ಭಾರತದಲ್ಲಿ ಸುಜುಕಿ ಮತ್ತು ಟೊಯೊಟಾ ಬೃಹತ್ ಪ್ಲ್ಯಾನ್- ಪ್ರಧಾನಿ ಮೋದಿ ಜೊತೆ ನಡೆಯಲಿದೆ ಮಹತ್ತರ ಸಭೆ..!!

Written By:

ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಸಹಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಅಭಿಯಾನ ಇದೀಗ ಸಹಕಾರಗೊಳ್ಳುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಭಾರತದಲ್ಲಿ ಸುಜುಕಿ ಮತ್ತು ಟೊಯೊಟಾ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದು, ಪ್ರಧಾನಿಯೊಂದಿಗೆ ಮಾತುಕತಗೆ ಮುಂದಾಗಿವೆ.

ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲಿರುವ ಟೊಯೊಟಾ ಮತ್ತು ಸುಜುಕಿ ಕಂಪನಿಗಳ ಮುಖ್ಯಸ್ಥರು, ಭಾರತದಲ್ಲಿ ರೂಪಿಸಲಾಗುತ್ತಿರುವ ಹೊಸ ಯೋಜನೆಗಳಿಗೆ ಸಹಕಾರ ನೀಡುವಂತೆ ಮನವಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂದಿರುವ ಭಾರತದಲ್ಲಿ ಹೊಸ ಯೋಜನೆ ರೂಪಿಸಿರುವ ಟೊಯೊಟಾ ಮತ್ತು ಸುಜುಕಿ, ವಿಫುಲವಾಗಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಕೆಗೆ ಮುಂದಾಗಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಡೆಯಲಿರುವ ಮಾತುಕತೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇಲ್ಲದೇ ಪಾಲುದಾರಿಕೆಯಾಗಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಮುಂದಾಗಿರುವ ಟೊಯೊಟಾ ಹಾಗೂ ಸುಜುಕಿ ಭಾರತದಲ್ಲಿ ಹೊಸ ಹೊಸ ಮಾದರಿಯ ಕಾರುಗಳ ಉತ್ಪಾದನೆಯ ನಿಟ್ಟಿನಲ್ಲಿ ಸಂಶೋಧನೆ ಕೂಡಾ ನಡೆಸಲಿವೆ.

ಈಗಾಗಲೇ ಭಾರತಕ್ಕೆ ಆಗಮಿಸಿರುವ ಟೊಯೊಟಾ ಅಧ್ಯಕ್ಷ ಆಕಿಯೋ ಟೊಯೊಡಾ ಮತ್ತು ಸುಜುಕಿ ಚೇರ್‌ಮನ್ ಒಸಾಮು ಸುಜುಕಿ ಸದ್ಯದಲ್ಲೇ ಪ್ರಧಾನಿ ಮೋದಿ ಜೊತೆ ಸಭೆ ನಡೆಸಲಿದ್ದಾರೆ. ಹೀಗಾಗಿ ಸಭೆಗೆ ಪೂರ್ವತಯಾರಿ ನಡೆಸಿರುವ ಸುಜುಕಿ ಮತ್ತು ಟೊಯೊಟಾ ತಮ್ಮ ಹೊಸ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

 

 

ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂದಿರುವ ಟೊಯೊಟಾ ಸಂಸ್ಥೆಯು, ಸುಜುಕಿ ಸಂಸ್ಥೆಯೊಂದಿಗೆ ಕೈಜೋಡಿಸುತ್ತಿರುವುದರ ಈ ಹಿಂದೆ ಹಲವು ಕಾರಣಗಳಿವೆ. ಸಣ್ಣ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸುಜುಕಿ, ತನ್ನ ಉತ್ಪನ್ನಗಳಲ್ಲಿ ಇನ್ನು ಟೊಯೊಟಾ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಿದೆ. ಇದಿರಂದಾಗಿ ಭಾರತದಲ್ಲಿ ಜನಪ್ರಿಯವಾಗಿರುವ ಸುಜುಕಿ, ತನ್ನ ಉತ್ಪನ್ನಗಳ ಮಾರಾಟ ಹೆಚ್ಟಿಸುವ ನೀರಿಕ್ಷೆಯಲ್ಲಿದೆ.

ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿ ಸಿದ್ಧಗೊಳ್ಳುತ್ತಿರುವ ಈ ಯೋಜನೆ ಬಗ್ಗೆ ಸುಜುಕಿ ಮತ್ತು ಟೊಯೊಟಾ ಹೊಸ ಆಶಾಭಾವನೆ ವ್ಯಕ್ತಪಡಿಸಿವೆ. ಜೊತೆಗೆ ಭಾರತದಲ್ಲಿ ಸಿದ್ಧಗೊಳ್ಳುತ್ತಿರುವ ಹೊಸ ಯೋಜನೆಗಳು ಸ್ಥಳೀಯವಾಗಿ ವಿಫುಲ ಉದ್ಯೋಗ ಅವಕಾಶಗಳನ್ನು ಸೃಷ್ಠಿಸಲಿವೆ ಎಂದಿದ್ದಾರೆ.

ಒಟ್ಟಿನಲ್ಲಿ ಟೊಯೊಟಾ ಮತ್ತು ಸುಜುಕಿ ಒಂದಾಗುತ್ತಿರುವುದು ಹೊಸ ಹೊಸ ಆವಿಷ್ಕಾರಗಳಿಗೆ ಮುನ್ನುಡಿ ಬರಿದಿದ್ದು, ಭಾರತದಲ್ಲಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಜೊತೆ ವಿಫುಲ್ ಉದ್ಯೋಗ ಅವಕಾಶಗಳನ್ನು ಸೃಷ್ಠಿಯಾಗಲಿವೆ.

ಭಾರತದಲ್ಲಿ ಬಿಡುಗಡೆಗೆ ಸಿದ್ಧಗೊಂಡಿರುವ ಹೊಚ್ಚ ಹೊಸ ಹ್ಯಾಚ್‌ಬ್ಯಾಕ್ ಮಾದರಿಯ ಸ್ವಿಫ್ಟ್ ಕಾರುಗಳ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Story first published: Saturday, March 11, 2017, 14:18 [IST]
English summary
Japanese automotive giants, Toyota and Suzuki held discussions with the Prime Minister of India, Narendra Modi. Both the companies want to venture business opportunities in India.
Please Wait while comments are loading...

Latest Photos