ಭಾರತದಲ್ಲಿ ಬಿಡುಗಡೆಗೊಂಡ ಫೋಕ್ಸ್‌ವ್ಯಾಗನ್ ವೆಂಟೊ 'ಹೈಲೈನ್ ಪ್ಲಸ್' ಕಾರು: ಬೆಲೆ ರೂ.10.84 ಲಕ್ಷ

Written By:

ಹೊಚ್ಚ ಹೊಸ ವೆಂಟೊ ಹೈಲೈನ್ ಪ್ಲಸ್ ಕಾರು ಭಾರತದದಲ್ಲಿ ಅಮೋಘವಾಗಿ ಬಿಡುಗಡೆಗೊಂಡಿದ್ದು, ಅತ್ಯುತ್ತಮ ತಂತ್ರಜ್ಞಾನ ಮತ್ತು ಅತ್ಯಂತ ಹೆಚ್ಚಿನ ಸುರಕ್ಷತೆ ಸೌಲಭ್ಯಗಳನ್ನು ಪಡೆದುಕೊಂಡಿರುವ ಈ ಕಾರು ಎಲ್ಲಾ ವರ್ಗದ ಜನರ ಮೆಚ್ಚುಗೆ ಪಡೆಯಲಿದೆ.

ಜರ್ಮನಿಯ ಆಟೋ ದೈತ್ಯ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಅನಾವರಣಗೊಳಿಸಿದ್ದು, ಕಾರಿನ ಬೆಲೆ ರೂ. 10.84 ಲಕ್ಷ(ಎಕ್ಸ್ ಷೋ ರೂಂ ಮುಂಬೈ) ನಿಗದಿಪಡಿಸಲಾಗಿದೆ.

ಈ ಹೊಚ್ಚ ಹೊಸ ವೆಂಟೊ ಹೈಲೈನ್ ಪ್ಲಸ್ ಕಾರು ಅತ್ಯುತ್ತಮ ಶ್ರೇಣಿಯಲ್ಲಿ ಎಲ್ಲಾ ಮೂರು ಎಂಜಿನ್ ಆವೃತಿಗಳಲ್ಲಿ ಹೊರ ಬಂದಿದೆ.

ಹೊಸದಾಗಿ ಅನ್ವೇಷಣೆಗೊಂಡು ಮಾರುಕಟ್ಟೆಗೆ ಬಂದಿರುವ ಝಿರ್ಕೋನಿಯ ಅಲಾಯ್ ವೀಲುಗಳು ಹೆಚ್ಚು ಸುರಕ್ಷತೆ ನೀಡಲಿವೆ.

ಆವೃತಿ                                           ಎಕ್ಸ್ ಷೋ ರೂಂ (ಮುಂಬೈ)
ಪೆಟ್ರೋಲ್ 1.6 (ಮಾನ್ಯುಯಲ್)               ರೂ 10.84 ಲಕ್ಷ
ಪೆಟ್ರೋಲ್ 1.2-ಲೀಟರ್ (ಆಟೋಮ್ಯಾಟಿಕ್)   ರೂ 12.06 ಲಕ್ಷ
ಡೀಸೆಲ್ 1.5-ಲೀಟರ್ (ಮಾನ್ಯುಯಲ್)        ರೂ 12.20 ಲಕ್ಷ
ಡೀಸೆಲ್ 1.5-ಲೀಟರ್ (ಆಟೋಮ್ಯಾಟಿಕ್)      ರೂ 13.43 ಲಕ್ಷ

ಮಳೆ ಗ್ರಹಿಕೆ ಇರುವ ವೈಪರ್ಸ್ ಮತ್ತು ನೀರು ಮತ್ತಿತರ ಪದಾರ್ಥಗಳನ್ನು ಶೀತ ಪ್ರದೇಶದಲ್ಲಿ ಶೇಖರಿಸಿ ಇಡುವ 'ಗ್ಲೋವ್ ಬಾಕ್ಸ್' ಈ ಕಾರು ಹೊಂದಿದೆ.

ಇನ್ನು ಹೆಚ್ಚಿನ ವಿಶೇಷತೆಗಳನ್ನು ಈ ವೋಕ್ಸ್‌ವ್ಯಾಗನ್ ಹೈಲೈನ್ ಪ್ಲಸ್ ಹಿಂಬದಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಎಸಿ ವೆಂಟ್ಸ್ ಹೊಂದಿದ್ದು, ಹಿಂಬದಿ ವೀಕ್ಷಣೆಗೆ ಮಿರರ್ ನೀಡಲಾಗಿದೆ.

ಈ ಹೈಲೈನ್ ಪ್ಲಸ್ ಟ್ರಿಮ್ ಆವೃತಿ ಹಲವಾರು ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಈ ಹೊಚ್ಚ ಹೊಸ ಕಾರು ಎಲ್ಇಡಿ ಹೆಡ್ ಲ್ಯಾಂಪ್ಸ್ ಮತ್ತು ಓಆರ್‌ವಿಎಂಗಳಲ್ಲಿ ಡಿಆರ್‌ಎಲ್ಎಸ್ ಆಯ್ಕೆ ಹೊಂದಿದೆ, ಹಿಂಬದಿ ಇರುವ ಟೈಲ್ ದೀಪಗಳು 3ಡಿ ಆಗಿದ್ದು ಹೆಚ್ಚಿನ ಆಕರ್ಷಣೆ ಇರಲಿದೆ.

ಅತ್ಯುತ್ತಮ ತಂತ್ರಜ್ಞಾನ ಮತ್ತು ಅತ್ಯಂತ ಹೆಚ್ಚಿನ ಸುರಕ್ಷತೆ ಸೌಲಭ್ಯಗಳನ್ನು ಪಡೆದುಕೊಂಡಿರುವ ಈ ಕಾರು ಎಲ್ಲಾ ವರ್ಗದ ಜನರ ಮೆಚ್ಚುಗೆ ಪಡೆಯಲಿದೆ ಎನ್ನುವುದು ಕಂಪನಿಯ ಹೇಳಿದೆ.

Story first published: Thursday, April 6, 2017, 13:25 [IST]
English summary
Read in Kannada about new Volkswagen Vento Highline Plus Launched in India. Get more details about new Volkswagen Vento Highline Plus price, mileage, specifications and more.
Please Wait while comments are loading...

Latest Photos