ಹ್ಯುಂಡೈ ವೆರ್ನಾ 2017 ಕಾರಿನ ರಹಸ್ಯ ಚಿತ್ರಗಳು ಬಿಡುಗಡೆ

Written By:

ದಕ್ಷಿಣ ಕೊರಿಯಾದ ಕಾರು ತಯಾರಕ ಹ್ಯುಂಡೈ ಭಾರತದಲ್ಲಿ ಮೂರನೇ ತಲೆಮಾರಿನ ವೆರ್ನಾ ಕಾರಿನ ಪರಿಚಯ ಮಾಡಲಿದ್ದು, ಈ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.

ಹ್ಯುಂಡೈ ಸಂಸ್ಥೆಯ ಯಶಸ್ವಿ ವೆರ್ನಾ ಸೆಡಾನ್ ಕಾರಿನ ಮೂರನೇ ಆವೃತಿ ಈಗಾಗಲೇ ಬಿಡುಗಡೆಗೊಳ್ಳಲು ಸಿದ್ದವಾಗಿದ್ದು, ಈ ಕಾರಿನ ಪರೀಕ್ಷೆ ವೇಳೆ ಭಾರತದ ರಸ್ತೆಯ ಮೇಲೆ ಕಾಣಿಸಿಕೊಂಡಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.

ಐಎಎಬ್ ಈ ಕಾರಿನ ರಹಸ್ಯ ಚಿತ್ರಗಳನ್ನು ಸೆರೆಹಿಡಿದಿದ್ದು, ಸದ್ಯ ಟೆಸ್ಟಿಂಗ್ ಹಂತದಲ್ಲಿರುವ ಈ ಕಾರು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಈ ವೆರ್ನಾ ಮತ್ತಷ್ಟು ಅಂದಗೊಂಡು ಬರುತ್ತಿರುವುದು ಹೊಚ್ಚ ಹೊಸ ಹೋಂಡಾ ಸಂಸ್ಥೆಯ ಹೆಮ್ಮೆಯ ಸಿಟಿ ಕಾರಿಗೆ ಹೆಚ್ಚು ತಲೆ ನೋವು ತಂದೊಡ್ಡುವುದಂತೂ ಖಚಿತ ಎನ್ನಲಾಗಿದೆ.

ಉತ್ತರ ಅಮೆರಿಕದ ಮಾರುಕಟ್ಟೆಯಲ್ಲಿ ಮಾರಾಟವಾದ ಅಸೆಂಟ್ ಕಾರಿನ ಬಾಹ್ಯ ವಿನ್ಯಾಸವನ್ನು ಈ ವೆರ್ನಾ ಕಾರು ಪಡೆಯಲಿದೆ ಎನ್ನುವ ವಿಚಾರ ಹೊಬಿದ್ದಿದ್ದು, ಈ ಬಗ್ಗೆ ಕಂಪನಿ ಯಾವುದೇ ರೀತಿಯ ಸುಳಿವು ನೀಡದೆ ಇರುವುದು ಹೆಚ್ಚು ಕುತೂಹಲ ಮೂಡಿಸಿದೆ.

ಹೊಚ್ಚ ಹೊಸ ಹ್ಯುಂಡೈ ವೆರ್ನಾ 2017 ಕಾರು ಫ್ಲೂಡಿಕ್ 2.0 ವಿನ್ಯಾಸ ಭಾಷೆಯನ್ನು ಹೊಂದಿದೆ, ಇದು ಹಿಂದಿನ ಮಾದರಿಯ ಅಂಗ್ಯುಲರ್ ರೇಖೆಗಳಿಗೆ ಹೋಲಿಸಿದರೆ ಹೆಚ್ಚು ಫ್ಲೋ ಒಳಗೊಂಡಿರಲಿದೆ.

ಹೊಸ ವೆರ್ನಾ ಒಳಭಾಗದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಹೊಸ ಸಲಕರಣೆ ಕ್ಲಸ್ಟರ್ ಮತ್ತು MIDನೊಂದಿಗೆ ತೇಲುವ ಡ್ಯಾಶ್‌ಬೋರ್ಡ್ ಹೊಂದಿದೆ. ಹೊಸ ಸೆಡಾನ್ ಹವಾಮಾನ ನಿಯಂತ್ರಣ ಮತ್ತು ಹಿಂಭಾಗದ ಎಸಿ ದ್ವಾರಗಳನ್ನು ಪಡೆಯುತ್ತದೆ.

Story first published: Friday, June 16, 2017, 12:03 [IST]
English summary
South Korean carmaker Hyundai is planning to introduce the third-gen Verna in India. Ahead of that the sedan has been spotted testing in India.
Please Wait while comments are loading...

Latest Photos