ಭಾರತೀಯ ಗ್ರಾಹಕರ ಮನಗೆದ್ದ ಟಾಪ್ ಹತ್ತು ಕಾರುಗಳು ಯಾವವು ಗೊತ್ತಾ?

Written By:

ಬಹುತೇಕ ಭಾರತೀಯ ಗ್ರಾಹಕರು ವಾಹನ ಖರೀದಿಸುವಾಗ ಬೆಲೆ ಮತ್ತು ಮೈಲೇಜ್ ವಿಚಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದು ಸಾಮಾನ್ಯ. ಹೀಗಾಗಿ ಕಾರು ಉತ್ಪಾದನಾ ಸಂಸ್ಥೆಗಳು ಕೂಡಾ ಇದೆ ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತವೆ. ಇಂತಹ ಪ್ರಮುಖ ಹತ್ತು ಕಾರು ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಟಾಪ್ ಹತ್ತು ಕಾರುಗಳ ಮಾಹಿತಿ ಇಲ್ಲಿದೆ.

10. ರೆನಾಲ್ಟ್ ಡಸ್ಟರ್
ಪ್ರಥಮ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಎಡಬ್ಲ್ಯುಡಿ ತಂತ್ರಜ್ಞಾನ ಪರಿಚಯಿಸಿದ್ದ ರೆನಾಲ್ಟ್, ವಿನೂತನ ಡಸ್ಟರ್ ಕಾರು ಮಾರಾಟದಲ್ಲಿ ಭಾರೀ ಯಶಸ್ವಿ ಕಂಡಿದೆ. ಕಂಪ್ಯಾಕ್ಟ್ ವಿನ್ಯಾಸ ಹೊಂದಿರುವ ಈ ಮಾದರಿಯು, ಎಸ್‍‌ಯುವಿ ವಿಭಾಗದಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟಗೊಂಡಿವೆ.

09. ಮಹೀಂದ್ರಾ ಸ್ಕಾರ್ಪಿಯೋ ಹೈಬ್ರಿಡ್
ಹೈಬ್ರಿಡ್ ವಿಭಾಗದಲ್ಲಿ ಸಿದ್ಧಗೊಂಡಿರುವ ಮಹೀಂದ್ರಾ ಹೊಚ್ಚ ಹೊಸ ಸ್ಕಾರ್ಪಿಯೋ ಕಾರು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆಯೂ ಸತತವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಮಹೀಂದ್ರಾ, ಈ ಬಾರಿ ಹೈಬ್ರಿಡ್ ವಾಹನ ಮೂಲಕ ಮತ್ತೆ ಸದ್ದುಮಾಡಿದೆ.

08. ಇಸುಜು ಡಿ ಮ್ಯಾಕ್ಸ್ ವಿ ಕ್ರಾಸ್
ಆಪ್-ರೋಡಿಂಗ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಇಸುಜು ಡಿ ಮ್ಯಾಕ್ಸ್ ವಿ ಕ್ರಾಸ್ ಕಾರು ಈ ಬಾರಿ ಟಾಪ್ ಹತ್ತು ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪಿಕ್-ಅಪ್ ಟ್ರಕ್ ವಿಭಾಗದಲ್ಲೂ ಇಸುಜು ಡಿ ಮ್ಯಾಕ್ಸ್ ವಿ ಕ್ರಾಸ್ ಹವಾ ಜೋರಾಗಿದೆ.

07. ಮಹೀಂದ್ರಾ ಕೆಯುವಿ 100
ಮಹೀಂದ್ರಾ ಸಂಸ್ಥೆಯ ಮತ್ತೊಂದು ಪ್ರಮುಖ ಮಾದರಿ ಕೆಯುವಿ 100 ಈ ಬಾರಿ ಬೆಲೆ ಮತ್ತು ವಿನೂತನ ವೈಶಿಷ್ಟ್ಯತೆಗಳಿಂದಾಗಿ ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಕೆಯುವಿ 100 ಭಾರೀ ಪ್ರಮಾಣದಲ್ಲಿ ಮಾರಾಟಗೊಂಡಿದೆ.

06. ಟೊಯೊಟಾ ಇನ್ನೋವಾ ಕ್ರೇಸ್ಟಾ
ವಾಣಿಜ್ಯ ಬಳಕೆಗಾಗಿ ಅತಿಹೆಚ್ಚು ಬೇಡಿಕೆ ಹೊಂದಿರುವ ಟೊಯೊಟಾ ಇನ್ನೋವಾದ ಕ್ರೇಸ್ಟಾ ಮಾದರಿಯೂ ಗ್ರಾಹಕರ ನೆಚ್ಚಿನ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದರಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಏರ್‌ಬ್ಯಾಗ್ ವ್ಯವಸ್ಥೆಯಿದೆ.

05. ಮಾರುತಿ ಸುಜುಕಿ ಸಿಯಾಜ್ (ಎಸ್‌ಹೆಚ್‌ವಿಎಸ್)
ಮೈಲೇಜ್ ವಿಚಾರವಾಗಿ ಕಾರು ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ ಸಿಯಾಜ್ ಎಸ್‌ಹೆಚ್‌ವಿಎಸ್ ಮಾದರಿಯೂ, ಈ ಬಾರಿ ಅತಿಹೆಚ್ಚು ಮಾರಾಟಗೊಂಡ ಕಾರು ಮಾದರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಎಲೆಕ್ಟ್ರಲ್ ಎಂಜಿನ್ ಹೊಂದಿದ ಹಿನ್ನೆಲೆ ಟ್ಯಾಕ್ ರಹಿತ ಮಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಇದು ಖರೀದಿದಾರರಿಗೆ ವರದಾನವಾಗಿದೆ.

04. ಮಾರುತಿ ಸುಜುಕಿ ಸೆಲೆರಿಯೊ ಎಎಂಟಿ
ಎಎಂಟಿ ಮಾದರಿಗಳಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಸೆಲೆರಿಯೊ ಆವೃತ್ತಿಯು, ಈ ಬಾರಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಡಿಮೆ ದರದಲ್ಲಿ ಎಎಂಟಿ ವ್ಯವಸ್ಥೆ ಹೊಂದಿದ ಕಾರು ಇದಾಗಿದ್ದು, ಗ್ರಾಹಕರ ಮನಗೆದ್ದಿದೆ.

03. ಮಾರುತಿ ಸುಜುಕಿ ಬಲೆನೊ
ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರೋ ಮಾರುತಿ ಸುಜುಕಿ ಸಂಸ್ಥೆಯು, ತನ್ನ ವಿವಿಧ ಮಾದರಿಗಳಲ್ಲಿ ವಿನೂತನ ತಂತ್ರಜ್ಞಾನ ಪರಿಚಯಿಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಮಾಡಿದೆ. ಅಂತೆಯೇ ಬಲೆನೊ ಮಾದರಿ ಕೂಡಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ.

02. ಮಾರುತಿ ಸುಜುಕಿ ಇಗ್ನಿಸ್
ವಿಶಿಷ್ಟ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಮಾರುತಿ ಸುಜುಕಿ ಇಗ್ನಿಸ್ ಆವೃತ್ತಿಯೂ, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದವರ ನೆಚ್ಚಿನ ಕಾರುಗಳ ಆಯ್ಕೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕಡಿಮೆ ಬೆಲೆಯಲ್ಲಿ ವಿನೂತನ ವೆಶಿಷ್ಟ್ಯತೆಗಳನ್ನು ಹೊಂದಿರುವ ಕಾರು ಇದಾಗಿದ್ದು, ಆಯ್ಕೆಗೂ ಅರ್ಹವಾಗಿದೆ.

01. ರೆನಾಲ್ಟ್ ಕ್ವಿಡ್
ಹೊಸ ವಿನ್ಯಾಸದೊಂದಿಗೆ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಸಿದ್ಧಗೊಂಡಿದ್ದ ರೆನಾಲ್ಟ್ ಕ್ವಿಡ್ ಮಾದರಿಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದವರ ನೆಚ್ಚಿನ ವಾಹನವಾಗಿ ಹೊರಹೊಮ್ಮಿದೆ. ಕಡಿಮೆ ಬೆಲೆಗಳಲ್ಲಿ ಹೊಚ್ಚ ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ಈ ಮಾದರಿಯೂ, ಪ್ರಮುಖ ಕಾರು ಸಂಸ್ಥೆಗಳಿಗೆ ತೀವ್ರ ಸ್ಪರ್ಧೆ ಒಡ್ಡಿದೆ.

Read more on ಟಾಪ್ 10 top 10
Story first published: Tuesday, March 28, 2017, 12:17 [IST]
English summary
With the change in the global automotive trend, the Indian automakers are introducing new features on their vehicles. Here are the top 10 game changing cars and SUVs in India.
Please Wait while comments are loading...

Latest Photos