ದಿಲ್ಲಿಯಲ್ಲಿ ಕಾಂಪಾಕ್ಟ್ ಸೆಡಾನ್, ಹ್ಯಾಚ್‌ಬ್ಯಾಕ್ ಕಾರುಗಳಿಗೆ ಹಬ್ಬ

By Nagaraja

2014 ಇಂಡಿಯಾ ಆಟೋ ಎಕ್ಸ್ ಪೋ ಅಧಿಕೃತ ಚಾಲನೆಗಿಂತಲೂ ಮೊದಲೇ ಕೆಲವು ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳು ತನ್ನ ನೂತನ ಮಾದರಿಗಳನ್ನು ಅನಾವರಣಗೊಳಿಸುವುದರಲ್ಲಿ ಮಗ್ನವಾಗಿದೆ.

ಆಟೋ ಎಕ್ಸ್ ಪೋ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಈ ಪೈಕಿ ಕಾಂಪಾಕ್ಟ್ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳು ಅತಿ ಹೆಚ್ಚು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ನಮ್ಮ ತಂಡದ ಪ್ರಕಾರ, ಪ್ರತಿಯೊಂದು ವಾಹನ ತಯಾರಕ ಸಂಸ್ಥೆಗಳು ಆದಷ್ಟು ಬೇಗ ತಮ್ಮ ನೂತನ ಅವತರಣಿಕೆಗಳನ್ನು ಪ್ರದರ್ಶಿಸುವುದರಲ್ಲಿ ತುಂಬಾನೇ ಉತ್ಸಾಹಿತವಾಗಿದೆ. ಈ ಮೂಲಕ ಸಾಧ್ಯವಾದಷ್ಟು ಮಾಧ್ಯಮ ಪ್ರಚಾರ ಗಿಟ್ಟಿಸಿಕೊಳ್ಳುವುದು ಸಂಸ್ಥೆಗಳ ಉದ್ದೇಶವಾಗಿದೆ.

ದೆಹಲಿಯಲ್ಲಿ ಅನಾವರಣಗೊಂಡಿರುವ ಕಾರುಗಳು:

  • ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್,
  • ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್,
  • ಹ್ಯುಂಡೈ ಅಸೆಂಟ್ ಕಾಂಪಾಕ್ಟ್ ಸೆಡಾನ್,
  • ಫೋರ್ಡ್ ಫಿಗೊ ಕಾನ್ಸೆಪ್ಟ್

ಟಾಟಾ ಬೋಲ್ಟ್

ಟಾಟಾ ಬೋಲ್ಟ್

ವಿಸ್ಟಾದ ಮೇಲೆ ಬಿದ್ದಿರುವ 'ಟ್ಯಾಕ್ಸಿ ಕಾರೆಂಬ' ಅಪಪ್ರಚಾರವನ್ನು ತೊಳೆದು ಹಾಕುವುದೇ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರಿನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬೋಲ್ಟ್ ಮೊದಲ ನೋಟದಲ್ಲಿ ಆಕರ್ಷಕ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ಸನ್ನು ಕಂಡಿದೆ.

ಟಾಟಾ ಜೆಸ್ಟ್

ಟಾಟಾ ಜೆಸ್ಟ್

ಪ್ರಸ್ತುತ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಟಾಟಾ, ನೂತನ ಜೆಸ್ಟ್ ಅನಾವರಣಗೊಳಿಸಿದೆ. ಮುಂದಿನ ದಿನಗಳಲ್ಲಿ ರಸ್ತೆ ಪ್ರವೇಶಿಸಲಿರುವ ಟಾಟಾ ಜೆಸ್ಟ್ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಳಲ್ಲೂ ಲಭ್ಯವಾಗಲಿದೆ.

ಫೋರ್ಡ್ ಫಿಗೊ ಕಾನ್ಸೆಪ್ಟ್

ಫೋರ್ಡ್ ಫಿಗೊ ಕಾನ್ಸೆಪ್ಟ್

ದಿಲ್ಲಿಯಲ್ಲಿ ಮಗದೊಂದು ಕಾಂಪಾಕ್ಟ್ ಸೆಡಾನ್ ಕಾನ್ಸೆಪ್ಟ್ ಮಾದರಿ ಅನಾವರಣಗೊಂಡಿದೆ. ಜಾಗತಿಕವಾಗಿ ಲಭ್ಯವಿರುವ ನೆಕ್ಸ್ಟ್‌ ಜನರೇಷನ್ ಫಿಗೊ ಹ್ಯಾಚ್‌ಬ್ಯಾಕ್ ಕಾರಾಗಿರುವ 'ಕಾ ಕಾನ್ಸೆಪ್ಟ್' ಆಧಾರದಲ್ಲಿ ನಿರ್ಮಾಣಗೊಂಡಿದೆ.

ಹ್ಯುಂಡೈ ಎಕ್ಸ್‌ಸೆಂಟ್

ಹ್ಯುಂಡೈ ಎಕ್ಸ್‌ಸೆಂಟ್

ಸಬ್ ಫೋರ್ ಮೀಟರ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ಕಾಂಪಾಕ್ಟ್ ಸೆಡಾನ್ ಮಾದರಿಯೇ ಹ್ಯುಂಡೈ ಎಕ್ಸ್‌ಸೆಂಟ್. ಗ್ರಾಂಡ್ ಐ10 ತಲಹದಿಯಲ್ಲಿ ನಿರ್ಮಾಣವಾಗಿರುವ ಹ್ಯುಂಡೈ ಎಕ್ಸ್‌ಸೆಂಟ್ ಈಗಾಗಲೇ ವಾಹನ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Most Read Articles

Kannada
English summary
Compact sedan and hatchback reveals ruled the week ahead of the 2014 Auto Expo with automakers rushing to showcase their cars ahead of the two eventful days to prevent being overshadowed. Of these reveals four new models made the most news. These include - Tata Bolt hatchback, Tata Zest compact sedan, Hyundai Xcent compact sedan and Ford Figo Cocnept.
Story first published: Wednesday, February 5, 2014, 8:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X