ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಇನೋವಾ ಕ್ರಿಸ್ಟಾ ಟೂರಿಂಗ್ ಸ್ಪೋರ್ಟ್ ಕಾರು..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಟೊಯೊಟಾ ಸಂಸ್ಥೆಯು ತನ್ನ ಬಹುಬೇಡಿಕೆಯ ಕಾರು ಮಾದರಿ ಇನೋವಾ ಕ್ರಿಸ್ಟಾ ಟೂರಿಂಗ್ ಸ್ಪೋರ್ಟ್ ಕಾರು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಆರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.17.79 ಲಕ್ಷಕ್ಕೆ ಲಭ್ಯವಿವೆ.

ಹೊಸ ವಿನ್ಯಾಸಗಳೊಂದಿಗೆ ಅಭಿವೃದ್ಧಿಗೊಂಡಿರುವ ಇನೋವಾ ಕ್ರಿಸ್ಟಾ ಟೂರಿಂಗ್ ಸ್ಪೋರ್ಟ್ ಕಾರು ಮಾದರಿಯೂ ಪೆಟ್ರೋಲ್ ಮತ್ತು ಡಿಸೇಲ್ ಮಾದರಿಯಲ್ಲಿ ಖರೀದಿಗೆ ಲಭ್ಯವಿವೆ.

ಇನೋವಾ ಕ್ರಿಸ್ಟಾ ಕಾರು ನಮೂನೆಗಳು


ಟೂರಿಂಗ್ ಸ್ಪೋರ್ಟ್ ಪೆಟ್ರೋಲ್ ಎಂಟಿ (2.7 ಲೀಟರ್)
ಟೂರಿಂಗ್ ಸ್ಪೋರ್ಟ್ ಪೆಟ್ರೋಲ್ ಎಟಿ   (2.7-ಲೀಟರ್)
ಟೂರಿಂಗ್ ಸ್ಪೋರ್ಟ್ ಡಿಸೇಲ್ ಎಂಟಿ    (2.4 ಲೀಟರ್)
ಟೂರಿಂಗ್ ಸ್ಪೋಟ್ಸ್ ಡಿಸೇಲ್ ಎಟಿ      (2.8 ಲೀಟರ್)

ಇನೋವಾ ಕ್ರಿಸ್ಚಾ ಬೆಲೆಗಳು( ದೆಹಲಿ ಎಕ್ಸ್‌ಶೋರಂ)


ಟೂರಿಂಗ್ ಸ್ಪೋರ್ಟ್ ಪೆಟ್ರೋಲ್ ಎಂಟಿ - ರೂ.17,79,000
ಟೂರಿಂಗ್ ಸ್ಪೋರ್ಟ್ ಪೆಟ್ರೋಲ್ ಎಟಿ-    ರೂ. 20,84,500
ಟೂರಿಂಗ್ ಸ್ಪೋರ್ಟ್ ಡಿಸೇಲ್ ಎಂಟಿ-     ರೂ. 18,91,000
ಟೂರಿಂಗ್ ಸ್ಪೋಟ್ಸ್ ಡಿಸೇಲ್ ಎಟಿ-       ರೂ. 22,15,500

ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆಯಿದ್ದು, ನಿಮ್ಮ ಅನಕೂಲಕತೆಗೆ ತಕ್ಕಂತೆ ಖರೀದಿ ಮಾಡಬಹುದಾಗಿದೆ.

ಮ್ಯಾನುವಲ್ ಮಾದರಿಯ ಕಾರು ವಿಎಕ್ಸ್ ಟ್ರಿಮ್ ಆಧಾರದ ಮೇಲೆ ಸಿದ್ಧಗೊಂಡಿದ್ದರೆ, ಆಟೋಮ್ಯಾಟಿಕ್ ಕಾರು ಮಾದರಿಯೂ ಝಡ್‌ಎಕ್ಸ್ ಆಧಾರದ ಮೇಲೆ ಅಭಿವೃದ್ದಿಗೊಂಡಿವೆ.

ಎಂಜಿನ್ ಸಾಮರ್ಥ್ಯ
2.7-ಲೀಟರ್ ಪೆಟ್ರೋಲ್ ಎಂಜಿನ್ ಕಾರು 164ಬಿಎಚ್‌ಪಿ ಮತ್ತು 248ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದ್ದು, 2.8-ಲೀಟರ್ ಡಿಸೇಲ್ ಎಂಜಿನ್ ಮಾದರಿಯೂ 172ಬಿಎಚ್‌ಪಿ ಹಾಗೂ 360 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ವಿಶೇಷ ಒಳವಿನ್ಯಾಸ
ಚಾಲಕ ಸೇರಿ ಒಟ್ಟು 7 ಆಸನಗಳ ವ್ಯವಸ್ಥೆ ಹೊಂದಿದ್ದು, ವಾಣಿಜ್ಯ ಬಳಿಕೆ ಮತ್ತು ವ್ಯಯಕ್ತಿಕ ಬಳಕೆಗೂ ಸಾಕಷ್ಟು ಅನುಕೂಲತೆ ಹೊಂದಿದೆ. ಜೊತಗೆ ಕಾರಿನ ಡ್ಯಾಶ್‌ಬೋರ್ಡ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಕೆಂಪು ಬಣ್ಣದ ವುಡ್ ಬಳಕೆ ಮಾಡಲಾಗಿದೆ.

ಇನ್ನು 16 ಇಂಚಿನ ಬ್ಲ್ಯಾಕ್ ಅಲಾಯ್ ಚಕ್ರಗಳನ್ನು ಹೊಂದಿರುವ ಇನೋವಾ ಕ್ರಿಸ್ಟಾ ಟೂರಿಂಗ್ ಸ್ಪೋರ್ಟ್ ಕಾರು, ಸಖತ್ ಗ್ಲ್ಯಾಮರ್ ಪಡೆದುಕೊಂಡಿದೆ.

ಪ್ರಸ್ತುತ ಕಾರು ಮಾದರಿಗಳಲ್ಲಿರುವ ಸಾಮಾನ್ಯ ಫೀಚರ್‌ಗಳು ಇನೋವಾ ಕ್ರಿಸ್ಟಾದಲ್ಲೂ ಅಳವಡಿಸಲಾಗಿದ್ದು, ಇನೋವಾ ಕ್ರಿಸ್ಟಾ ಪ್ರಥಮ ವರ್ಷದ ಆಚರಣೆ ಹಿನ್ನೆಲೆ ಈ ಹೊಸ ಮಾದರಿಯನ್ನು ಗ್ರಾಹಕರಿಗೆ ಪರಿಚಯಿಸಿದೆ.

ವೈಡ್‌ಫೈರ್ ರೆಡ್ ಮತ್ತು ಪರ್ಲ್ ಕ್ರಿಸ್ಟಲ್ ಶೈನ್ ಬಣ್ಣಗಳಲ್ಲಿ ಖರೀದಿ ಲಭ್ಯವಿದ್ದು, ಭಾರತೀಯ ಗ್ರಾಹಕರಿಗೆ ಇನೋವಾ ಕ್ರಿಸ್ಟಾ ಟೂರಿಂಗ್ ಸ್ಪೋರ್ಟ್ ಹೊಸ ಅನುಭವ ನೀಡಲಿದೆ.

Click to compare, buy, and renew Car Insurance online

Buy InsuranceBuy Now

Read more on ಟೊಯೊಟಾ toyota
English summary
Toyota Innova Crysta Touring Sport launched in India.
Please Wait while comments are loading...

Latest Photos