2020ರ ಮಾರಾಟ ಸಮರಕ್ಕೆ ನಾವು ಸಿದ್ದ ಆಗ್ತೀವಿ ಎಂದ ಮಾರುತಿ ಸುಜುಕಿ

Written By:

ಇನ್ನು ಕೇವಲ ಮೂರು ವರ್ಷಗಳ ಒಳಗಾಗಿ ವಿಶ್ವದ ಮೂರನೇ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿ ಭಾರತ ಬೆಳೆಯಬೇಕೆಂದು ಸುಜುಕಿ ಮೋಟಾರ್ ಕಾರ್ಪೊರೇಷನ್ ಆಶಿಸುತ್ತಿದ್ದು, ಈ ಬೆಳವಣಿಗೆಯನ್ನು ಕಂಪನಿ ಸಕಾರಾತ್ಮಕವಾಗಿ ತೆಗೆದುಕೊಳ್ಳಲು ನಿರ್ಧರಿಸಿದೆ.

ಈ ಬೆಳವಣಿಗೆಯಲ್ಲಿ ನಮ್ಮ ಕೊಡುಗೆ ಖಂಡಿತ ಇರುತ್ತದೆ ಎಂದು ಕಂಪನಿ ತಿಳಿಸಿದೆ. ಸದ್ಯ ಚೀನಾ, ಅಮೆರಿಕಾ, ಜಪಾನ್, ಜರ್ಮನಿ ಮತ್ತು ದಕ್ಷಿಣ ಕೊರಿಯಾ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿದ್ದು, ಆರನೇ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಮಾರುತಿ ಸುಜುಕಿ ದೇಶದ ಶೇಕಡ 50 ರಷ್ಟು ಪ್ರಯಾಣಿಕ ವಾಹನಗಳ ಮೇಲೆ ಈಗಾಗಲೇ ಹಿಡಿತ ಸಾಧಿಸಿದ್ದು, ಉತ್ತಮ ಗುಣಮಟ್ಟದ ವಾಹನಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಜನರನ್ನು ತಲುಪಲು ಕಂಪನಿ ಹೆಚ್ಚು ಶ್ರಮವಹಿಸುತ್ತಿದೆ.

ಗುಜರಾತಿನಲ್ಲಿ ಹೊಸದಾಗಿ ಸ್ಥಾಪಿಸಿರುವ ಘಟಕದಲ್ಲಿ ಉತ್ಪಾದನೆಯನ್ನು ಈಗಾಗಲೇ ಆರಂಭಿಸಿದ್ದು, 2020 ಒಳಗಾಗಿ ತನ್ನ ವಾಹನಗಳ ಉತ್ಪಾದನೆಯನ್ನು 20 ಲಕ್ಷಕ್ಕೆ ಏರಿಸುವ ನಿರ್ಧಾರ ಕೈಗೊಂಡಿದೆ.

"2020ವೇಳೆಗೆ ಭಾರತ ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿ ಬೆಳೆಯುವ ನಿರೀಕ್ಷೆ ಇದ್ದು, ನಾವು ಈಗಾಗಲೇ ಈ ಬಗ್ಗೆ ಹೆಚ್ಚು ಕಾರ್ಯಪ್ರವೃತರಾಗಿದ್ದು, ನಾವು ಈ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಲು ನಿರ್ಧರಿಸಿದ್ದೇವೆ" ಎಂದು ಸುಜುಕಿ ಮೋಟಾರ್ ಕಾರ್ಪೊರೇಷನ್ ಕಂಪನಿಯ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜಿಂಗ್ ಆಫೀಸರ್ ಆದ ಕಿಂಜಿ ಸೈಟೊ ತಿಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಮಾರುತಿ ಕಂಪನಿಯ ಆಲ್ಟೊ ಅತಿ ಹೆಚ್ಚು ಮಾರಾಟಗೊಂಡ ಕಾರು ಎಂಬ ಶೇಯಸ್ಸು ಪಡೆದುಕೊಂಡಿದ್ದು, 2020ರ ಒಳಗಾಗಿ ಇನ್ನು 20 ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಆಲ್ಟೊ ಜೊತೆಗೆ ಇತ್ತೀಚಿನ ವ್ಯಾಗನಾರ್, ವಿಟಾರಾ, ಸ್ವಿಫ್ಟ್, ಬ್ರೀಝ ಮತ್ತು ಬಲೆನೊ ಕಾರುಗಳು ಯಶಸ್ಸಿನ ಹಾದಿಯಲ್ಲಿ ಸಾಗಿದ್ದು, ಕಂಪನಿಗೆ ಹೆಚ್ಚಿನ ಮಟ್ಟದ ಪ್ರಖ್ಯಾತಿ ತಂದುಕೊಟ್ಟಿವೆ.

ಮಾರುತಿ ಸುಜುಕಿ ತನ್ನ ಗುಜರಾತ್ ಘಟಕದಲ್ಲಿ ಸದ್ಯ ಕಡಿಮೆ ಮಟ್ಟದಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ವರ್ಷಕ್ಕೆ 7.5 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗುವುದು.

ಶ್ರೇಷ್ಠ ಗುಣಮಟ್ಟದ ಕಾರುಗಳನ್ನು ಉತ್ಪಾದನೆ ಮಾಡುವ ಮಾರುತಿ ಸುಜುಕಿ ಕಂಪನಿಯ ಹೊಚ್ಚ ಹೊಸ ಸ್ವಿಫ್ಟ್ 2017 ಕಾರಿನ ಚಿತ್ರಗಳನ್ನು ಈಗಲೇ ನೋಡಿ...

Story first published: Wednesday, March 15, 2017, 11:56 [IST]
English summary
"India is expected to grow into the third-biggest car market in the world by 2020, and we are determined to play a big part in that growth."
Please Wait while comments are loading...

Latest Photos