ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ ವಾಣಿಜ್ಯ ವಾಹನಗಳು..!!

Written By:

ವಾಣಿಜ್ಯ ವಾಹನಗಳ ಉತ್ವಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ ಸಂಸ್ಥೆಯು, ವಿವಿಧ ನಮೂನೆಯ ವಾಣಿಜ್ಯ ವಾಹನಗಳನ್ನು ಪ್ರಸ್ತುತ ತಂತ್ರಜ್ಞಾನಗಳೊಂದಿಗೆ ಪರಿಷ್ಕರಣೆಗೊಳಿಸಿದೆ.

ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳನ್ನು ಬಿಡುಗಡೆಗೊಳಿಸಿರುವ ಟಾಟಾ ಸಂಸ್ಥೆಯು, ಹೊಸ ವಾಹನಗಳಲ್ಲಿ 'ಎಕ್ಸಾಸ್ಟ್ ಅನಿಲ ಮರುಬಳಕೆ' (ಇಜಿಆರ್) ಮತ್ತು 'ಸೆಲೆಕ್ಟಿವ್ ಕ್ಯಾಟಲಿಸಿಕ್ ರಿಡಕ್ಷನ್ ತಂತ್ರಜ್ಞಾನ ಪರಿಚಯಿಸಿದೆ.

ಸುಮಾರು 20ಕ್ಕೂ ಹೆಚ್ಚು ವಾಣಿಜ್ಯ ವಾಹನಗಳ ತಂತ್ರಜ್ಞಾನವನ್ನು ನವೀಕರಣಗೊಳಿಸಿರುವ ಟಾಟಾ ಸಂಸ್ಥೆಯು, ಈಗಾಗಲೇ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಮೊನ್ನೆಯಷ್ಟೇ ತಮಿಳುನಾಡಿನ ಸೇಲಂನಲ್ಲಿ ನಡೆದ ಟ್ರಕ್ ವಲ್ಡ್ ಶೋನಲ್ಲಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸಿದ್ದು, ಖರೀದಿಗೆ ಲಭ್ಯವಿವೆ.

ಬಿಡುಗಡೆಗೊಂಡ ಎಲ್ಲಾ ವಾಹನಗಳು ಬಿಎಸ್4 ಹಾಗೂ ಎಎಚ್ಒ(ಆಟೋಮ್ಯಾಟಿಕ್) ತಂತ್ರಜ್ಞಾನ ಹೊಂದಿದ್ದು, ಬೆಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿವೆ.

ಭಾರತದ ಏಕೈಕ ಮೂಲ ಸಲಕರಣೆಗಳ ತಯಾರಿಕೆ(ಓಇಎಂ) ಸಂಸ್ಥೆಯಾಗಿರುವ ಟಾಟಾ, ತನ್ನ ಪ್ರಮುಖ ಮಾದರಿಗಳಲ್ಲಿ ಇಜಿಆರ್ ಮತ್ತು ಎಸ್‌ಸಿಆರ್ ತಂತ್ರಜ್ಞಾನ ಹೊಂದಿದೆ.

ವಿನೂತನ ವಾಹನಗಳ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಟಾಟಾ ವಾಣಿಜ್ಯ ವಾಹನಗಳ ವಿಭಾಗದ ಮುಖ್ಯಸ್ಥ ರಾಜೇಶ್ ಕೌಲ್, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ದಿ ಅವಶ್ಯಕತೆಯಿದೆ ಎಂದಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಟ್ರಕ್, ಲಾರಿ, ಪಿಕ್‌ಅಪ್ ವಾಹನಗಳಿಗೆ ಭಾರೀ ಬೇಡಿಕೆಯಿದ್ದು, ಕಳೆದ 6 ದಶಕಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ.

ಟಾಟಾ ನಿರ್ಮಾಣದ ವಾಹನಗಳು ಕೇವಲ ದೇಶಿಯವಾಗಿ ಅಷ್ಟೇ ಅಲ್ಲದೇ ಲ್ಯಾಟಿನ್ ಅಮೆರಿಕ, ರಷ್ಯಾ, ಆಸ್ಟ್ರೇಲಿಯಾ, ಪೂರ್ವ ಏಷಿಯಾ ಮತ್ತು ಯೂರೋಪ್ ಖಂಡಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ರಫ್ತು ವಾಹನಗಳಲ್ಲಿ ಯೂರೋ 4 ಮತ್ತು ಯುರೋ 5 ತಂತ್ರಜ್ಞಾನ ಅಳವಡಿಕೆಯಿದ್ದು, ವಿಶೇಷ ತಂತ್ರಜ್ಞಾನಗಳು ಗಮನಸೆಳೆಯುತ್ತಿವೆ.

ಒಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ತನ್ನ ವಾಣಿಜ್ಯ ವಾಹನಗಳನ್ನು ನವೀಕೃತಗೊಳಿಸುತ್ತಿರುವ ಟಾಟಾ, ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತುವಲ್ಲಿ ಕೂಡಾ ಮುಂಚೂಣಿಯಲ್ಲಿದೆ.

Read more on ಟಾಟಾ tata
English summary
Tata Motors Launches BS-IV Compliant Commercial Vehicles In Indian market.
Please Wait while comments are loading...

Latest Photos