ಎಕ್ಸ್‌ಕ್ಲೂಸಿವ್: ಟಾಟಾ ಮೋಟಾರ್ಸ್ ಜೊತೆ ಕೈ ಜೋಡಿಸಿದ ಫೋಕ್ಸ್‌ವ್ಯಾಗನ್- ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಮುನ್ನುಡಿ..!!

Written By:

ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವ ಮಟ್ಟದ ಆಟೋ ಎಕ್ಸ್‌ಪೋದಲ್ಲಿ ಫೋಕ್ಸ್‌ವ್ಯಾಗನ್ ಜೊತೆಗೆ ಟಾಟಾ ಮೋಟಾರ್ಸ್ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೊಸ ಹೊಸ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆ ಕೈಗೊಳ್ಳಲಿವೆ.

ಭಾರತದ ಪ್ರತಿಷ್ಠಿತ ಆಟೋ ಉತ್ಪಾದನಾ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿ ಪಡೆದುಕೊಂಡಿದೆ. ಇದನ್ನು ಮನಗಂಡಿರುವ ಜರ್ಮನ್ ಮೂಲದ ಫೋಕ್ಸ್‌ವ್ಯಾಗನ್ ಸಂಸ್ಥೆ ಹೊಸ ಕ್ರಾಂತಿಗೆ ಮುನ್ನಡಿ ಬರೆದಿದ್ದು, ವಿನೂತನ ಮಾದರಿಯ ಆಟೋ ಉತ್ಪನ್ನಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಹಿ ಹಾಕಿದೆ.

ಜಿನೆವಾದಲ್ಲಿ ನಡೆದಿರುವ ಆಟೋ ಎಕ್ಸ್‌ಪೋ ಈ ಬಗ್ಗೆ ಅಧಿಕೃತವಾಗಿ ಪರಸ್ಪರ ಸಹಿ ಮಾಡಿರುವ ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗನ್ ಸಂಸ್ಥೆಯು, ಎಂಜಿನ್, ಕಾಂಪೋನೆಟ್ ಸೋರ್ಸಿಂಗ್ ಮತ್ತು ಜಂಟಿಯಾಗಿ ಸಂಶೋಧನೆಗಳನ್ನು ಕೈಗೊಳ್ಳಲು ಸಮ್ಮತಿಸಲಾಗಿದೆ.

ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗನ್ ಜಂಟಿ ಸಂಶೋಧನೆ ಮುಂದಾಗಿರುವುದು ಆಟೋ ಮೊಬೈಲ್ ಉದ್ಯಮದಲ್ಲಿ ಭಾರೀ ಚರ್ಚೆ ಕಾರಣವಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ವಿನೂತನ ರೀತಿಯ ಕಾರುಗಳ ಅಭಿವೃದ್ಧಿ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳು ಪ್ರಾರಂಭವಾಗಲಿವೆ.

ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಶೋಧನೆಯಲ್ಲಿ ಮುಂದಿರುವ ಫೋಕ್ಸ್‌ವ್ಯಾಗನ್ , ಟಾಟಾ ಮೋಟಾರ್ಸ್ ಉತ್ಪನ್ನಗಳಲ್ಲಿ ಹೇರಳವಾಗಿ ಬಳಕೆಯಾಗಲಿವೆ. ಇದರೊಂದಿಗೆ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಮತ್ತೆ ವಿಶ್ವದರ್ಜೆಯ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

ತಂತ್ರಜ್ಞಾನ ಅಭಿವೃದ್ಧಿಗೆ ಪರಸ್ಪರ ಒಪ್ಪಿಗೆ ಸೂಚಿಸಿದ್ದರ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಫೋಕ್ಸ್‌ವ್ಯಾಗನ್ ಇಂಡಿಯಾ ವಕ್ತಾರರು, ಮುಂಬುವರ ದಿನಗಳಲ್ಲಿ ಪ್ರಬಲ ಪಾಲುದಾರಿಕೆ ಸಂಸ್ಥೆ ಟಾಟಾ ಮೋಟಾರ್ಸ್ ಜೊತೆಗೂಡಿ ಹೊಸ ಉತ್ಪನ್ನಗಳ ಅಭಿವೃದ್ಧಿಯ ಗುರಿ ಹೊಂದಲಾಗಿದೆ ಎಂದಿದ್ದಾರೆ.

ವಿನೂತನ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ಟಾಟಾ ಮೋಟಾರ್ಸ್ ಜೊತೆ ಹೊಸ ಹೊಸ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲಿರುವ ಫೋಕ್ಸ್‌ವ್ಯಾಗನ್, ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಛು ಜನಪ್ರಿಯತೆ ಪಡೆಯುವ ಯೋಜನೆ ಹೊಂದಿದೆ.

ಫೋಕ್ಸ್‌ವ್ಯಾಗನ್ ಜೊತೆ ಟಾಟಾ ಮೋಟಾರ್ಸ್ ಜೊತೆ ಕೈಜೋಡಿಸಲಿರುವುದು ಕಾರು ಉತ್ವಾದಕರಲ್ಲಿ ಈಗಾಗಲೇ ತಳಮಳ ಶುರುವಾಗಿದೆ. ಯಾಕೇಂದ್ರೆ ದುಬಾರಿ ಕಾರು ಉತ್ಪಾದನೆ ಮಾಡುವ ಫೋಕ್ಸ್‌ವ್ಯಾಗನ್ ಇನ್ನು ಟಾಟಾ ಕಾರುಗಳಲ್ಲಿ ತನ್ನ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲಿದ್ದು, ಕೈಗೆಟುವ ದರದಲ್ಲಿ ವಿಶ್ವದರ್ಜೆಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ನೀಡಿರುವ ಟಾಟಾ ಮೋಟಾರ್ಸ್, ಫೋಕ್ಸ್‌ವ್ಯಾಗನ್ ಜೊತೆಗೆ ಕೆಲ ಮಹತ್ತರ ಒಪ್ಪಂದಗಳಿಗೂ ಸಹಿ ಹಾಕಿದೆ. ಸಾಂಪ್ರದಾಯಿಕ ಆವೃತ್ತಿಗಳ ಅಭಿವೃದ್ಧಿ ಹೊರತು ಪಡಿಸಿ ವಿಶೇಷ ಆವೃತ್ತಿಗಳಲ್ಲಿ ಎರಡು ಸಂಸ್ಥೆಗಳು ಜಂಟಿಯಾಗಿ ಸಂಶೋಧನೆ ಕೈಗೊಳ್ಳಲಿವೆ. ಹೀಗಾಗಿ ಈ ಬೃಹತ್ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲು ಇನ್ನೂ ಕೆಲವು ವರ್ಷಗಳು ಕಾಯಲೇಬೇಕಿದೆ.

ಒಟ್ಟಿನಲ್ಲಿ ಟಾಟಾ ಮೋಟಾರ್ಸ್, ಫೋಕ್ಸ್‌ವ್ಯಾಗನ್ ಒಗ್ಗಟ್ಟಿನ ಮಂತ್ರ ಫಲಪ್ರದವಾದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಆವಿಷ್ಕಾರಗಳು ಹೊರಬರಲಿವೆ. ಜೊತೆಗೆ ಪರಸ್ಪರ ಒಡಂಬಡಿಕೆ ಮೂಲಕ ಮಾರಾಟದಲ್ಲೂ ಸ್ವಾಮ್ಯತೆ ಕಾಯ್ದುಕೊಳ್ಳಲಿದ್ದಾರೆ.

ಟಾಟಾ ಸೂಪರ್ ಕಾರು Tamo Racemo ಕಾರಿನ ಚಿತ್ರಗಳಿಗಾಗಿ ಈ ಕೂಡಲೇ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Story first published: Thursday, March 9, 2017, 17:37 [IST]
English summary
Tata and VW signed the MoU to explore a joint venture on the vehicle architecture, engines, and for the component sourcing.
Please Wait while comments are loading...

Latest Photos