ಷೆವರ್ಲೆಯಿಂದ ಇಕೊಸ್ಪೋರ್ಟ್‌ ನೇರ ಪ್ರತಿಸ್ಪರ್ಧಿ ಸಿದ್ಧ

ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಒಂದರ ಬಳಿಕ ಒಂದರಂತೆ ಕಾರುಗಳ ಪ್ರದರ್ಶನದ ಸುರಿಮಳೆಯಾಗುತ್ತಿದೆ.

2014 ಆಟೋ ಎಕ್ಸ್ ಪೋ ಲೈವ್

ಈಗಷ್ಟೇ ಷೆವರ್ಲೆ ಬೀಟ್ ಅವತರಣಿಕೆಯನ್ನು ಪ್ರದರ್ಶಿಸಿದ್ದ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಂಸ್ಥೆಯು ಮಗದೊಂದು ಕಾಂಪಾಕ್ಟ್ ಎಸ್‌ಯುವಿ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿದೆ.

ಷೆವರ್ಲೆಯಿಂದ ಇಕೊಸ್ಪೋರ್ಟ್‌ ನೇರ ಪ್ರತಿಸ್ಪರ್ಧಿ ಸಿದ್ಧ

ಷೆವರ್ಲೆಯಿಂದ ಆಗಮನವಾಗಲಿರುವ ನೂತನ ಕಾಂಪಾಕ್ಟ್ ಎಸ್‌ಯುವಿ ಆಡ್ರಾ, ಫೋರ್ಡ್ ಇಕೊಸ್ಪೋರ್ಟ್‌ಗೆ ನೇರ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.

ಷೆವರ್ಲೆಯಿಂದ ಇಕೊಸ್ಪೋರ್ಟ್‌ ನೇರ ಪ್ರತಿಸ್ಪರ್ಧಿ ಸಿದ್ಧ

ಜನರಲ್ ಮೋಟಾರ್ಸ್ ಜಾಗತಿಕ ಸಣ್ಣ ವಾಹನ ಗಮ್ಮಾ 2 ತಲಹದಿಯಲ್ಲಿ ನೂತನ ಕಾರು ನಿರ್ಮಾಣವಾಗಲಿದೆ. ಬೆಂಗಳೂರಿನಲ್ಲಿ ಸ್ಥಿತಗೊಂಡಿರುವ ಜನರಲ್ ಮೋಟಾರ್ಸ್ ತಾಂತ್ರಿಕ ಕೇಂದ್ರದಲ್ಲಿ ದೇಶಿಯ ವಿನ್ಯಾಸಗಾರರೇ ಇದನ್ನು ರಚಿಸಿದ್ದಾರೆ.

ಷೆವರ್ಲೆಯಿಂದ ಇಕೊಸ್ಪೋರ್ಟ್‌ ನೇರ ಪ್ರತಿಸ್ಪರ್ಧಿ ಸಿದ್ಧ

ಕೇವಲ ಇಕೊಸ್ಪೋರ್ಟ್ ಮಾತ್ರವಲ್ಲ, ರೆನೊ ಡಸ್ಟರ್ ಆವೃತ್ತಿಗೂ ಇದು ಪ್ರತಿಸ್ಪರ್ಧೆ ಒಡ್ಡಲಿದೆ.

ಷೆವರ್ಲೆಯಿಂದ ಇಕೊಸ್ಪೋರ್ಟ್‌ ನೇರ ಪ್ರತಿಸ್ಪರ್ಧಿ ಸಿದ್ಧ

ಹಾಗಿದ್ದರೂ ಎಂಜಿನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೂಲಗಳ ಪ್ರಕಾರ 77 ಬಿಎಚ್‌ಪಿ ಉತ್ಪಾದಿಸಬಲ್ಲ 1.3 ಲೀಟರ್ ಮಲ್ಟಿಜೆಟ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು ಸೈಲ್ ಹಾಗೂ ಎಂಜಾಯ್‌ನಲ್ಲಿರುವುದಕ್ಕೆ ಸಮಾನವಾಗಿರಲಿದೆ.

ಷೆವರ್ಲೆಯಿಂದ ಇಕೊಸ್ಪೋರ್ಟ್‌ ನೇರ ಪ್ರತಿಸ್ಪರ್ಧಿ ಸಿದ್ಧ

ಇದರೊಂದಿಗೆ ಷೆವರ್ಲೆ ಟ್ರಾಕ್ಸ್ ಭಾರತ ಪ್ರವೇಶದ ಕನಸು ಬಹುತೇಕ ಆಸ್ತಮಿಸಿದೆ. ಸದ್ಯ ಷೆವರ್ಲೆ ಆಡ್ರಾ ಭಾರತ ಪ್ರವೇಶವನ್ನು ಎದುರು ನೋಡುತ್ತಿದೆ.

ಷೆವರ್ಲೆಯಿಂದ ಇಕೊಸ್ಪೋರ್ಟ್‌ ನೇರ ಪ್ರತಿಸ್ಪರ್ಧಿ ಸಿದ್ಧ

ಇದೇ ಸಂದರ್ಭದಲ್ಲಿ ಷೆವರ್ಲೆ ಕೋರ್ವೆಟ್ಟೆ ಸ್ಟ್ರಿಂಗ್ರೇ, ಕ್ಯಾಮರೊ ಝಡ್‌ಎಲ್2 ಮತ್ತು ಟ್ರೈಲ್‌ಬ್ಲೇಜರ್ ಜಾಗತಿಕ ಆವೃತ್ತಿಗಳನ್ನು ಅನಾವರಣಗೊಳಿಸಲಾಗಿತ್ತು.

Most Read Articles

Kannada
English summary
Chevrolet reveals Adra compact SUV concept at 2014 Auto Expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X