ಜಿಎಸ್‌ಟಿ ಜಾರಿಗೆ ದಿನಗಣನೆ- ಟ್ರ್ಯಾಕ್ಟರ್‌‌ಗಳ ಉತ್ಪಾದನೆ ಮೇಲಿನ ತೆರಿಗೆ ತಗ್ಗಿಸಲು ಹೆಚ್ಚಿದ ಬೇಡಿಕೆ

ಜುಲೈ 1ರಿಂದ ಜಾರಿಗೆ ಬರುತ್ತಿರುವ ಏಕರೂಪದ ತೆರಿಗೆ ನೀತಿ ಆಟೋ ಉದ್ಯಮದ ಮೇಲೂ ಭಾರೀ ಪರಿಣಾಮ ಬೀರುತ್ತಿದ್ದು, ಕೆಲವು ಕೃಷಿ ಉಪಕರಣಗಳ ಬೆಲೆಗಳು ಕೂಡಾ ದುಬಾರಿಯಾಗಲಿವೆ.

By Praveen

ಜುಲೈ 1ರಿಂದ ಜಾರಿಗೆ ಬರುತ್ತಿರುವ ಏಕರೂಪದ ತೆರಿಗೆ ನೀತಿ ಆಟೋ ಉದ್ಯಮದ ಮೇಲೂ ಭಾರೀ ಪರಿಣಾಮ ಬೀರುತ್ತಿದ್ದು, ಕೆಲವು ಕೃಷಿ ಉಪಕರಣಗಳ ಬೆಲೆಗಳು ಕೂಡಾ ದುಬಾರಿಯಾಗಲಿವೆ.

GST ತೆರಿಗೆ ತಗ್ಗಿಸಲು ಟ್ರ್ಯಾಕ್ಟರ್ ಉತ್ಪಾದಕರಿಂದ ಹೆಚ್ಚಿದ ಬೇಡಿಕೆ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿಎಸ್‌ಟಿ ಮಸೂದೆ ಪರ-ವಿರೋಧಕ್ಕೆ ಕಾರಣವಾಗಿದ್ದು, ಆಟೋ ಉದ್ಯಮದ ಮೇಲೂ ಹತ್ತು ಹಲವು ಪರಿಣಾಮಗಳನ್ನು ಬಿರುತ್ತಿದೆ.

GST ತೆರಿಗೆ ತಗ್ಗಿಸಲು ಟ್ರ್ಯಾಕ್ಟರ್ ಉತ್ಪಾದಕರಿಂದ ಹೆಚ್ಚಿದ ಬೇಡಿಕೆ

ಯಾಕೇಂದ್ರೆ ಐಷಾರಾಮಿ ಕಾರುಗಳ ಮೇಲಿನ ಸೆಸ್ ತೆಗೆದು ಹಾಕಿರುವ ಕೇಂದ್ರ ಸರ್ಕಾರವು, ಪ್ರಮುಖ ಕೃಷಿ ಸಕರಣೆಗಳ ಮೇಲಿನ ತೆರಿಗೆ ಹೆಚ್ಚಿಸಿ ಟೀಕೆಗೆ ಗುರಿಯಾಗಿದೆ.

GST ತೆರಿಗೆ ತಗ್ಗಿಸಲು ಟ್ರ್ಯಾಕ್ಟರ್ ಉತ್ಪಾದಕರಿಂದ ಹೆಚ್ಚಿದ ಬೇಡಿಕೆ

ಈ ಹಿಂದೆ ಇದ್ದ ಶೇ. 18ರಷ್ಟು ತೆರಿಗೆಯನ್ನು 28ಕ್ಕೆ ಹೆಚ್ಚಿಸಲಾಗಿದ್ದು, ಐಷಾರಾಮಿ ಕಾರುಗಳ ಮೇಲಿನ ಸೆಸ್ ತೆಗೆದು ಹಾಕಿ ಟ್ರ್ಯಾಕ್ಟರ್‌ಗಳ ಮೇಲಿನ ತೆರಿಗೆ ಹೆಚ್ಚಿಸಿರುವುದು ಆಟೋ ಉತ್ಪಾದಕರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

GST ತೆರಿಗೆ ತಗ್ಗಿಸಲು ಟ್ರ್ಯಾಕ್ಟರ್ ಉತ್ಪಾದಕರಿಂದ ಹೆಚ್ಚಿದ ಬೇಡಿಕೆ

ಸದ್ಯ ಹೊಸ ತೆರಿಗೆ ವ್ಯವಸ್ಥೆಗಳು ಜಾರಿಗೆ ಬಂದಲ್ಲಿ ಟ್ರ್ಯಾಕ್ಟರ್‌ಗಳ ಬೆಲೆ 30ರಿಂದ 35ಸಾವಿರದಷ್ಟು ಹೆಚ್ಚಳವಾಗಲಿದ್ದು, ತೆರಿಗೆ ವಿನಾಯ್ತಿ ಪಡೆದಿರುವ ಐಷಾರಾಮಿ ಕಾರು ಉತ್ಪಾದಕರು ಈಗಾಗಲೇ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡುತ್ತಿದ್ದಾರೆ.

GST ತೆರಿಗೆ ತಗ್ಗಿಸಲು ಟ್ರ್ಯಾಕ್ಟರ್ ಉತ್ಪಾದಕರಿಂದ ಹೆಚ್ಚಿದ ಬೇಡಿಕೆ

ಈ ನಡುವೆ ಕೃಷಿ ಪರಿಕರಗಳ ಮೇಲಿನ ತೆರಿಗೆ ಹೆಚ್ಚಳ ಕುರಿತಂತೆ ಕೇಂದ್ರಕ್ಕೆ ಮನವಿ ಮಾಡಿರುವ ಟಿಎಂಎ (ಟ್ರ್ಯಾಕ್ಟರ್ ಉತ್ಪಾದಕರ ಒಕ್ಕೂಟ) ಕೃಷಿ ಉಪಕರಣಗಳ ಮೇಲಿನ ತೆರಿಗೆ ತಗ್ಗಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ.

GST ತೆರಿಗೆ ತಗ್ಗಿಸಲು ಟ್ರ್ಯಾಕ್ಟರ್ ಉತ್ಪಾದಕರಿಂದ ಹೆಚ್ಚಿದ ಬೇಡಿಕೆ

ಈ ಹಿಂದೆ ಇದ್ದ ಶೇ.18ರಷ್ಟು ತೆರಿಗೆಯನ್ನು ಮುಂದುವರಿಸುವಂತೆ ಮತ್ತು ಐಷಾರಾಮಿ ಕಾರುಗಳ ಉತ್ಪಾದಕರಿಗೆ ನೀಡಲಾಗಿರುವ ಸೆಸ್ ವಿನಾಯ್ತಿಯನ್ನು ಕೃಷಿ ಉಪಕರಣಗಳ ಉತ್ಪಾದಕರಿಗೂ ನೀಡಬೇಕೇಂಬದು ಪಟ್ಟು ಹಿಡಿದಿದ್ದಾರೆ.

GST ತೆರಿಗೆ ತಗ್ಗಿಸಲು ಟ್ರ್ಯಾಕ್ಟರ್ ಉತ್ಪಾದಕರಿಂದ ಹೆಚ್ಚಿದ ಬೇಡಿಕೆ

ಆದ್ರೆ ಜಿಎಸ್‌ಟಿ ಜಾರಿಗೆ ಕೇವಲ ಒಂದು ವಾರ ಮಾತ್ರ ಬಾಕಿ ಇದ್ದು, ಟ್ರ್ಯಾಕ್ಟರ್ ಉತ್ಪಾದಕರ ಬೇಡಿಕೆಗೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಟ್ರ್ಯಾಕ್ಟರ್ ಉತ್ಪಾದನೆ ಮೇಲೆ ತೆರಿಗೆ ವಿನಾಯ್ತಿ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

GST ತೆರಿಗೆ ತಗ್ಗಿಸಲು ಟ್ರ್ಯಾಕ್ಟರ್ ಉತ್ಪಾದಕರಿಂದ ಹೆಚ್ಚಿದ ಬೇಡಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬರುತ್ತಿರುವ ಒಂದು ಒಳ್ಳೆಯ ನಿರ್ಧಾರ. ಆದರೂ ತೆರಿಗೆ ವಿಧಿಸುವಲ್ಲಿ ಕೇಂದ್ರವು ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಜಿಎಸ್‌ಟಿ ಜಾರಿಗೂ ಮುನ್ನ ಟ್ರ್ಯಾಕ್ಟರ್‌ಗಳ ಉತ್ಪಾದನೆ ಮೇಲಿನ ತೆರಿಗೆ ಪದ್ದತಿಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡುವುದು ಅವಶ್ಯಕತೆಯಿದೆ.

Most Read Articles

Kannada
English summary
Read in Kannada about Tractor Makers Demand To Cut GST Rates.
Story first published: Friday, June 23, 2017, 13:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X