ಸಿದ್ಧಗೊಂಡಿದೆ ವಿನೂತನ ಟೊಯೊಟಾ ವಿವ್ಸ್- ಬಿಡುಗಡೆಯ ವಿವರ ಇಲ್ಲಿದೆ ನೋಡಿ..!!

ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿ ಸಿದ್ದಗೊಂಡಿರುವ ಟೊಯೊಟಾ ವಿನೂತನ ವಿವ್ಸ್ ಮಾದರಿಯು ಮುಂದಿನ ವರ್ಷ ಬಿಡುಗಡೆಯಾಗಲಿದೆ.

Written By:

ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಟೊಯೊಟಾ ತನ್ನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ವಿವ್ಸ್ ಮಾದರಿಯೂ ಮುಂದಿನ ವರ್ಷ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿದ್ದು, 2018ರ ಎಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

ವಿನೂತನ ಮಾದರಿಯ ಬೆಲೆ ಪಟ್ಟಿಯನ್ನು ಬಿಟ್ಟುಕೊಡದ ಟೊಯೊಟಾ, ಬಿಡುಗಡೆಗೂ ಮುನ್ನವಷ್ಟೇ ಹೊಸ ಕಾರಿನ ದರ ನಿಗದಿಗೊಳಿಸುವ ಸಾಧ್ಯತೆಗಳಿವೆ. ಹೀಗಾಗಿ ದರ ವಿಚಾರದಲ್ಲಿ ಗೌಪ್ಯತೆ ಕಾಯ್ದುಕೊಳ್ಳಲಾಗಿದ್ದು, ಬಿಡುಗಡೆಗೆ ಮುನ್ನ ದರ ಪಟ್ಟಿ ಸಿದ್ಧಗೊಳ್ಳಲಿದೆ.

ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ವಿವ್ಸ್ ಮಾದರಿಯನ್ನು ಬಿಡುಗಡೆಗೊಳಿಸಿರುವ ಟೊಯೊಟಾ, ಭಾರತದಲ್ಲಿ ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸಿದೆ. ಹೀಗಾಗಿ ಎಪ್ರಿಲ್ ಬಿಡುಗಡೆಯಾಗುವ ಬಗ್ಗೆ ಹೆಚ್ಚು ಕುತೂಹಲ ಹುಟ್ಟಿಸಿದ್ದು, ಗ್ರಾಹಕರನ್ನು ಸೆಳೆಯುವ ತಂತ್ರ ರೂಪಿಸುತ್ತಿದೆ.

ಹೊಸ ವಿನ್ಯಾಸದಲ್ಲಿ ಕಂಗೊಳಿಸುತ್ತಿರುವ ಟೊಯೊಟಾ ವಿವ್ಸ್ ಮಾದರಿಯು ವಿ-ಶೇಪ್ ಮಸ್‌ಕ್ಯೂಲರ್ ಫ್ರಂಟ್ ಗ್ರಿಲ್ ವ್ಯವಸ್ಥೆ ಹೊಂದಿದೆ. ಜೊತೆಗೆ ಐ ಬ್ಲೋ ಶಾರ್ಪ ಎಲ್‌ಇಡಿ ಪಾರ್ಕಿಂಗ್ ಲೈಟ್ ಮತ್ತು ಅಡ್ಡಲಾದ ಡೇ ಟೈಮ್ ರನ್ನಿಂಗ್ ಲೈಟ್ ವ್ಯವಸ್ಥೆ ಕೂಡಾ ಹೊಂದಿದೆ.

ಹೊಸ ವಿನ್ಯಾಸಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಗೊಳ್ಳುವ ಸಾಧ್ಯತೆಗಳಿದ್ದು, ಪ್ರಮುಖ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ. ಅಲ್ಲದೇ ಕಂಪ್ಯಾಕ್ಟ್ ಸೆಡಾನ್ ಮಾದರಿಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೇಡಿಕೆ ಕೂಡಾ ಇರುವುದು ಮಾರಾಟಕ್ಕೆ ಸಹಕಾರಿಯಾಗಲಿದೆ.

ಕಾರಿನ ಒಳವಿನ್ಯಾಸ ಕೂಡಾ ಸಾಕಷ್ಟು ಗಮನ ಸೆಳೆಯುತ್ತಿದೆ. ಸ್ಪೋಟ್ಸ್ ಮಾದರಿಯ ಲಕ್ಷಣಗಳನ್ನು ಹೊಂದಿದ್ದು, ಇನ್ಫೋಟೈನ್‌ಮೆಂಟ್ ಮತ್ತು ಹೊಸ ವಿನ್ಯಾಸದ ಡ್ಯಾಶ್‌ಬೋರ್ಡ್ ಹೊಂದಿದೆ.

ಬಿಡುಗಡೆಗೆ ಸಿದ್ಧಗೊಂಡಿರುವ ಟೊಯೊಟಾ ವಿವ್ಸ್ ಮಾದರಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ ಎಬಿಎಸ್ ಮತ್ತು ಇಬಿಡಿ ವ್ಯವಸ್ಥೆಯಿದ್ದು, ಡ್ಯುಯಲ್ ಏರ್‌ಬ್ಯಾಗ್ ವ್ಯವಸ್ಥೆಯನ್ನು ಹೊಂದಿದೆ.

ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಟೊಯೊಟಾ ವಿವ್ಸ್ ಮಾದರಿಯು 1.5-ಪೆಟ್ರೋಲ್ ಮಾದರಿಯನ್ನು ಹೊಂದಿದ್ದು, 106ಬಿಎಚ್‌ಪಿ ಮತ್ತು 140 ಎನ್‌ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಹೀಗಾಗಿ ಇದೇ ಮಾದರಿಯೂ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿವೆ.

ವಿದೇಶಿ ಮಾರುಕಟ್ಟೆಗಳಲ್ಲಿ ಪೆಟ್ರೋಲ್ ಮಾದರಿಗಳನ್ನು ಮಾತ್ರ ಬಿಡುಗಡೆ ಮಾಡಿರುವ ಟೊಯೊಟಾ, ಡೀಸೆಲ್ ಮಾದರಿಯನ್ನು ಬಿಡುಗಡೆಗೊಳಿಸಿಲ್ಲ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯೂ ಬಿಡುಗಡೆ ಸಾಧ್ಯತೆಗಳಿವೆ.

ಒಂದು ವೇಳೆ ಟೊಯೊಟಾ ವಿವ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದೇ ಆದಲ್ಲಿ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹುಂಡೈ ವೆರ್ನಾ, ಸ್ಕೋಡಾ ರ‍್ಯಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ಹೊಚ್ಚ ಹೊಸ ಟೊಯೊಟಾ ಪ್ರಿಯಸ್ ಕಾರುಗಳ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Read more on ಟೊಯೊಟಾ toyota
Story first published: Tuesday, March 14, 2017, 19:54 [IST]
English summary
Toyota will debut the Vios compact sedan at the 2018 Auto Expo in Febraury 2018. The India launch will take place by April 2018.
Please Wait while comments are loading...

Latest Photos

LIKE US ON FACEBOOK