ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕ ಹೊಚ್ಚ ಹೊಸ ಟಾಟಾ ನೆಕ್ಸಾನ್..!

Written By:

ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸಂಸ್ಥೆಯು ಹೊಸ ಮಾದರಿಯ ನೆಕ್ಸಾನ್ ಕಾರು ಪರಿಚಯಿಸುತ್ತಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಳ್ಳುವ ಮೂಲಕ ಕುತೂಹಲ ಹುಟ್ಟಿಸಿದೆ.

ಹೊಸ ಕಾರು ಮಾದರಿ ನೆಕ್ಸಾನ್ ಎಸ್‌ಯುವಿ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಟಾಟಾ, ಕಾರಿನ ಇಂಧನ ಕಾರ್ಯಕ್ಷಮತೆ ಹಾಗೂ ಕಾರಿನ ಸುರಕ್ಷಾ ವಿಧಾನಗಳ ಬಗೆಗೆ ಪರೀಕ್ಷೆ ನಡೆಸುತ್ತಿದೆ.

ಮುಂಬೈ ಮತ್ತು ಪುಣೆ ಮಧ್ಯೆ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ನಡೆದಿದ್ದು, ಈ ವೇಳೆ ಡ್ರೈವ್ ಸ್ಪಾರ್ಕ್ ಟೀಂಗೆ ಹೊಸ ಕಾರಿನ ಎಕ್ಸ್‌ಕ್ಯೂಸಿವ್ ಚಿತ್ರಗಳು ಲಭ್ಯವಾಗಿವೆ.

ಈ ಹಿಂದೆ 2016ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ನೆಕ್ಸಾನ್ ಮಾದರಿಯನ್ನು ಪ್ರದರ್ಶನ ಮಾಡಿದ್ದ ಟಾಟಾ, ಇದೀಗ ಅದೇ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ನೆಕ್ಸಾನ್ ಕಾರು 1.2-ಲೀಟರ್ ರಿವೋಟ್ರೋನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ತಕ್ಕಂತೆ ನೆಕ್ಸಾನ್ ವಿನ್ಯಾಸಗೊಂಡಿದ್ದು, ಮಾರುತಿ ಸುಜುಕಿ ವಿತ್ರಾ ಬ್ರೆಝಾ, ಫೋರ್ಡ್ ಎಕೋ ಸ್ಪೋರ್ಟ್ ಮತ್ತು ಮಹೀಂದ್ರಾ ಟಿಯುಟಿ 300 ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.

ಈ ಮೂಲಕ ಎಸ್‌ಯುವಿ ಮಾದರಿಗಳಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಲಿರುವ ಟಾಟಾ, ಅತ್ಯುತ್ತಮ ಬೆಲೆಗಳಲ್ಲಿ ನೆಕ್ಸಾನ್ ಕಾರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

English summary
Read in Kannada about Tata Nexon Spotted Testing.
Please Wait while comments are loading...

Latest Photos