ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಪೆಟ್ರೋಲ್ ತುಂಬಿಸುವ ಮುನ್ನ ಹುಷಾರ್..!!

Written By:

ಕಳೆದ ಕೆಲ ವರ್ಷಗಳಿಂದ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸುವಲ್ಲಿ ಮಾಹಾಮೋಸ ನಡೆಯುತ್ತಿದ್ದು, ಪೆಟ್ರೋಲ್ ಬಂಕ್ ಮಾಲೀಕರ ಕಳ್ಳಾಟಕ್ಕೆ ವಾಹನ ಸವಾರರು ಬೇಸತ್ತು ಹೋಗಿದ್ದಾರೆ.

ಇದು ಹೊಸ ಸಮಸ್ಯೆ ಏನು ಅಲ್ಲಾ. ಆದ್ರೆ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ಗೊತ್ತಿದ್ರು ಕಣ್ಮುಚ್ಚಿ ಕುಳಿತಿರುವುದು ಮಾತ್ರ ದುರಷ್ಟಕರ. ಯಾಕೇಂದ್ರೆ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಮೋಸ ಮಾತ್ರ ಅಷ್ಟಿಷ್ಟಲ್ಲ.

ಕಳೆದ ಕೆಲ ದಿನಗಳ ಹಿಂದೆ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹತ್ತಾರು ಪ್ರಕರಣಗಳು ದಾಖಲಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಆದ್ರೆ ಇದೀಗ ಅದೇ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ.

ಮೊನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಬಂಕ್‌ಗಳ ಮೇಲೆ ದಾಳಿ ನಡೆಸಿರುವ ಎಸ್ಐಟಿ(ವಿಶೇಷ ತನಿಖಾ ದಳ) ಅಧಿಕಾರಿಗಳು, ಗ್ರಾಹಕರಿಗೆ ಮೋಸ ಮಾಡುತ್ತಿದ್ದ ನೂರಾರು ಪೆಟ್ರೋಲ್ ಬಂಕ್‌ಗಳಲ್ಲಿ ಬೀಗ ಜಡಿದ್ದಿದ್ದಾರೆ.

ಗ್ರಾಹಕರ ನೀಡಿದ ದೂರುಗಳ ಆಧಾರದ ಮೇಲೆ ದಾಳಿ ನಡೆಸಿದ್ದ ಎಸ್ಐಟಿ ತಂಡದ ಅಧಿಕಾರಿಗಳು, ಗ್ರಾಹಕರ ನೆಪದಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಕಳ್ಳಾಟವನ್ನು ಬಹಿರಂಗಗೊಳಿಸಿದ್ದಾರೆ.

ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತೆ ಕಳ್ಳ ದಂಧೆ

ಹೌದು.. ಇದು ನಿಮಗೆ ನಂಬಲು ಸಾಧ್ಯವಾಗದಿದ್ದರು ನಿಜ. ಉತ್ತರ ಪ್ರದೇಶದಲ್ಲಿ ನಡೆದ ದಾಳಿ ವೇಳೆ ನೂರಾರು ರಿಮೋಟ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಂದರೆ ನೀವು ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿದ್ದರೆ ನಿಮ್ಮ ವಾಹನದಲ್ಲಿ ಕೇವಲ 900ಮಿ. ಲೀಟರ್ ಮಾತ್ರ ತುಂಬಿಕೊಳ್ಳುತ್ತದೆ. ಆದ್ರೆ ಮೀಟರ್‌ನಲ್ಲಿ ಮಾತ್ರ 1 ಲೀಟರ್ ಹಾಕಿದ್ದಾಗಿ ಲೆಕ್ಕ ತೋರಿಸುತ್ತದೆ.

ಈ ಎಲ್ಲ ಮೋಸವನ್ನು ರಿಮೋಟ್ ಕಂಟ್ರೋಲ್ ಮೂಲಕವೇ ಕಾರ್ಯನಿರ್ವಹಿಸುವ ಬಂಕ್ ಮಾಲೀಕರು, ವಾಹನ ಸವಾರರಿಗೆ ಮಾಹಮೋಸ ಮಾಡುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಚಳ್ಳೇಹಣ್ಣ ತಿನ್ನಿಸುತ್ತಿದ್ದಾರೆ.

ದೇಶಾದ್ಯಂತ ಸುಮಾರು 25 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಈ ರೀತಿಯಾಗಿ ಮೋಸ ನಡೆಯುತ್ತಿದ್ದು, ಮೋಸದ ವ್ಯವಹಾರ ಪತ್ತೆ ಹಚ್ಚಲು ಸಾಧ್ಯವಾಗದೇ ವಾಹನನ ಸವಾರರು ಪರದಾಡುತ್ತಿದ್ದಾರೆ.

ಕರ್ನಾಟಕದಲ್ಲೂ ಸುಮಾರು 2 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಈ ರೀತಿಯಾಗಿ ಮೋಸ ನಡೆಯುತ್ತಿದ್ದು, ಮೋಸದ ವ್ಯವಹಾರದ ಹಿಂದೆ ಕೆಲವು ರಾಜಕೀಯ ಮುಖಂಡರೇ ಬೆನ್ನೆಲುಬಾಗಿ ನಿಂತಿರುವುದು ದುರಾದೃಷ್ಠಕರ ಸಂಗತಿ.

ಪತ್ತೆ ಹಚ್ಚುವುದು ಹೇಗೆ?
ನಿಮಗೆ ಪೆಟ್ರೋಲ್ ಬಂಕ್ ಮೇಲೆ ಅನುಮಾನವಿದ್ದಲ್ಲಿ ಬಾಟಲ್‌ಗಳಲ್ಲಿ ಪೆಟ್ರೋಲ್ ತುಂಬಿಸಿ. ಜೊತೆಗೆ ಕೆಲವು ವೈಜ್ಞಾನಿಕ ಸಾಧನಗಳಿಂದ ನಿಮ್ಮ ವಾಹನದಲ್ಲಿ ತುಂಬಿಸಲಾದ ಫ್ಯೂಲ್ ಪ್ರಮಾಣವನ್ನು ಧೃಡಿಕರಣ ಮಾಡಿಕೊಳ್ಳಿ.

ಅನುಮಾನ ಬಂದ್ರೆ ಬಿಡಲೇಬೇಡಿ
ವಾಹನ ಸವಾರರೇ ಯಾವುದೇ ಕಾರಣಕ್ಕೂ ಅನ್ಯಾಯವನ್ನು ಸಹಿಸಿಕೊಳ್ಳಬೇಡಿ. ನಿಮಗೆ ಅನುಮಾನ ಬಂದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರಮಾಣದ ಬಗ್ಗೆ ಮಾಲೀಕರ ಬಳಿ ಅನುಮಾನ ಬಗೆಹರಿಸಿಕೊಳ್ಳಿ.

ತಪ್ಪಿತಸ್ಥರ ದೂರು ದಾಖಲಿಸಿ
ಒಂದು ವೇಳೆ ನಿಮ್ಮ ಅನುಮಾನ ನಿಜವಾಗಿದ್ದಲ್ಲಿ ಮೋಸ ಮಾಡುತ್ತಿರುವ ಬಂಕ್ ವಿರುದ್ಧ ದೂರು ದಾಖಲಿಸಲು ಹಿಂಜರಿಯಬೇಡಿ. ದೂರು ದಾಖಲಿಸಿ ಮೋಸದ ವ್ಯವಹಾರಕ್ಕೆ ಬ್ರೇಕ್ ಹಾಕಿ.

ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕಿರುವ ಸಂಬಂಧ ಪಟ್ಟ ಅಧಿಕಾರಿಗಳು ಹಣದ ದಾಹಕ್ಕೆ ಪೆಟ್ರೋಲ್ ಮಾಲೀಕರು ಮಾಡುತ್ತಿರುವ ಮಾಹಮೋಸವನ್ನು ತಡೆಗಟ್ಟಿ ವಾಹನ ಸವಾರರ ಕಷ್ಟಕ್ಕೆ ಸ್ಪಂದಿಸಬೇಕಿದೆ.

ಮೋಸ ಹೋಗ್ಬೇಡಿ

ವಾಹನ ಸವಾರರೇ ಪೆಟ್ರೋಲ್ ತುಂಬಿಸುವ ವಿಚಾರದಲ್ಲಿ ಮೋಸ ಹೋಗುವ ಮುನ್ನ ಹುಷಾರ್ ಆಗಿ ವ್ಯವಹಾರ ಮಾಡುವುದು ಒಳಿತು. ಜೊತೆಗೆ ನಿಮ್ಮ ನಂಬುಗೆಯ ಪೆಟ್ರೋಲ್ ಬಂಕ್‌ನಲ್ಲೇ ಪೆಟ್ರೋಲ್, ಡಿಸೇಲ್ ತುಂಬಿಸಿ.

ಬೆಂಗಳೂರಿನಲ್ಲೂ ಭಾರೀ ಮೋಸ
ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಎರುತ್ತಲೇ ಇದ್ದು, ಪೆಟ್ರೋಲ್ ಬಂಕ್ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿವೆ. ಲಾಭವನ್ನೇ ಮುಂದಿಟ್ಟುಕೊಂಡು ಬಂಕ್ ಮಾಲೀಕರು ವಾಹನ ಸವಾರರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

Story first published: Tuesday, May 2, 2017, 17:15 [IST]
English summary
Be care full in petrol station. When u fill the fuel.
Please Wait while comments are loading...

Latest Photos