ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ ಇಂಡಿಯಾವು ಮಹಿಳಾ ದಿನಾಚರಣೆಯ ಅಂಗವಾಗಿ ಕಳೆದ ಭಾನುವಾರ (ಫೆಬ್ರವರಿ 03, 2015) ಮಹಿಳಾ ವಾಹನ ಪ್ರೇಮಿಗಳಿಗಾಗಿ ರಾಷ್ಟ್ರ ರಾಜಧಾನಿ ನವದಹೆಲಿ ಹಾಗೂ ನಮ್ಮ ಬೆಂಗಳೂರಿನಲ್ಲಿ ಅತಿ ವಿಶೇಷ 'ವುವೆನ್ಸ್ ಪವರ್ ಡ್ರೈವ್' ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಈ ಮೂಲಕ ಮಹಿಳಾ ವಾಹನ ಪ್ರೇಮಿಗಳು ಆಡಿ ವಿವಿಧ ಶ್ರೇಣಿಯ ಕಾರುಗಳ ವಿಶೇಷ ಚಾಲನಾ ಅನುಭವ ಸಂಪಾದಿಸುವಲ್ಲಿ ಯಶಸ್ವಿಯಾದರು. ಅಂದ ಹಾಗೆ ಇದು ನಾಲ್ಕನೇ ಬಾರಿಗೆ ಮಹಿಳೆಯರಿಗಾಗಿ ಮಾತ್ರ ವಿಶೇಷ ಚಾಲನಾ ಅನುಭವ ಏರ್ಪಡಿಸಲಾಗಿದೆ. ನಿಮ್ಮ ಮಾಹಿತಿಗಾಗಿ 2012ನೇ ಸಾಲಿನಲ್ಲಿ ಮೊದಲ ಬಾರಿಗೆ ಮಹಿಳೆಯರಿಗಾಗಿ ಮಾತ್ರ ದೆಹಲಿ ಹಾಗೂ ಮುಂಬೈನಲ್ಲಿ ಆಡಿ ಡ್ರೈವ್ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಹಿಳೆಯರು ಆಡಿ ಕ್ರೀಡಾ ಬಳಕೆಯ ವಾಹನಗಳಾದ ಕ್ಯೂ3, ಕ್ಯೂ5 ಹಾಗೂ ಕ್ಯೂ7 ಕಾರುಗಳ ಜೊತೆಗೆ ಎ3, ಎ4 ಹಾಗೂ ಎ6 ಸೆಡಾನ್ ಕಾರುಗಳ ಆಫ್ ರೋಡ್ ರೋಚಕತೆಯನ್ನು ಸವಿದರು. ಇದೇ ಸಂದರ್ಭದಲ್ಲಿ ಆಡಿ ಎಸ್6 ಮತ್ತು ಆಡಿ ಟಿಟಿ ಗರಿಷ್ಠ ನಿರ್ವಹಣೆಯ ಕಾರುಗಳು ಸಹ ಗಮನ ಸೆಳೆದಿದ್ದವು.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಬೆಂಗಳೂರಿನ ದೇವನಹಳ್ಳಿಯಲ್ಲಿ ವಿಶೇಷವಾಗಿ ಸಜ್ಜೀಕರಣಗೊಳಿಸಲಾದ ಆಫ್ ರೋಡ್ ರಸ್ತೆಯಲ್ಲಿ ಮಹಿಳೆಯರಿಗಾಗಿ 'ವುಮೆನ್ಸ್ ಪವರ್ ಡ್ರೈವ್' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಆಡಿ ಎಸ್‌ಯುವಿಗಳ ಪೈಕಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಕ್ಯೂ ಡ್ರೈವ್ ಮೊದಲಿಗೆ ತನ್ನ ಚಾಲನಾ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಇಲ್ಲಿ ವಿವಿಧ ಅಡೆತಡೆಗಳನ್ನು ಗೆದ್ದು ಬರುವಲ್ಲಿ ಕ್ಯೂ ಡ್ರೈವ್ ಯಶ ಕಂಡಿತ್ತು.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಆಫ್ ರೋಡ್‌ಗಳ ಪೈಕಿ ಹಿಲ್ ಕ್ಲೈಂಬ್ ಅತಿ ಹೆಚ್ಚು ರೋಚಕತೆಗೆ ಸಾಕ್ಷಿಯಾಗಿದೆ ಎಂಬುದು ನಿಮಗೆಲ್ಲಿರಿಗೂ ತಿಳಿದ ವಿಚಾರ. ಇದರಂತೆ ಮಹಿಳೆಯರಿಗಾಗಿನ ವಿಶೇಷ ಚಾಲನೆಯಲ್ಲೂ ಹಿಲ್ ಕ್ಲೈಂಬ್‌ಗೆ ಹೆಚ್ಚಿನ ಮಹತ್ವ ಕೊಡಲಾಗಿತ್ತು. ಈ ಮೂಲಕ ಆಡಿ ವಾಹನಗಳ ಹಿಲ್ ಕ್ಲೈಂಬ್ ಅಸಿಸ್ಟ್ ತಂತ್ರಜ್ಞಾನ ಹಾಗೂ ಗರಿಷ್ಠ ನಿರ್ವಹಣೆಯನ್ನು ಬಿಂಬಿಸಲಾಗಿತ್ತು.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಹೀಗೆ ಮೇಲೇರಿದ ಕಾರುಗಳು ತಕ್ಷಣ ಕಡಿದಾದ ಇಳಿಜಾರಿನಲ್ಲಿ ಇಳಿಯಬೇಕಾಗಿತ್ತು. ಇಲ್ಲಿ ಹಿಲ್ ಡಿಸೆಂಟ್ ಕಂಟ್ರೋಲ್ ವ್ಯವಸ್ಥೆಯು ತನ್ನ ಪ್ರಭಾವವನ್ನು ಬೀರಿದೆ.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಇನ್ನು ಒರೆಕೋರೆಯಾದ ಒರಟಾದ ರಸ್ತೆಯಲ್ಲಿ ಆಡಿ ಎಸ್‌ಯುವಿ ಹ್ಯಾಂಡ್ಲಿಂಗ್, ಟ್ರಾಕ್ಷನ್ ಕಂಟ್ರೋಲ್ ಹಾಗೂ ಇಂಟೆಲಿಜೆಟ್ ಕ್ವಾಟ್ರೋ ವ್ಯವಸ್ಥೆಗೆ ನೈಜ ಪರೀಕ್ಷೆಯನ್ನು ಒಡ್ಡಿತ್ತು.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಇಲ್ಲಿ ಆಡಿ ಕ್ವಾಟ್ರೊ ಆಲ್ ವೀಲ್ ಡ್ರೈವ್ ವ್ಯವಸ್ಥೆಯು ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಇದು ಆಫ್ ರೋಡ್‌ನಲ್ಲಿ ವಾಹನ ಎಳೆತವನ್ನು ಅತ್ಯಂತ ಸರಳವಾಗಿಸಿದೆ.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಇಲ್ಲಿಗೂ ಆಡಿ ಪ್ರಯೋಗ ಮುಗಿಯಲಿಲ್ಲ. ಬದಿಯಲ್ಲಿ ಕಡಿದಾದ ಇಳಿಜಾರಿನೊಂದಿಗಿನ ಪರೀಕ್ಷೆಯು ಮಹಿಳಾ ಚಾಲಕಿಯರಲ್ಲಿ ರೋಚಕತೆಗೆ ಕಾರಣವಾಗಿತ್ತು. ಇದು ಆಫ್ ರೋಡ್ ಚಾಲನೆಯಲ್ಲೂ ಆಡಿ ಸ್ಥಿರತೆಯೊಂದಿಗೆ ಹೆಚ್ಚಿನ ಸುರಕ್ಷತೆಯನ್ನು ಕಾಪಾಡಿಕೊಂಡಿದೆ.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಒರಟು ರಸ್ತೆಯಲ್ಲಿ ಚಲಿಸುವಾಗ ಘರ್ಷಣೆಯನ್ನು ತಗ್ಗಿಸಲು ಸಲುವಾಗಿ ವಾಹನಗಳಿಗೆ ಆಳವಡಿಸುವ ಸಸ್ಪೆನ್ಷನ್ ವ್ಯವಸ್ಥೆಯು ಅತಿ ಮಹತ್ವಪೂರ್ಣವೆನಿಸುತ್ತದೆ. ಇಲ್ಲಿ ಆಡಿ ಕಾರುಗಳ ಹ್ಯಾಂಡ್ಲಿಂಗ್‌ನಲ್ಲಿ ಸಸ್ಫೆನ್ಷನ್ ವ್ಯವಸ್ಥೆ ಗಮನ ಸೆಳೆಯುತ್ತದೆ.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಇನ್ನು ಆಡಿ ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ ತೋರ್ಪಡಿಸುವ ಸಲುವಾಗಿ ಕ್ವಾಟ್ರೊ ಆಲ್ ವೀಲ್ ಡ್ರೈವ್ ವ್ಯವಸ್ಥೆಗೆ ಮಗದೊಂದು ಸವಾಲು ಏರ್ಪಡಿಸಲಾಗಿತ್ತು. ಇಲ್ಲಿಯೂ ಆಡಿ ತನ್ನ ಚಾಣಕ್ಷತೆಯನ್ನು ಮೆರೆದಿದೆ.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಇವೆಲ್ಲದರ ಬಳಿಕ ಆಡಿಗೆ ಎದುರಾದ ಕೊನೆಯ ಸವಾಲು ಇದಾಗಿತ್ತು (ಚಿತ್ರದಲ್ಲಿ ತೋರಿಸಿರುವಂತೆಯೇ). ಇಲ್ಲಿಯೂ ಕ್ಯಾಬಿನ್‌ನೊಳಗಿನ ಪ್ರಯಾಣಿಕರಿಗೆ ಆಡಿ ನೀಡುತ್ತಿರುವ ಆರಾಮದಾಯಕತೆಯು ಮೆಚ್ಚುಗೆಗೆ ಪಾತ್ರವಾಗಿದೆ.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಆಡಿ ಎಸ್‌ಯುವಿಗಳ ಬಳಿಕ ಸೆಡಾನ್ ಕಾರುಗಳಿಗೂ ಝಿಗ್‌ಜ್ಯಾಗ್‌ಗಳಂತಹ ಅತ್ಯಂತ ಕಠಿಣ ಪರೀಕ್ಷೆ ಎದುರಾಗಿತ್ತು. ಇದು ಇಲ್ಲಿ ಭಾಗವಹಿಸಿದ ಮಹಿಳೆಯರಿಗೆ ಅದ್ಭುತ ಅನುಭವ ನೀಡುವಂತಾಗಿತ್ತು.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಏತನ್ಮಧ್ಯೆ ಈ ಎಲ್ಲ ಅನುಭವದ ಬಳಿಕ ಎಕ್ಸ್‌ಕ್ಲೂಸಿವ್ ಆಗಿ ಗರಿಷ್ಠ ನಿರ್ವಹಣೆಯ ಆಡಿಯ ಮೂರು ಕಾರುಗಳ (ಆಡಿ ಎಸ್6, ಆಡಿ ಟಿಟಿ ಮತ್ತು ಎಸ್5 ಕೂಪೆ) ಪೈಕಿ ಒಂದನ್ನು ಆಯ್ಕೆ ಮಾಡುವ ಅವಕಾಶವೂ ಲಭಿಸಿತ್ತು.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ವುಮೆನ್ಸ್ ಪವರ್ ಡ್ರೈವ್‌ನಲ್ಲಿ ವಿಶೇಷ ಪ್ರದರ್ಶನ ಕಂಡಿರುವ ಅತಿ ದುಬಾರಿ ಆಡಿ ಆರ್8 ಸ್ಪೋರ್ಟ್ಸ್ ಕಾರು. ಕ್ಷಮಿಸಿ! ಪ್ರಸ್ತುತ ಕಾರನ್ನು ಚಾಲನೆ ಮಾಡುವ ಅವಕಾಶ ಯಾರಿಗೂ ಇರಲಿಲ್ಲ.

ಮಹಿಳಾ ದಿನಾಚರಣೆ ಸ್ಮರಣೀಯವಾಗಿಸಿದ ಆಡಿ 'ವುವೆನ್ಸ್ ಪವರ್ ಡ್ರೈವ್'

ಆಡಿ ವುಮೆನ್ಸ್ ಪವರ್ ಡ್ರೈವ್‌ನಲ್ಲಿ ಭಾಗವಹಿಸುವ ಮೂಲಕ ಮಹಿಳೆಯರು 2015 ಮಹಿಳಾ ದಿನಾಚರಣೆಯನ್ನು ಸ್ಮರಣೀಯವಾಗಿಸಿದರು. ನಿಜಕ್ಕೂ ಭವಿಷ್ಯದಲ್ಲೂ ಆಡಿಯಿಂದ ಇಂತಹ ಕಾರ್ಯಕ್ರಮಗಳು ಮುಂದುವರಿಯಲಿ ಎಂಬುದು ನಮ್ಮ ಆಶಯವಾಗಿದೆ.

Most Read Articles

Kannada
English summary
Audi, the German car manufacturer joined the Women's day celebration by organising an Audi Power Drive exclusively for women, this past Sunday.
Story first published: Monday, March 9, 2015, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X