ಎಎಂಟಿ ಟಿಯಾಗೊ ಕಾರಿನ ಬಗ್ಗೆ ಸೋರಿಕೆಯಾದ ಮಾಹಿತಿಯಲ್ಲಿ ಇರೋದಾದ್ರೂ ಏನು ?

Written By:

ಕಳೆದ ವರ್ಷ ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಈಗಲೂ ಸಹ ಅತಿ ಹೆಚ್ಚು ಬೇಡಿಕೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಕಾರು ಟಾಟಾ ಕಂಪನಿಯ ಟಿಯಾಗೊ.

ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಟಿಯಾಗೊ ಕಾರಿನ ಮತ್ತೊಂದು ಆವೃತಿ ಟಿಯಾಗೊ ಎಎಂಟಿ ಕಾರಿನ ಗುಣ ವಿಶೇಷತೆಗಳು ರಹಸ್ಯವಾಗಿಟ್ಟಿತ್ತು, ಈಗ ಬಿಡುಗಡೆಯಾಗಿರುವ ಚಿತ್ರಗಳ ಮಾಹಿತಿ ಸರಿಯೇ ? ತಪ್ಪೇ ? ಎಂಬುದನ್ನು ಕಾರು ಬಿಡುಗಡೆಯ ನಂತರವೇ ತಿಳಿಯಲಿದೆ.

ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ತಂತ್ರಜ್ಞಾನ ಹೊಂದಿರುವ ಈ ಟಿಯಾಗೊ ವಾಹನದ ಈ ಮಾಹಿತಿ ಅಂತರ್ಜಾಲದಲ್ಲಿ ಸೋರಿಕೆ.

ಕಂಪನಿಯ ಪ್ರಯಾಣಿಕ ವಾಹನದ ತೊಂದರೆಗಳನ್ನು ಕಂಡುಹಿಡಿಯುವ ತಂತ್ರಾಂಶದಿಂದ(ಟಿಡಿಎಸ್) ಈ ಮಾಹಿತಿ ಹೊರಬಿದ್ದಿದೆ.

ಸಿಕ್ಕಿರುವ ಮಾಹಿತಿ ಪ್ರಕಾರ ಎಕ್ಸ್.ಟಿ ಮತ್ತು ಎಕ್ಸ್.ಝೆಡ್ ಎಂಬ ಎರಡು ಮಾದರಿಗಳಲ್ಲಿ ಈ ಕಾರು ಹೊರಬರುತ್ತಿದ್ದು, 1.2-ಲೀಟರ್ ರೇವೆಟ್ರೋನ್ ಪೆಟ್ರೋಲ್ ಎಂಜಿನ್ ಹೊಂದಿರುತ್ತದೆ. ಈ ಮಾದರಿಯ ಡೀಸೆಲ್ ಆವೃತಿಯೂ ಪೆಟ್ರೋಲ್ ಕಾರಿನ ಮಾರುಕಟ್ಟೆಯನ್ನು ಪರಿಶೀಲಿಸಿ ಬಿಡುಗಡೆ ಮಾಡಲು ಕಂಪನಿ ಉದ್ದೇಶಿಸಿದ

ಇಟಲಿಯ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯಿಂದ ಆಮದು ಮಾಡಲಾಗುವ ಎಫ್-ಟ್ರಾನಿಕ್ 5 ಸ್ಪೀಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಹೊಂದಿರಲಿದೆ.

1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, ಇದು 114 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಈಗಿರುವ ಟಿಯಾಗೊ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳನ್ನು ಹೊಂದಿದೆ. ಈಗಿರುವ ಪೆಟ್ರೋಲ್ ಮಾದರಿಗೆ ಟಾಟಾ ಕಂಪನಿಯ ರೇವೆಟ್ರೋನ್ ಎಂಜಿನ್ ಇರಿಸಲಾಗಿದ್ದು, ಡೀಸೆಲ್ ಮಾದರಿಗೆ ಟಾಟಾ ಕಂಪನಿಯ ರೆವೊಟೊರ್ಕ್ ಎಂಜಿನ್ ಅಳವಡಿಸಲಾಗಿದೆ.

ಸದ್ಯದ ಮಾಹಿತಿ ಪ್ರಕಾರ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಟಿಯಾಗೊ ಕಾರು ಈಗಿರುವ ಕಾರಿಗಿಂತ ಹೆಚ್ಚು ಕಡಿಮೆ 30,000 ದಿಂದ 50,000 ರೂ ಹೆಚ್ಚಿನ ಬೆಲೆ ಇರಲಿದೆ ಎನ್ನಲಾಗಿದೆ.

ನೀವೇನಾದರೂ ಹ್ಯಾಚ್-ಬ್ಯಾಕ್ ಕಾರನ್ನು ಕೊಳ್ಳುವ ಯೋಚನೆಯಲ್ಲಿ ಇದ್ದರೆ, ಹೊಸ 2017 ಸ್ವಿಫ್ಟ್ ಕಾರಿನ ಮೇಲೆ ಕಣ್ಣಾಡಿಸುವುದು ಒಳಿತು, ಸ್ವಿಫ್ಟ್ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

Click to compare, buy, and renew Car Insurance online

Buy InsuranceBuy Now

Read more on ಟಾಟಾ tata
Story first published: Tuesday, February 21, 2017, 15:08 [IST]
English summary
The Tata Tiago AMT variant will come in petrol model only, and the diesel model is expected later during the products' life cycle.
Please Wait while comments are loading...

Latest Photos