ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ ಮೋಟರ್ಸ್..!!

ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡು ಭರ್ಜರಿ ಮಾರಾಟವಾಗುತ್ತಿರುವ ಟಿಯಾಗೋ ಮಾದರಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಟಾಟಾ ಹೊಸ ಯೋಜನೆ ರೂಪಿಸಿದೆ.

By Praveen

ಭಾರತೀಯ ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ಕಾರು ಮತ್ತು ಬೈಕ್‌ಗಳಿಗೆ ಸಾಕಷ್ಟು ಬೇಡಿಕೆ ಸೃಷ್ಠಿಯಾಗುತ್ತಿದ್ದು, ಇದೀಗ ಟಾಟಾ ಟಿಯಾಗೋ ಕಾರು ಕೂಡಾ ಎಲೆಕ್ಟ್ರಿಕ್ ವ್ಯವಸ್ಥೆಯೊಂದಿಗೆ ಸಿದ್ಧಗೊಳ್ಳುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಗಳು, ಸದ್ಯದಲ್ಲೇ ಟಿಯಾಗೋ ಮಾದರಿಯು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಲಭ್ಯವಿರಲಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಮೊಟ್ಟ ಮೊದಲ ಬಾರಿಗೆ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ಮಾದರಿಯನ್ನು ಉತ್ಪಾದನೆ ಮಾಡಲು ಯೋಜನೆ ರೂಪಿಸಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಭರವಸೆ ಹುಟ್ಟುಹಾಕುವ ನೀರಿಕ್ಷೆಯಲ್ಲಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಮಹೀಂದ್ರಾ ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಸ್ಪರ್ಧೆ ಒಡ್ಡಲು ಹೊಸ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮಾಡುತ್ತಿರುವ ಟಾಟಾ, ಇದಕ್ಕಾಗಿ ವಿಶೇಷ ಆಫರ್‌ಗಳನ್ನು ಕೂಡಾ ಘೋಷಣೆ ಮಾಡಲಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಇನ್ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಮಾದರಿ ಜೊತೆ ಜೊತೆಗೆ ಎಲೆಕ್ಟ್ರಿಕ್ ಕಾರು ಕೂಡಾ ಲಭ್ಯವಿರಲಿದ್ದು, ಜಿಎಸ್‌ಟಿ ಜಾರಿಗೆ ಬರುತ್ತಿರುವ ಹಿನ್ನೆಲೆ ಶೇ.12ರಷ್ಟು ತೆರಿಗೆ ಕಡಿತಗೊಳಿಸಲಾಗುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಿಯಾಗೋ ಮಾದರಿಯೂ, 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.05-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಪರಿಸರ ಮಾಲಿನ್ಯ ತಡೆ ಉದ್ದೇಶ ಹಿನ್ನೆಲೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಕಾರು ಉತ್ಪಾದನೆ ಹೆಚ್ಚಿಸಲು ಹೊಸ ಯೋಜನೆ ರೂಪಿಸಿದ್ದು, ತೆರಿಗೆಯಲ್ಲಿ ವಿನಾಯ್ತಿ ನೀಡುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಇದೇ ಕಾರಣಕ್ಕಾಗಿಯೇ ವಿಶ್ವದ ಪ್ರಮುಖ ಕಾರು ಉತ್ಪಾದಕರು ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಕಾರು ಮಾದರಿಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆ ರೂಪಿಸುತ್ತಿವೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಹೊಸ ಯೋಜನೆ ಕೈಗೊಂಡಿರುವ ಟಾಟಾ ಸಂಸ್ಥೆಯು, ಹೊಸದಾಗಿ ಅಭಿವೃದ್ಧಿಗೊಳ್ಳುವ ಎಲ್ಲಾ ಮಾದರಿಗಳನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸಲಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಟಾಟಾ..!!

ಒಟ್ಟಿನಲ್ಲಿ ಟಾಟಾ ಎಲೆಕ್ಟ್ರಿಕ್ ಮಾದರಿಯೂ ಭಾರತೀಯ ಮಾರುಕಟ್ಟೆಯಲ್ಲಿ ಕೆಲವೇ ದಿನಗಳಲ್ಲಿ ಲಭ್ಯವಿರಲಿದ್ದು, ಪ್ರಸ್ತುತ ಎಲೆಕ್ಟ್ರಿಕ್ ಕಾರುಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ನೀರಿಕ್ಷೆಯಲ್ಲಿವೆ.

Most Read Articles

Kannada
English summary
Read in Kannada about Tata Motors Working On Electric car.
Story first published: Wednesday, May 31, 2017, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X