ಕಾರು ಮಾರಾಟದಲ್ಲಿ ಹೋಂಡಾ ಹಿಂದಿಕ್ಕಿ ನಾಲ್ಕನೇ ಸ್ಥಾನ ಪಡೆದ ಟಾಟಾ..!

Written By:

ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಟಾಟಾ ಸಂಸ್ಥೆಯು, ಕಾರು ಮಾರಾಟದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಟಿಗೋರ್ ಹಾಗೂ ಟಿಯಾಗೋ ಕಾರು ಮಾದರಿಗಳ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ್ದ ಟಾಟಾ ಸಂಸ್ಥೆಯು, 2017ರ ಮೇ ಅವಧಿಯಲ್ಲಿ ಕಾರು ಮಾರಾಟ ಪ್ರಮಾಣದಲ್ಲಿ ಹೋಂಡಾ ಹಿಂದಿಕ್ಕಿ ನಾಲ್ಕನೇ ಸ್ಥಾನ ಪಡೆದಿದೆ.

ಮೇ ಅವಧಿಯಲ್ಲಿ ಒಟ್ಟು 12,499 ಯೂನಿಟ್‌ಗಳನ್ನು ಮಾರಾಟ ಮಾಡಿರುವ ಟಾಟಾ ಮೋಟಾರ್ಸ್, ಹೋಂಡಾ ಕಾರುಗಳಿಂತ ಶೇ.32 ಪ್ರಗತಿ ಕಂಡಿದೆ.

ಸತತ ಐದು ತಿಂಗಳ ಅವಧಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಮುಂದುವರಿದ್ದ ಹೋಂಡಾ ಕಾರು ಮಾರಾಟವನ್ನು ಹಿಂದಿಕ್ಕಿರುವ ಟಾಟಾ, ಟಿಗೋರ್ ಮತ್ತು ಟಿಯಾಗೋ ಅತಿಹೆಚ್ಚು ಮಾರಾಟ ಮೂಲಕ ಸಾಕಷ್ಟು ಪ್ರಗತಿ ಕಂಡಿದೆ.

ಟಾಟಾ ಜೊತೆ ತೀವ್ರ ಪೈಪೋಟಿ ನಡೆಸಿದ್ದ ಹೋಂಡಾ, ಮೇ ಅಂತ್ಯಕ್ಕೆ ಕೇವಲ 11,278 ಯಾನಿಟ್‌ಗಳನ್ನು ಮಾತ್ರ ಸಾಧ್ಯವಾಗಿದ್ದು, ಡಬ್ಯುಆರ್ ಕಾರು ಮಾರಾಟದಲ್ಲಿ ಅತಿಹೆಚ್ಚು ಬೇಡಿಕೆ ಸೃಷ್ಠಿಸಿತ್ತು.

ದೇಶಿಯವಾಗಿ ಕಾರು ಮಾರಾಟ ಹೆಚ್ಚಳ ಮಾಡಿರುವ ಟಾಟಾ ಸಂಸ್ಥೆಯು, ಮಧ್ಯಮ ವರ್ಗಗಳನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವ ಮೂಲಕ ಹೋಂಡಾ ಮತ್ತು ಮಹೀಂದ್ರಾ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದೆ.

ಇನ್ನು ಪ್ರಥಮ ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಮೇ ಅಂತ್ಯಕ್ಕೆ 1,30,248 ಯೂನಿಟ್ ಮಾರಾಟ ಮಾಡುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದೆ.

ಆದ್ರೆ ಕಾರು ಮಾರಾಟದಲ್ಲಿ ಪ್ರಗತಿ ಕಂಡಿರುವ ಹ್ಯುಂಡೈ ಸಂಸ್ಥೆಯು, ಮಾರುತಿ ಸುಜುಕಿಗಿಂತಲೂ ಶೇ.4ರಷ್ಟು ಪ್ರಗತಿ ಕಾಣುವ ಮೂಲಕ 42 ಸಾವಿರ ಯೂನಿಟ್ ಮಾರಾಟ ಮಾಡಿದೆ.

ಒಟ್ಟಿನಲ್ಲಿ ದೇಶಿಯವಾಗಿ ಕಾರು ಉತ್ಪಾದನೆಯಲ್ಲಿ ತೀವ್ರ ಪೈಪೋಟಿ ನಡೆಸಿರುವ ಟಾಟಾ ಸಂಸ್ಥೆಯು, ಮುಂಬರುವ ದಿನಗಳಲ್ಲಿ ಮಹೀಂದ್ರಾ ಮತ್ತು ಹ್ಯುಂಡೈ ಕಾರು ಮಾರಾಟವನ್ನು ಹಿಂದಿಕ್ಕುವ ನೀರಿಕ್ಷೆಯಲ್ಲಿದೆ.

English summary
Read in Kannada about Tata Motors Overtakes Honda To Become 4th Largest Carmaker In India.
Please Wait while comments are loading...

Latest Photos