ಇನ್ನೋವಾ ಕ್ರೈಸ್ಟಾ 'ಟೂರಿಂಗ್ ಸ್ಪೋರ್ಟ್' ಆವೃತ್ತಿ ಯಾವಾಗ ಬಿಡುಗಡೆಯಾಗುತ್ತೆ ತಿಳ್ಕೊಳಿ

Written By:

ಟೊಯೊಟಾ ಕಂಪನಿಗೆ ಅತಿ ಹೆಚ್ಚು ಜನಪ್ರಿಯತೆ ಮತ್ತು ನಂಬಿಕಸ್ತ ಗ್ರಾಹಕರನ್ನು ತಂದು ಕೊಟ್ಟ ಟೊಯೊಟಾ ಇನ್ನೋವಾ ಕಾರಿನ ಸ್ಪೋರ್ಟ್ಸ್ ಆವೃತಿ ಬಿಡುಗಡೆಗೊಳಿಸಲು ಕಂಪನಿ ನಿರ್ಧರಿಸಿದೆ.

ಕಳೆದ ವರ್ಷವಷ್ಟೇ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಅತಿ ನೂತನ ಎರಡನೇ ತಲೆಮಾರಿನ ಇನ್ನೋವಾ ಕ್ರೈಸ್ಟಾ ಬಹು ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿತ್ತು.

ಈಗಿರುವ ವಿಷೆಯವೇನೆಂದರೆ, ಯಾಂತ್ರಿಕ ಅಂಶಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದ ಇನ್ನೋವಾ ಕ್ರೈಸ್ಟಾ ಕಾರಿನ ಸ್ಪೋರ್ಟ್ಸ್ ಆವೃತಿಯನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸಲು ಕಂಪನಿ ಸಿದ್ಧತೆ ನೆಡೆಸಿದೆ.

ಬಹು ಉಪಯೋಗಿ ಇನ್ನೋವಾ ಕ್ರೈಸ್ಟಾದ 'ಟೂರಿಂಗ್ ಸ್ಪೋರ್ಟ್' ಮೇಲ್ಪಂಕ್ತಿಯ ಮಾದರಿಯ ಕಾರು ಈಗಾಗಲೇ ಇಂಡೋನೇಶಿಯಾದಲ್ಲಿ ಬಿಡುಗೊಂಡಿದ್ದು ಸದ್ಯ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ.

ಹೆಚ್ಚು ಸ್ಟೈಲಿಶ್ ಆಗಿ ಹೊರಬರುತ್ತಿರುವ ಇನ್ನೋವಾ ಕ್ರೈಸ್ಟಾದ 'ಟೂರಿಂಗ್ ಸ್ಪೋರ್ಟ್' ಕಾರಿನ ಬಂಪರ್ ಮತ್ತು ಚಕ್ರಗಳ ಮೇಲಿರುವ ಕಮಾನುಗಳು ಕ್ಲಾಡ್ಡಿಂಗ್ ಹೊಂದಿರಲಿವೆ.

17 ಇಂಚಿನ ಅಲಾಯ್ ಚಕ್ರಗಳ ವಿರುದ್ಧ ಗ್ರಾಹಕರಿಂದ ಅಪಸ್ವರ ಕೇಳಿಬಂದ ಕಾರಣ ಅಲಾಯ್ ಚಕ್ರಗಳ ಗಾತ್ರವನ್ನು ಕಡಿಮೆ ಮಾಡಿ 16 ಇಂಚಿನ ಕಪ್ಪು ಬಣ್ಣದ ನವೀನ ಅಲಾಯ್ ಚಕ್ರಗಳನ್ನು ಇನ್ನೋವಾ ಕ್ರೈಸ್ಟಾದ 'ಟೂರಿಂಗ್ ಸ್ಪೋರ್ಟ್' ಕಾರಿಗೆ ಅಳವಡಿಸಲಾಗಿದೆ.

ಕ್ರೋಮ್ ಇಂದ ಹೆಚ್ಚು ಅಲಂಕೃತವಾಗಿರುವ ಕಾರು ಇದಾಗಿದ್ದು, ಎರಡು ಬದಿ ಇರುವ ಕನ್ನಡಿಗಳು (ORVMs), ಮುಂಭಾಗದ ಗ್ರಿಲ್ ಎಲ್ಲವೂ ಸ್ಟೈಲಿಶ್ ಆಗಿರಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಕಾರು ನಾಲ್ಕು ಸಿಲಿಂಡರ್ ಹೊಂದಿದೆ ಮತ್ತು ಗೇರ್ ಬಾಕ್ಸ್ ವಿಚಾರಕ್ಕೆ ಬರುವುದಾದರೆ 5-ಸ್ಪೀಡ್ ಮಾನ್ಯುಯಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ.

2.7-ಲೀಟರ್ ಪೆಟ್ರೋಲ್ ಮಾದರಿ ಕಾರು 250 ಏನ್ಎಂ ತಿರುಗುಬಲದಲ್ಲಿ 164 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದ್ದು, 2.8-ಲೀಟರ್ ಮತ್ತು 2.4-ಲೀಟರ್ ಎಂಬ ಎರಡು ಬಗೆಯಲ್ಲಿ ಡೀಸೆಲ್ ಕಾರು ಬಿಡುಗಡೆಗೊಳ್ಳಲಿದೆ.

ಹೆಚ್ಚ ಹೊಸ ವೈನ್ ರೆಡ್ ಎಂಬ ಬಣ್ಣದಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಇನ್ನೋವಾ ಕ್ರೈಸ್ಟಾದ 'ಟೂರಿಂಗ್ ಸ್ಪೋರ್ಟ್' ಕಾರು ಹೆಚ್ಚು ಜನರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಟೊಯೊಟಾ ಕಂಪನಿಯ ಮತ್ತೊಂದು ಯಶಸ್ವಿ ಕಾರು ಫಾರ್ಚುನರ್ ಚಿತ್ರಗಳನ್ನು ಈಗಲೇ ವೀಕ್ಷಿಸಿ.

Click to compare, buy, and renew Car Insurance online

Buy InsuranceBuy Now

English summary
The Innova Crysta Touring Sport will feature styling updates but will remain mechanically unchanged; expected to launch in April 2017.
Please Wait while comments are loading...

Latest Photos