ಕಾರು ಮತ್ತು ಲಾರಿ ನಡುವೆ ಡಿಕ್ಕಿ- ಭೀಕರ ಅಪಘಾತದಲ್ಲಿ ಟಾಟಾ ಟಿಯಾಗೋ ಪೀಸ್ ಪೀಸ್..!!

Written By:

ಓವರ್‌ಟೇಕ್ ಮಾಡಲು ಹೋಗಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಚೆನ್ನೈ ಹೊರವಲಯದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಘಟನೆ ನಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.

ಲಾರಿ ಡಿಕ್ಕಿ ಹೊಡೆದ ತೀವ್ರತೆಗೆ ಟಾಟಾ ಟಿಯಾಗೋ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಮೇಲ್ಭಾಗವೇ ಕಿತ್ತು ಹೊಗಿದೆ. ಆದ್ರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಲಾರಿ ಡಿಕ್ಕಿ ಹೊಡೆದ ತೀವ್ರತೆಗೆ ಕಾರು ಪೀಸ್ ಪೀಸ್ ಆಗಿದ್ದು, ಕಾರಿನ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಜಖಂ ಆಗಿದೆ. ಸದ್ಯ ಚೆನ್ನೈ ನೊಂದಣಿಯ ಕಾರು ಎಂದು ತಿಳಿದುಬಂದಿದ್ದು, ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿದೆ.

ಆದ್ರೆ ಕಾರಿನಲ್ಲಿದ್ದ ಸುರಕ್ಷಾ ವಿಧಾನಗಳಿಂದಾಗಿಯೇ ಅತಿವೇಗದಲ್ಲಿದ್ದರು ಮೂವರ ಪ್ರಾಣಕ್ಕೆ ಯಾವುದೇ ತೊಂದರೆಯಾಗಿಲ್ಲ. ಎಬಿಎಸ್ ಮತ್ತು ಹೆಚ್ಚುವರಿ ಏರ್‌ಬ್ಯಾಗ್ ಸೌಲಭ್ಯದಿಂದಾಗಿ ಭೀಕರ ಅಪಘಾತದಲ್ಲೂ ಮೂವರು ಬಚಾವ್ ಆಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಮೀರಿ ಅತಿವೇಗವಾಗಿ ಕಾರು ಚಾಲನೆ ಮಾಡಿದ್ದೇ ಘಟನೆ ಕಾರಣವಾಗಿದೆ. ಇನ್ನು ಡಿಕ್ಕಿ ರಭಸಕ್ಕೆ ಲಾರಿಯ ಹಿಂಭಾಗವು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿದ್ದು, ಅಪಘಾತದ ತೀವ್ರತೆಗೆ ಓರ್ವ ಸ್ಥಿತಿ ಗಂಭೀರವಾಗಿದೆ. ಆದರೂ ಇಂತಹ ಭೀಕರ ಅಪಘಾತದಲ್ಲೂ ಆ ಮೂವರು ಉಳಿದಿದ್ದೆ ಹೆಚ್ಚು.

ಇನ್ನೊಂದು ಪ್ರಮುಖ ವಿಚಾರವೆಂದರೇ ಅಪಘಾತದಲ್ಲಿ ಜಖಂಗೊಂಡ ಟಿಯಾಗೋ ಕಾರು ಕಳೆದ ತಿಂಗಳುವಷ್ಟೇ ಬಿಡುಗಡೆಗೊಂಡಿತ್ತು. ಕಾರು ಬಿಡುಗಡೆಯ ನಂತರ ಇದು ಮೊದಲ ಅಪಘಾತ ಎಂದು ತಿಳಿದು ಬಂದಿದೆ.

ಒಂದು ವೇಳೆ ಅಗತ್ಯ ಸುರಕ್ಷಾ ವಿಧಾನ ಇಲ್ಲದೇ ಹೊದಲ್ಲಿ ಅಪಘಾತದಲ್ಲಿ ಆ ಮೂವರು ಪ್ರಾಣ ಕಳೆದುಕೊಳ್ಳಬೇಕಿತ್ತು. ಆದ್ದರಿಂದ ಕಾರು ಖರೀದಿಗೂ ಮುನ್ನ ಕಾರಿನಲ್ಲಿರುವ ಅಗತ್ಯ ಸುರಕ್ಷಾ ವಿಧಾನಗಳನ್ನು ತಿಳಿದುಕೊಂಡು ವಾಹನ ಖರೀದಿ ಮಾಡುವುದು ಒಳಿತು.

ರಾಜ್ಯದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ ಹೊಚ್ಚ ಹೊಸ ಟಿಗೋರ್ ಕಾರಿನ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಫೋಟೋ ಗ್ಯಾಲರಿ ಕ್ಲಿಕ್ ಮಾಡಿ.

Read more on ಅಪಘಾತ accident
Story first published: Friday, April 7, 2017, 14:17 [IST]
English summary
Tata Tiago first crash reported in tamilnadu.
Please Wait while comments are loading...

Latest Photos