ದೆಹಲಿಯತ್ತ ಹೆಜ್ಜೆಯನ್ನಿಟ್ಟ ಷೆವರ್ಲೆ ಮಿನಿ ಎಸ್‌ಯುವಿ 'ಆಡ್ರಾ'

ಕೆಲವು ದಿನಗಳ ಹಿಂದೆಯಷ್ಟೇ ಜನರಲ್ ಮೋಟಾರ್ಸ್ ಬ್ರಾಂಡ್ ಆಗಿರುವ ಷೆವರ್ಲೆ ಬಹುನಿರೀಕ್ಷಿತ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾನ್ಸೆಪ್ಟ್ ಕಾರೊಂದನ್ನು ಪ್ರದರ್ಶಿಸುವುದರ ಬಗ್ಗೆ ಮಾಹಿತಿ ಕೊಟ್ಟಿದ್ದೆವು.

ಈ ಸಂಬಂಧ ಹೆಚ್ಚಿನ ವಿವರಗಳು ಲಭ್ಯವಾಗಿದ್ದು, ಷೆವರ್ಲೆಯಿಂದ ಆಗಮನವಾಗಲಿರುವ ನೂತನ ಮಿನಿ ಎಸ್‌ಯುವಿ 'ಆಡ್ರಾ' ಎಂದು ಹೆಸರಿಸಿಕೊಳ್ಳಲಿದೆ. ಇದು ನೇರವಾಗಿ ಫೋರ್ಡ್ ಇಕೊಸ್ಪೋರ್ಟ್‌ಗೆ ಎದುರಾಳಿಯಾಗಿರಲಿದೆ.

ದೆಹಲಿಯತ್ತ ಹೆಜ್ಜೆಯನ್ನಿಟ್ಟ ಷೆವರ್ಲೆ ಮಿನಿ ಎಸ್‌ಯುವಿ 'ಆಡ್ರಾ'

ಜನರಲ್ ಮೋಟಾರ್ಸ್ ಸಣ್ಣ ವಾಹನ 'ಗಮ್ಮಾ 2' ಫ್ಲ್ಯಾಟ್‌ಫಾರ್ಮ್‌ನಲ್ಲಿ ನೂತನ ಕಾಂಪಾಕ್ಟ್ ಎಸ್‌ಯುವಿ ನಿರ್ಮಾಣವಾಗಲಿದೆ. ಇದೇ ತಲಹದಿಯಲ್ಲಿ ಟ್ರಾಕ್ಸ್ ಎಸ್‌ಯುವಿ ನಿರ್ಮಾಣವಾಗಿತ್ತು ಎಂಬುದು ಉಲ್ಲೇಖನೀಯ.

ದೆಹಲಿಯತ್ತ ಹೆಜ್ಜೆಯನ್ನಿಟ್ಟ ಷೆವರ್ಲೆ ಮಿನಿ ಎಸ್‌ಯುವಿ 'ಆಡ್ರಾ'

ಟ್ರಾಕ್ಸ್ ಇದುವರೆಗೆ ಷೆವರ್ಲೆಯಿಂದ ಲಭ್ಯವಾಗುತ್ತಿರುವ ಸಣ್ಣ ಎಸ್‌ಯುವಿ/ಕ್ರಾಸೋವರ್ ಎನಿಸಿಕೊಂಡಿತ್ತು. ಆದರೆ ನಾಲ್ಕು ಮೀಟರ್ ಉದ್ದ ಪರಿಮಿತಿಯನ್ನು ಮೀರಿರುವುದರಿಂದ ದೇಶದಲ್ಲಿ ಮಾರಾಟ ಮಾಡುವ ಸಾಹಸಕ್ಕೆ ಷೆವರ್ಲೆ ಮುಂದಾಗಿರಲಿಲ್ಲ.

ದೆಹಲಿಯತ್ತ ಹೆಜ್ಜೆಯನ್ನಿಟ್ಟ ಷೆವರ್ಲೆ ಮಿನಿ ಎಸ್‌ಯುವಿ 'ಆಡ್ರಾ'

ಒಂದು ವೇಳೆ ಷೆವರ್ಲೆ ಟ್ರಾಕ್ಸ್ ಲಾಂಚ್ ಮಾಡಿದ್ದಲ್ಲಿ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ. ಇದು ನೇರವಾಗಿ ಇಕೊಸ್ಪೋರ್ಟ್‌ಗೆ ಲಾಭದಾಯಕವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಷೆವರ್ಲೆ ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗೆ ನೂತನ ಮಿನಿ ಎಸ್‌ಯುವಿ ಆಡ್ರಾ ಲಾಂಚ್ ಮಾಡುವ ಯೋಜನೆ ಹೊಂದಿದೆ.

ದೆಹಲಿಯತ್ತ ಹೆಜ್ಜೆಯನ್ನಿಟ್ಟ ಷೆವರ್ಲೆ ಮಿನಿ ಎಸ್‌ಯುವಿ 'ಆಡ್ರಾ'

ಇಲ್ಲಿ ಆಸಕ್ತಿದಾಯಕ ವಿಚಾರವೆಂದರೆ ನೂತನ ಷೆವರ್ಲೆ ಕಾರು, ಟ್ರಾಕ್ಸ್ ವಿನ್ಯಾಸ ಪಡೆದುಕೊಳ್ಳಲಿದೆಯೇ ಅಥವಾ ಎಲ್ಲ ಹೊಸತನದಿಂದ ಕೂಡಿದ ಲುಕ್ ಪ್ರದಾನ ಮಾಡಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ದೆಹಲಿಯತ್ತ ಹೆಜ್ಜೆಯನ್ನಿಟ್ಟ ಷೆವರ್ಲೆ ಮಿನಿ ಎಸ್‌ಯುವಿ 'ಆಡ್ರಾ'

ಪ್ರಮುಖವಾಗಿಯೂ ಇಕೊಸ್ಪೋರ್ಟ್ ಮತ್ತು ರೆನೊ ಡಸ್ಟರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಷೆವರ್ಲೆ ಆಡ್ರಾ, ಸೈಲ್ ಹಾಗೂ ಎಂಜಾಯ್‌ನಲ್ಲಿ ಕಂಡುಬಂದಿರುವ 77 ಅಶ್ವಶಕ್ತಿ ಉತ್ಪಾದಿಸುವ 1.3 ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ನಿರೀಕ್ಷೆಯಿದೆ.

ದೆಹಲಿಯತ್ತ ಹೆಜ್ಜೆಯನ್ನಿಟ್ಟ ಷೆವರ್ಲೆ ಮಿನಿ ಎಸ್‌ಯುವಿ 'ಆಡ್ರಾ'

ಇಷ್ಟೆಲ್ಲ ಆದರೂ ಸದ್ಯದಲ್ಲೇ ಷೆವರ್ಲೆ ಆಡ್ರಾ ಉತ್ಪಾದನಾ ವರ್ಷನ್ ಪಡೆದುಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಇದು 2015ರ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
The Ford EcoSport compact SUV competitor from Chevrolet that was previously reported to debut in India as a concept car at the Auto Expo 2014 now has a name. The Chevy compact SUV concept will reportedly be called Adra.
Story first published: Wednesday, January 29, 2014, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X