ಮುಂದಿನ ವರ್ಷ ದೇಶದ ಮೊದಲ ಅಗ್ಗದ ಕಾರು ನ್ಯಾನೋ ಉತ್ಪಾದನೆ ಸ್ಥಗಿತ ? ಕಾರಣ ತಿಳ್ಕೊಳಿ

ಭಾರತ ದೇಶದ ಅತ್ಯಂತ ಅಗ್ಗದ ಕಾರು ಎಂದು ಖ್ಯಾತಿ ಪಡೆದಿದ್ದ ನ್ಯಾನೋ ಕಾರು ಕರೆಯಲಾಗುತ್ತದೆ, ನ್ಯಾನೋ ದೇಶದಲ್ಲೇ ಸಾರ್ವಕಾಲಿಕ ಕಡಿಮೆ ಮಾರಾಟ ಅಂಕಿಅಂಶಗಳನ್ನು ದಾಖಲಿಸಿದೆ.

Written By:

ಟಾಟಾ ಮೋಟಾರ್ಸ್ ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ತನ್ನ ಕೆಲವು ಉತ್ಪನ್ನಗಳನ್ನು ರದ್ದುಗೊಳಿಸಲು ಯೋಜನೆ ರೂಪಿಸುತಿದ್ದು, ರದ್ದುಗೊಳ್ಳುವ ಉತ್ಪನ್ನಗಳ ಪಟ್ಟಿಯಲ್ಲಿ ನ್ಯಾನೋ ಕಾರಿನ ಹೆಸರೂ ಕೂಡ ಇದೆ ಎಂಬ ಮಾತು ಕೇಳಿಬರುತ್ತಿದೆ.

ಬಹಳಷ್ಟು ಕನಸುಗಳೊಂದಿಗೆ ಬಿಡುಗಡೆಗೊಂಡು ಕಳೆದ ಅನೇಕ ವರ್ಷಗಳಿಂದ ಹೆಚ್ಚಿನ ತೊಂದರೆಗಳಿಗೆ ತುತ್ತಾದ ಭಾರತ ದೇಶದ ಅಗ್ಗದ ಕಾರು, ಬಿಡುಗಡೆ ಸಮಯದಲ್ಲಿ ಮಾಡಿದಷ್ಟೇ ಸದ್ದು ಬಿಡುಗಡೆ ನಂತರ ಸದ್ದು ಮಾಡಲಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ.

ಭಾರತದ ಪ್ರಮುಖ ಆಟೋ ತಯಾರಕ ಕಂಪನಿ ಟಾಟಾ ಮೋಟರ್ಸ್ ನ್ಯಾನೋ ಕಾರನ್ನು ನಷ್ಟದ ಹಾದಿ ಇಂದ ಲಾಭದ ಕಡೆ ಕರೆತರಲು ಬಹಳಷ್ಟು ಶ್ರಮ ಪಟ್ಟಿತ್ತಾದರೂ ಯಶ ಸಾಧಿಸಲು ವಿಫಲವಾಯಿತು.

ಎಷ್ಟೇ ಪ್ರಯತ್ನಪಟ್ಟರೂ ನ್ಯಾನೋ ಕಾರಿನ ಈಗಿನ ಪರಿಸ್ಥಿತಿ ಇಂದ ಮೇಲೆತ್ತಲು ಆಗದೆ ಕೊನೆ ಕ್ಷಣದಲ್ಲಿ ಕೈಚಲ್ಲಿ ಕುಳಿತಿದ್ದು, ಸದ್ಯ ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಯೋಚಿಸಿದೆ ಎನ್ನಲಾಗಿದೆ.

ಅದ್ದೂರಿಯಾಗಿ ಬಿಡುಗಡೆಗೊಂಡ ದಿನದಿಂದ ಇಲ್ಲಿಯವರೆಗೆ ಮಾರಾಟದಲ್ಲಿ ಚೇತರಿಕೆ ಕಾಣದ ನ್ಯಾನೋ ಕಳೆದ ತಿಂಗಳು ಮಾರ್ಚಿನಲ್ಲಿ ಅತ್ಯಂತ ಕಡಿಮೆ ಕಾರುಗಳು ಮಾರಾಟವಾಗಿ ಕಂಪನಿಯನ್ನು ನಷ್ಟದ ಕಡೆ ಎಳೆದೊಯ್ಯುತ್ತಿರುವುದಂತೂ ಸತ್ಯ.

ಟಾಟಾ ಮೋಟರ್ಸ್ ಕಂಪನಿಯು, 174 ಮಿನಿ ಕಾರುಗಳನ್ನು ಮಾತ್ರ ಮಾರಾಟ ಮಾಡಲು ಶಕ್ತವಾಗಿದೆ ಎಂದರೆ ನೀವು ನಂಬಲೇ ಬೇಕು.

ಟಾಟಾ ಮೋಟರ್ಸ್ ಕಂಪನಿಯ ನ್ಯಾನೋ ಕಾರಿಗೆ ಕಳೆದ ಹಣಕಾಸು ವರ್ಷ ಅತ್ಯಂತ ಕೆಟ್ಟ ವರ್ಷವೆನ್ನಬಹುದು, ಕಳೆದ ವರ್ಷ ಕೇವಲ 7,591 ನ್ಯಾನೋ ಕಾರುಗಳು ಮಾತ್ರ ಮಾರಾಟವಾಗಿವೆ.

ಸದ್ಯ ಕಂಪನಿ 2016-17 ಹಣಕಾಸು ವರ್ಷದಲ್ಲಿ 1,000 ನ್ಯಾನೋ ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದು, ಮುಂದಿನ ವರ್ಷ ಉತ್ಪಾದನೆಯನ್ನು ನಿಲ್ಲಿಸುವ ಸೂಚನೆ ನೀಡಿದೆ.

ನ್ಯಾನೋ ಬಗ್ಗೆ ಹೆಚ್ಚು ಅಪೇಕ್ಷೆಗಳನ್ನು ಇಟ್ಟುಕೊಳ್ಳದ ಟಾಟಾ ಮೋಟಾರ್ಸ್ ಮುಂದಿನ ತಲೆಮಾರಿನ ಉತ್ಪನ್ನಗಳ ಕಡೆ ಹೆಚ್ಚು ಕೇಂದ್ರೀಕರಿಸಿದ ಎನ್ನಲಾಗಿದೆ.

ಈ ರೀತಿ ಹೊಸ ತಲೆಮಾರಿನ ಉತ್ಪನ್ನಗಳ ಕಡೆ ಹೆಚ್ಚು ಕೇಂದ್ರೀಕರಿಸುವುದರಿಂದ ನವೀನ ರೀತಿಯ ವಿಭಾಗ ಸೃಷ್ಟಿಸಬಹುದು ಎಂಬ ನಂಬಿಕೆ ಇಟ್ಟುಕೊಂಡಿದೆ.

ಟಾಟಾ ಮೋಟಾರ್ಸ್‌ನಲ್ಲಿರುವ ಕೆಲವು ಮಾದರಿಗಳನ್ನು ತೆಗೆದು ಹಾಕುವ ಅಥವಾ ಇರುವ ಮಾದರಿಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸಿ ಬಿಡುಗಡೆಗೊಳಿಸುವ ಇರಾದೆ ಕಂಪನಿ ಇಟ್ಟುಕೊಂಡಿದೆ.

2009ರಲ್ಲಿ ಬಿಡುಗಡೆಗೊಂಡ ನ್ಯಾನೋ ಮುಂದಿನ ವರ್ಷ ವಾಹನ ಮಾರುಕಟ್ಟೆಯಲ್ಲಿ ಹತ್ತು ವರ್ಷ ಪೂರ್ಣಗೊಳಿಸಲಿದೆ, ಈ ಒಂದು ಕಾರಣಕ್ಕೆ ಕಂಪನಿಯು ಮುಂದಿನ ವರ್ಷ ಕಾರು ಉತ್ಪಾದನೆಯನ್ನು ಮುಂದುವರೆಸಲು ನಿಶ್ಚಯಸಿದೆ ಎನ್ನಲಾಗಿದೆ.

ಕೇವಲ ರೂ. 1 ಲಕ್ಷ ಬೆಲೆ ಬೆಲೆಚೀಟಿಯೊಂದಿಗೆ ಮಧ್ಯಮ ವರ್ಗದ ಖರೀದಿದಾರರನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಂಡ ಈ ನ್ಯಾನೋ ಕಾರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು.

ಆದರೆ ಹಲವು ತಾಂತ್ರಿಕ ತೊಂದರೆಗಳನ್ನು ಎದುರಿಸಿದ ಈ ಕಾರಿನ ಬಗ್ಗೆ ಪತ್ರಿಕೆಗಳಲ್ಲಿ ವ್ಯಂಗ ಮಾಡಲಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಟ್ರೊಲ್ ಮಾಡಲಾಯಿತು ಎಂಬುದನ್ನು ನಾವಿಲ್ಲಿ ಮರೆಯಲಾಗುವುದಿಲ್ಲ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

English summary
Read in Kannada about tata Nano Records all time low Sales figures India. Get more details nano car's sales report, history, specifications and more.
Please Wait while comments are loading...

Latest Photos

LIKE US ON FACEBOOK