರಾಹಕರಿಗೆ ಸೇವೆ ನೀಡಲಿದ್ದಾರೆ. ಈಗಾಗಲೇ ಸಾವಿರಾರು ಕ್ಯಾಬ್ ಚಾಲಕರು ಓಲಾ ಮತ್ತು ಉಬರ್ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಗುಡ್‌ಬೈ ಹೇಳಿದ್ದು, ಸ್ವಂತ ಆ್ಯಪ್‌ನಿಂದಲೇ ಭಾರೀ ಆದಾಯಗಳಿಸುವ ನೀರಿಕ್ಷೆಯಲ್ಲಿದ್ದಾರೆ.

ಓಲಾ,ಉಬರ್ ಸಂಸ್ಥೆಗಳಿಗೆ ಕ್ಯಾಬ್ ಚಾಲಕರ ಟಾಂಗ್- ಸೇವೆಗೆ ಸಜ್ಜಾಗುತ್ತಿದೆ ಸೇವಾ ಆ್ಯಪ್

ಈ ಹಿಂದೆ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಒಟ್ಟು ಮೊತ್ತದಲ್ಲಿ ಶೇ.27ರಷ್ಟು ಕಮಿಷನ್‌ ನೀಡಬೇಕಿದ್ದ ಕ್ಯಾಬ್ ಚಾಲಕರು, ಅವರು ಹಾಕುವ ಹತ್ತಾರು ನಿರ್ಬಂಧಗಳಿಗೆ ತಲೆ ಬಾಗಲೇಬೇಕಿತ್ತು. ಹೀಗಾಗಿ ಕ್ಯಾಬ್ ಸೇವಾ ಸಂಸ್ಥೆಗಳೊಂದಿಗಿನ ಒಪ್ಪಂದ ಕಡೆದುಕೊಂಡಿರುವ ಚಾಲಕರು, ಸ್ವಂತ ಆ್ಯಪ್ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಓಲಾ,ಉಬರ್ ಸಂಸ್ಥೆಗಳಿಗೆ ಕ್ಯಾಬ್ ಚಾಲಕರ ಟಾಂಗ್- ಸೇವೆಗೆ ಸಜ್ಜಾಗುತ್ತಿದೆ ಸೇವಾ ಆ್ಯಪ್

ಈಗಾಗಲೇ ತಮ್ಮ ವಿಶ್ವಾಸಿ ಗ್ರಾಹಕರ ಜೊತೆ ಸಂಪರ್ಕದಲ್ಲಿರುವ ಕ್ಯಾಬ್ ಚಾಲಕರು ಒಪ್ಪಂದ ಆಧಾರದ ಮೇಲೆ ಸೇವೆ ಒದಗಿಸಲು ಸಿದ್ಧರಾಗಿದ್ದಾರೆ. ಇದರಿಂದ ಓಲಾ ಮತ್ತು ಉಬರ್ ಆದಾಯಕ್ಕೆ ಭಾರೀ ಹೊಡೆತ ಬಿಳಲಿದ್ದು, ಸೇವಾ ಆ್ಯಪ್ ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಓಲಾ,ಉಬರ್ ಸಂಸ್ಥೆಗಳಿಗೆ ಕ್ಯಾಬ್ ಚಾಲಕರ ಟಾಂಗ್- ಸೇವೆಗೆ ಸಜ್ಜಾಗುತ್ತಿದೆ ಸೇವಾ ಆ್ಯಪ್

ಆ್ಯಪ್ ನಿರ್ವಹಣೆಗಾಗಿ ತಿಂಗಳಿಗೆ ಕೇವಲ ರೂ. 700 ಪಾವತಿಸಬೇಕಿರುವ ಕ್ಯಾಬ್ ಚಾಲಕರು, ಓಲಾ ಮತ್ತು ಉಬರ್ ಗ್ರಾಹಕರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಓಲಾ,ಉಬರ್ ಸಂಸ್ಥೆಗಳಿಗೆ ಕ್ಯಾಬ್ ಚಾಲಕರ ಟಾಂಗ್- ಸೇವೆಗೆ ಸಜ್ಜಾಗುತ್ತಿದೆ ಸೇವಾ ಆ್ಯಪ್

ಓಲಾ ಮತ್ತು ಉಬರ್ ಗ್ರಾಹಕರನ್ನು ಸಂಪರ್ಕಿಸುತ್ತಿರುವ ಕ್ಯಾಬ್ ಚಾಲಕರು ಕಡಿಮೆ ಬೆಲೆಗಳಲ್ಲಿ ಸೇವಾ ಕ್ಯಾಬ್ ಬಳಸುವಂತೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಗ್ರಾಹಕರು ಇದಕ್ಕೆ ಒಪ್ಪಿಗೆ ಸೂಚಿಸುತ್ತಿದ್ದು, ಹೊಸ ಆ್ಯಪ್ ಅಭಿವೃದ್ಧಿ ಕ್ಯಾಬ್ ಚಾಲಕರಿಗೆ ವರದಾನವಾಗಿದೆ.

ಓಲಾ,ಉಬರ್ ಸಂಸ್ಥೆಗಳಿಗೆ ಕ್ಯಾಬ್ ಚಾಲಕರ ಟಾಂಗ್- ಸೇವೆಗೆ ಸಜ್ಜಾಗುತ್ತಿದೆ ಸೇವಾ ಆ್ಯಪ್

ಇನ್ನು ಕ್ಯಾಬ್ ಚಾಲಕರಿಗೆ ವರದಾನವಾಗಿ ಪರಿಣಮಿಸಿರುವ "ಸೇವಾ" ಆ್ಯಪ್ ಉಬರ್ ಮತ್ತು ಓಲಾ ಸಂಸ್ಥೆಗಳಿಗೂ ತಲೆನೋವಾಗಿ ಪರಿಣಮಿಸಿದೆ. ಮುಂದೊಂದು ದಿನ ಸೇವಾ ಆ್ಯಪ್ ದೇಶದ ಪ್ರಮುಖ ನಗರಗಳಲ್ಲಿ ಜನಪ್ರಿಯತೆ ಪಡೆಯುವ ಸಾಧ್ಯತೆಗಳು ಇವೆ.

ಓಲಾ,ಉಬರ್ ಸಂಸ್ಥೆಗಳಿಗೆ ಕ್ಯಾಬ್ ಚಾಲಕರ ಟಾಂಗ್- ಸೇವೆಗೆ ಸಜ್ಜಾಗುತ್ತಿದೆ ಸೇವಾ ಆ್ಯಪ್

ಎಲ್ಲವೂ ಅಂದುಕೊಂಡತೆ ಆದಲ್ಲಿ ಇನ್ನೇರಡು ದಿನಗಳಲ್ಲಿ ವಿನೂತನ "ಸೇವಾ" ಆ್ಯಪ್ ಸೇವೆಗೆ ಲಭ್ಯವಾಗಲಿದೆ. ಇದರ ಜೊತೆಗೆ ಉಬರ್‌ ಮತ್ತು ಓಲಾ ಸಂಸ್ಥೆಗಳಿಗೂ ತೀವ್ರ ಸ್ಪರ್ಧೆ ಒಡ್ಡಲಿದೆ.

Most Read Articles

Kannada
English summary
Taxi drivers have decided to launch their own app, called the Sewa Cab app to rival Uber and Ola directly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X