ಬಹುನಿರೀಕ್ಷಿತ ಟೊಯೊಟಾ ಕರೊಲ್ಲಾ ಆಲ್ಟಿಸ್ 2017 ಫೇಸ್ ಲಿಫ್ಟ್ ಕಾರು ಭಾರತದಲ್ಲಿ ಬಿಡುಗಡೆ

Written By:

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ನೀವೇ ಹೇಳಿ. ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿರುವ ಈ ಕಂಪನಿ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲು ಮತ್ತೆ ತನ್ನ ಹೊಸ ಕಾರಿನೊಂದಿಗೆ ಬಂದಿದೆ.

ಹೌದು, ಜಪಾನ್ ಮೂಲದ ವಾಹನ ತಯಾರಿಕಾ ಸಂಸ್ಥೆ ಟೊಯೊಟಾ ಕಿರ್ಲೊಸ್ಕರ್ ಮೋಟರ್, ಹೊಸ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಟೊಯೊಟಾ ಕರೊಲ್ಲಾ ಆಲ್ಟಿಸ್ ಫೇಸ್ ಲಿಫ್ಟ್ ಕಾರು ಬಿಡುಗಡೆಗೊಳಿಸಿದ್ದು, ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿರುವ ಟೊಯೊಟಾ ಕಿರ್ಲೊಸ್ಕರ್ ಕಂಪನಿಗೆ ಮತ್ತಷ್ಟು ಬಲವರ್ಧನೆಗೊಳಿಸಲಿದೆ.

ಫೇಸ್ ಲಿಫ್ಟ್ ಕರೊಲ್ಲಾ ಆಲ್ಟಿಸ್ ಕಾರು 16 ಇಂಚಿನ ಅಲಾಯ್ ಚಕ್ರಗಳನ್ನು, ಇದರಿಂದಾಗಿ ಈ ಕಾರಿಗೆ ಹೆಚ್ಚಿನ ಮಟ್ಟದ ಹಿಡಿತ ಹೊಂದಿರಲಿದ್ದು, ಕಾರು ಉಲ್ಟಾ ಆಗುವ ಪ್ರಮಾಣ ಕಡಿಮೆ ಎನ್ನಬಹುದು.

ಈ ಹೊಸ ಕರೊಲ್ಲಾ ಆಲ್ಟಿಸ್ ಕಾರಿನ ಮುಂಭಾಗದಲ್ಲಿ ನವೀನ ಮಾದರಿಯ ಗ್ರಿಲ್ ಪಡೆಯಲಿದ್ದು, ಎಂದಿನಂತೆ ಎಲ್ಇಡಿ ಕ್ಲಸ್ಟರ್ ಹೊಂದಿರುವ ಹೆಡ್ ಲ್ಯಾಂಪ್ ಹೊಂದಿರಲಿದೆ.

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯ ಈ ಹೊಸ ಕಾರು ಹಿಂದಿನ ಆವೃತ್ತಿಗೆ ಹೋಲಿಸಿದರೆ ಸಂಪೂರ್ಣ ಹೊಸತನದ ಆಕ್ರಮಣಕಾರಿ ತಾಜಾ ವಿನ್ಯಾಸವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸದ್ಯ ಬಿಡುಗಡೆಗೊಂಡಿರುವ ಪೆಟ್ರೋಲ್ ಆವೃತ್ತಿಯ ಹೊಸ ಕರೊಲ್ಲಾ ಆಲ್ಟಿಸ್ ಕಾರಿನ ಬೆಲೆ ರೂ.15.87 ರಿಂದ 19.91 ಲಕ್ಷ ಎಕ್ಸ್ ಶೋರೂಂ (ದೆಹಲಿ) ನಿಗಧಿಪಡಿಸಲಾಗಿದೆ.ಹೊಸ ಕರೊಲ್ಲಾ ಆಲ್ಟಿಸ್ ಡೀಸೆಲ್ ಆವೃತ್ತಿ ಕಾರಿನ ಬೆಲೆ ರೂ. 17.36 ಲಕ್ಷದಿಂದ 19.05 ಲಕ್ಷ (ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯ ಈ ಹೊಸ ಕಾರು 1.8-ಲೀಟರ್ ಹೊಂದಿರುವ ಡ್ಯುಯಲ್ ವಿವಿಟಿ-ಪೆಟ್ರೋಲ್ ಎಂಜಿನ್ 173 ಎನ್ಎಂ ತಿರುಗುಬಲದಲ್ಲಿ 138 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇನ್ನು,1.4 ಲೀಟರಿನ ಡೀಸೆಲ್ ಎಂಜಿನ್ 205ಎನ್ಎಂ ತಿರುಗುಬಲದಲ್ಲಿ 88 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಶಕ್ತಿ ಹೊಂದಿದೆ.

ಕಾರಿನ ಒಳಭಾಗದಲ್ಲಿರುವ ಡ್ಯಾಶ್ ಬೋರ್ಡ್ ಮೃದುವಾದ ಸ್ಪರ್ಶ ಹೊಂದಿರಲಿದ್ದು, ಮತ್ತು ಸಲಕರಣೆ ಇಡುವ ಸ್ಥಳ ಹೊಸ ವಿನ್ಯಾಸ ಪಡೆದುಕೊಂಡಿದೆ. ಈ ಹೊಸ ಕಾರು 1.8-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, ನಿಮಗೆ ಬೇಕಾದ ಆವೃತಿಯನ್ನು ಆರಿಸಿಕೊಳ್ಳಬಹುದಾಗಿದೆ.

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯ ಡೈರೆಕ್ಟರ್ ಮತ್ತು ಹಿರಿಯ ಉಪಾದ್ಯಕ್ಶರಾಗಿರುವ ಎನ್ ರಾಜ ಮಾತನಾಡಿ, " ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಮಾರಾಟವಾಗಿ ಮೆಚ್ಚುಗೆ ಪಡೆದ ಹೊಸ ಕರೊಲ್ಲಾ ಆಲ್ಟಿಸ್ ಟೊಯೊಟಾ ಕಾರು, ಭಾರತದಲ್ಲಿಯೂ ಸಹ ತನ್ನ ಪಾರಮ್ಯ ಮೆರೆಯಲಿದೆ" ಎಂದು ಭವಿಷ್ಯ ನುಡಿದಿದ್ದಾರೆ.

ಮಾತನ್ನು ಮುಂದುವರೆಸಿದ ಎನ್ ರಾಜರವರು, "ಪ್ರೀಮಿಯಂ ಸಿ ಸೆಡಾನ್ ವಿಭಾಗದಲ್ಲಿ ಈಗಾಗಲೇ ನಮ್ಮ ಕಂಪನಿಯ ಹೆಮ್ಮೆಯ ಕರೊಲ್ಲಾ ಆಲ್ಟಿಸ್ ಕಾರು ಅತ್ಯಂತ ಪ್ರಬಲ ಸ್ಪರ್ಧಿಯಾಗಿದೆ" ಎಂದರು.

ಅಂಕಿ ಅಂಶಗಳ ಪ್ರಕಾರ, ಸದ್ಯ ಭಾರತದ ಪ್ರೀಮಿಯಂ ಸಿ ಸೆಡಾನ್ ವಿಭಾಗದಲ್ಲಿ ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯು ಶೇಕಡಾ 40ರಷ್ಟು ಅಸ್ತಿತ್ವ ಪಡೆದುಕೊಂಡಿದೆ.

ಅತಿ ಹೆಚ್ಚು ಜನರು ವೀಕ್ಷಿಸಿದ ಲೇಖನಗಳು ಈ ಕೆಳಗಿನಂತಿವೆ...

ಕರೆಯದೆ ಮನೆಗೆ ಬಂದ ಅತ್ಯಂತ ಕೆಟ್ಟ ಅತಿಥಿ ಈತ !!

ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

2017 ಟೊಯೊಟಾ ಪ್ರಿಯುಸ್ ಚಿತ್ರಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Click to compare, buy, and renew Car Insurance online

Buy InsuranceBuy Now

Read more on ಟೊಯೊಟಾ toyota
Story first published: Thursday, March 16, 2017, 15:39 [IST]
English summary
Toyota Kirloskar Motor has launched the facelifted 2017 Corolla Altis in the Indian market. Prices start at Rs 15.87 lakh ex-showroom (Delhi).
Please Wait while comments are loading...

Latest Photos