ಟಾಟಾ ಮೋಟರ್ಸ್ ನ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟೈಗೊರ್'; ಚಿತ್ರಗಳು ಮತ್ತು ವಿವರ ಇಲ್ಲಿದೆ

ಟಾಟಾ ಮೋಟಾರ್ಸ್ ಕಂಪನಿಯು ಈ ಮೊದಲೇ 2016 ನಲ್ಲಿ ನೆಡೆದ ಆಟೋ ಎಕ್ಸ್ ಪೋದಲ್ಲಿ ಈ ಕಾರನ್ನು ಬಿಡುಗಡೆಗೊಳಿಸಿತ್ತಾದರೂ ಕಾರಿನ ಹೆಸರನ್ನು ಬದಲಾವಣೆ ಮಾಡಲು ನಿರ್ಧರಿಸಿದೆ.

Written By:

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ 'ಟಿಯಾಗೊ' ಹ್ಯಾಚ್ ಬ್ಯಾಕ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವ ಬೆನ್ನಲೇ ತನ್ನ ಕೈಟ್ 5 ಕಾರಿನ ಹೆಸರನ್ನು ಮರುನಾಮಕರಣ ಮಾಡಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಕಾರ್ಯೋನ್ಮುಕವಾಗಿದ್ದ ಟಾಟಾ ಮೋಟರ್ಸ್ ತನ್ನ ಮೊಟ್ಟ ಮೊದಲ ಸ್ಟೈಲ್ ಬ್ಯಾಕ್ ಕಾರು 'ಕೈಟ್ 5' ಎಂಬ ಹೆಸರನ್ನು ಹಿಂಪಡೆದಿದ್ದು, ಹೊಸ ಕಾರಿನ ಹೆಸರನ್ನು 'ಟೈಗೊರ್' ಎಂದು ಬದಲಾವಣೆ ಮಾಡಿದೆ. ಟಿಯಾಗೊದಲ್ಲಿ ದೊರಕಿರುವ ಯಶಸ್ಸೇ ನೂತನ ಕಾರಿನ ಹೆಸರು ಬದಲಾವಣೆ ಮಾಡಲು ಟಾಟಾಗೆ ಸ್ಪೂರ್ತಿಯಾಗಿದೆ. ತನ್ಮೂಲಕ ಟಾಟಾ ಶ್ರೇಣಿಯ ಕಾರಿನ ಹೆಸರಿನ ಅಂತಿಮದಲ್ಲಿ 'ಗೊ' ಎಂಬ ಉಚ್ಚಾರಣೆಯನ್ನು ಟಾಟಾ ಮುಂದುವರಿಸಲಿದೆ.

ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ಹೊಂದಿರುವ ಟಾಟಾದ ಮೂರನೇ ಕಾರು ಎಂಬ ಶ್ರೇಯಸ್ಸಿಗೆ ಹೊಸದಾಗಿ ನಾಮಕರಣವಾಗಿರುವ ಟೈಗೊರ್ ಕಾರು ಪಾತ್ರವಾಗಿದೆ.

ಟಿಯಾಗೊ ಮತ್ತು ಇತ್ತೀಚೆಗೆ ಬಿಡುಗಡೆಗೊಂಡ ಎಸ್ ಯುವಿ 'ಹೆಕ್ಸಾ' ಈ ಮೊದಲು ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ಹೊಂದಿರುವ ಕಾರುಗಳಾಗಿವೆ.

ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಈಗಾಗಲೇ ಪೈಪೋಟಿ ಜೋರಾಗಿ ನಡೆಯುತ್ತಿದೆ. ಇಲ್ಲಿ ಮಾರುತಿ ಸ್ವಿಫ್ಟ್ ಡಿಜೈರ್ ಜೊತೆಗೆ ಹ್ಯುಂಡೈ ಎಕ್ಸ್ ಸೆಂಟ್, ಹೋಂಡಾ ಅಮೇಜ್, ಫೋರ್ಡ್ ಫಿಗೊ ಆಸ್ಪೈರ್, ಫೋಕ್ಸ್ ವ್ಯಾಗನ್ ಎಮಿಯೊ ಜೊತೆಗೆ ಇನ್ನಷ್ಟೇ ಬಿಡುಗಡೆಯಾಗಲಿರುವ ಷೆವರ್ಲೆ ಎಸ್ಸೆನ್ಷಿಯಾ ಕೂಡಾ ಇರಲಿದೆ. ಟಾಟಾ 'ಟೈಗೊರ್' ಕಾರಿನ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲದಿದ್ದರೂ ಇದೇ ವರ್ಷ ಅಂದರೆ 2017 ರಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟದಲ್ಲಿರುವ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಟಾಟಾದ ಜೆಸ್ಟ್ ಈಗಾಗಲೇ ಮಾರಾಟದಲ್ಲಿದ್ದರೂ ಸದ್ದು ಮಾಡುವಲ್ಲಿ ವಿಫಲವಾಗಿದೆ ಕಂಪನಿಗೆ ಪೆಟ್ಟು ಬಿದ್ದಿದೆ.

1.2 ಪೆಟ್ರೋಲ್ ಮತ್ತು 1.05 ಡೀಸೆಲ್ ಇಂಜಿನ್ ಹೊಂದಿರುವ 'ಟೈಗೊರ್' ಯುವ ಜನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಲಾಗಿದೆ ಹಾಗು ಈ ವರ್ಗದ ಜನರನ್ನು ತಲುಪುವ ಎಲ್ಲಾ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ.

'ಟೈಗೊರ್' ಕಾರಿನೊಂದಿಗೆ ಟಾಟಾ ಮೋಟರ್ಸ್ ಹೊಸ ಸ್ಟೈಲ್ ಮತ್ತು ಹಾವ ಭಾವದಲ್ಲಿ ಬದಲಾವಣೆ ತಂದಿದ್ದು, ಬ್ರೇಕ್-ಫ್ರೀ ವಿನ್ಯಾಸ ಹೊಂದಿರುವ ಭಾರತದ ಮೊದಲ ಕಾರು ಎಂಬ ವಿಶೇಷತೆಗೆ ಪಾತ್ರವಾಗಿದೆ. ಮಾನ್ಯುಯಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಎರಡೂ ಮಾದರಿಗಳಲ್ಲಿ ಟಾಟಾ ಟೈಗೊರ್ ಮಾರ್ಚ್ ನಲ್ಲಿ ಬರಲಿದ್ದು ಜನರ ಮನಸ್ಸು ಗೆಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಈ ಕೆಳಗಿನ ಟಾಟಾ 'ಕೈಟ್ 5' ಫೋಟೋಗಳನ್ನು ತಪ್ಪದೆ ವೀಕ್ಷಿಸಿ.

Click to compare, buy, and renew Car Insurance online

Buy InsuranceBuy Now

Story first published: Thursday, February 9, 2017, 15:44 [IST]
English summary
Tata Motors has revealed the name for its upcoming compact sedan based on the Kite 5 concept from the 2016 Auto Expo.
Please Wait while comments are loading...

Latest Photos