ಸತತ 6ನೇ ವರ್ಷ ಹೊಸ ಕಾರಿನ ವಿನ್ಯಾಸ, ನಿರ್ವಹಣೆಯಲ್ಲಿ ವರ್ಧನೆ

By Nagaraja

ನಿಮ್ಮ ಹೊಸ ಕಾರಿನ ವಿನ್ಯಾಸ ಹಾಗೂ ನಿರ್ವಹಣೆ ತೃಪ್ತಿ ತಂದಿದೆಯೇ? ಈ ಪ್ರಶ್ನೆಯನ್ನು ಇಲ್ಲಿ ಉಲ್ಲೇಖಿಸಲು ಪ್ರಮುಖ ಕಾರವೊಂದಿದೆ. ಯಾಕೆಂದರೆ ಪ್ರಮುಖ ವಾಹನ ಅಧ್ಯಯನ ಸಂಸ್ಥೆಯಾಗಿರುವ ಜೆ.ಡಿ. ಪವರ್ ಏಷಿಯಾ ಫೆಸಿಫಿಕ್ ವರದಿ ಪ್ರಕಾರ, ಹೊಸ ವಾಹನಗಳ ವಿನ್ಯಾಸ ಹಾಗೂ ನಿರ್ವಹಣೆಯಲ್ಲಿ ಗ್ರಾಹಕರು ಅತೀವ ತೃಪ್ತಿ ಹೊಂದಿದ್ದಾರೆ ಎಂಬ ಅಂಶವನ್ನು ಹೊರತಂದಿದೆ.

ಹೊಸ ಕಾರು ಪುಟವನ್ನು ಸಂದರ್ಶಿಸಲು ಮರೆಯದಿರಿ

ಸತತ ಆರನೇ ವರ್ಷದಲ್ಲೂ ದೇಶದ ಕಾರು ಮಾರುಕಟ್ಟೆಯಲ್ಲಿ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಳಿಸಲಾದ ಆಟೋಮೋಟಿವ್ ನಿರ್ವಹಣಾ, ಎಕ್ಸಿಕ್ಯೂಷನ್ ಮತ್ತು ಲೇಔಟ್ (APEAL) ಅಧ್ಯಯನ ವರದಿಯಲ್ಲಿ ಇದು ಬೆಳಕಿಗೆ ಬಂದಿದೆ. ಹೊಸ ಕಾರುಗಳನ್ನು ಖರೀದಿಸಿದ ಗ್ರಾಹಕರ ಆರು ತಿಂಗಳುಗಳ ಚಾಲನಾ ಅನುಭವದ ಆಧಾರದಲ್ಲಿ ಈ ಅಧ್ಯಯನ ವರದಿಯನ್ನು ತಯಾರಿಸಲಾಗಿದೆ.

ಸತತ 6ನೇ ವರ್ಷ ಹೊಸ ಕಾರಿನ ವಿನ್ಯಾಸ, ನಿರ್ವಹಣೆಯಲ್ಲಿ ವರ್ಧನೆ

ವಾಹನಗಳ ಹೊರಮೈ, ಒಳಮೈ, ಸ್ಟೋರೆಜ್ ಹಾಗೂ ಸ್ಪೇಸ್, ಆಡಿಯೋ, ಮನರಂಜನೆ, ನೇವಿಗೇಷನ್, ಸೀಟು, ತಾಪಮಾನ, ವೆಂಟಿಲೇಷನ್ (ಗಾಳಿ, ಬೆಳಕು ಹಾಯಿಸುವುದು), ಎಸಿ, ಚಾಲನಾ ಸುರಕ್ಷತೆ ಮತ್ತು ಇಂಧನ ಕ್ಷಮತೆಗಳಂತಹ 10 ವೈಶಿಷ್ಟ್ಯಗಳನ್ನು ಅವಲೋಕಿಸಿದ ಬಳಿಕ ಅಪೀಲ್ ಅಧ್ಯಯನ ವರದಿಯನ್ನು ತಯಾರಿಸಲಾಗಿದೆ.

ಸತತ 6ನೇ ವರ್ಷ ಹೊಸ ಕಾರಿನ ವಿನ್ಯಾಸ, ನಿರ್ವಹಣೆಯಲ್ಲಿ ವರ್ಧನೆ

ಗರಿಷ್ಠ 1000 ಅಂಕಗಳಲ್ಲಿ ಅತಿ ಹೆಚ್ಚು ಪಾಯಿಂಟ್ ಪಡೆದ ಕಾರು ಮಾದರಿಗಳನ್ನು ಶ್ರೇಷ್ಠ ಕಾರೆಂದು ಪರಿಗಣಿಸಲಾಗಿದೆ. ಅಂತೆಯೇ ಒಟ್ಟಾರೆ 845 ಅಂಕ ಸಂಪಾದಿಸಲಾಗಿದೆ. ಕಳೆದ ವರ್ಷವಿದು 836 ಗಳಷ್ಟಾಗಿತ್ತು.

ಸತತ 6ನೇ ವರ್ಷ ಹೊಸ ಕಾರಿನ ವಿನ್ಯಾಸ, ನಿರ್ವಹಣೆಯಲ್ಲಿ ವರ್ಧನೆ

ನಿರೀಕ್ಷೆಯಂತೆಯೇ ದೇಶದ ಅಗ್ರ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಪಟ್ಟಿ ಇಂತಿದೆ

  • ಎಂಟ್ರಿ ಲೆವೆಲ್ ಕಾಂಪಾಕ್ಟ್ ಸೆಗ್ಮೆಂಟ್ - ಮಾರುತಿ ಸುಜುಕಿ ಆಲ್ಟೊ 800,
  • ಕಾಂಪಾಕ್ಟ್ ಸೆಡಾನ್ - ಮಾರುತಿ ಸುಜುಕಿ ಎಸ್ಟಿಲೊ,
  • ಅಪ್ಪರ್ ಲೆವೆಲ್ ಕಾಂಪಾಕ್ಟ್ ಸೆಗ್ಮೆಂಟ್ - ಮಾರುತಿ ಸುಜುಕಿ ರಿಟ್ಜ್,
  • ಪ್ರೀಮಿಯಂ ಕಾಂಪಾಕ್ಟ್ ಸೆಗ್ಮೆಂಟ್ - ಮಾರುತಿ ಸುಜುಕಿ ಸ್ವಿಫ್ಟ್.
  • ಸತತ 6ನೇ ವರ್ಷ ಹೊಸ ಕಾರಿನ ವಿನ್ಯಾಸ, ನಿರ್ವಹಣೆಯಲ್ಲಿ ವರ್ಧನೆ

    ಈ ನಡುವೆ ಯುಟಿಲಿಟಿ ವೆಹಿಕಲ್ ಸೆಗ್ಮೆಂಟ್‌ನಲ್ಲಿ ಟೊಯೊಟಾ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.

    • ಅತ್ಯುತ್ತಮ ಎಂಪಿವಿ/ಎಂಯುವಿ - ಟೊಯೊಟಾ ಇನ್ನೋವಾ
    • ಎಸ್‌ಯುವಿ ಸೆಗ್ಮೆಂಟ್ - ಫಾರ್ಚುನರ್
    • ಸತತ 6ನೇ ವರ್ಷ ಹೊಸ ಕಾರಿನ ವಿನ್ಯಾಸ, ನಿರ್ವಹಣೆಯಲ್ಲಿ ವರ್ಧನೆ

      ಇನ್ನು ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಹೋಂಡಾ ಕೂಡಾ ಪ್ರಶಸ್ತಿ ಬಾಚಿಕೊಂಡಿದೆ.

      ಎಂಟ್ರಿ ಮಿಡ್ ಸೈಜ್ ಸೆಗ್ಮೆಂಟ್ - ಹೋಂಡಾ ಅಮೇಜ್.

      ಸತತ 6ನೇ ವರ್ಷ ಹೊಸ ಕಾರಿನ ವಿನ್ಯಾಸ, ನಿರ್ವಹಣೆಯಲ್ಲಿ ವರ್ಧನೆ

      ಇನ್ನೊಂದೆಡೆ ಹ್ಯುಂಡೈ ವರ್ನಾ ಹಾಗೂ ಫೋಕ್ಸ್‌ವ್ಯಾಗನ್ ವೆಂಟೊ ಜಂಟಿಯಾಗಿ ಶ್ರೇಷ್ಠ ಮಿಡ್ ಸೈಜ್ ಸೆಗ್ಮೆಂಟ್ ಕಾರಾಗಿ ಹೊರಹೊಮ್ಮಿದೆ.

      ಸತತ 6ನೇ ವರ್ಷ ಹೊಸ ಕಾರಿನ ವಿನ್ಯಾಸ, ನಿರ್ವಹಣೆಯಲ್ಲಿ ವರ್ಧನೆ

      ಇನ್ನು ಅಂತಿಮವಾಗಿ ಅತ್ಯುತ್ತಮ ಪ್ರೀಮಿಯಂ ಮಿಡ್ ಸೈಜ್ ಸೆಗ್ಮೆಂಟ್ ಕಾರಾಗಿ ಷೆವರ್ಲೆ ಕ್ರೂಜ್ ಪ್ರಶಸ್ತಿ ಗೆದ್ದುಕೊಂಡಿದೆ.

Most Read Articles

Kannada
English summary
Customer satisfaction with new-vehicle design and performance in India increases for a sixth consecutive year, according to the J.D. Power Asia Pacific 2013 India Automotive Performance, Execution and Layout (APEAL) StudySM released today.
Story first published: Wednesday, December 18, 2013, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X