ಸಂಕ್ರಾಂತಿ ಕೊಡುಗೆ: 3.79 ಲಕ್ಷಕ್ಕೆ ದಟ್ಸನ್ ಗೊ ಪ್ಲಸ್ ಎಂಪಿವಿ

By Nagaraja

ದೇಶದ ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ದಟ್ಸನ್ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಕಾರು ಭಾರತ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದೇಶದ ಚೊಚ್ಚಲ ಕಾಂಪಾಕ್ಟ್ ಫ್ಯಾಮಿಲಿ ವಾಗನ್ ಎಂದು ಹೆಸರಿಸಿಕೊಂಡಿರುವ ಗೊ ಪ್ಲಸ್ ಬಹು ಬಳಕೆಯ ವಾಹನವನ್ನು ದಟ್ಸನ್ ಪರಿಚಯಿಸಿದೆ.

ದಟ್ಸನ್ ಗೊ ಪ್ಲಸ್ ಹೇಗಿದೆ - ಓದಿ ಮೊದಲ ಚಾಲನಾ ವರದಿ

ನಿಮ್ಮ ಮಾಹಿತಿಗಾಗಿ, ನಿಸ್ಸಾನ್ ಅಧೀನತೆಯಲ್ಲಿರುವ ದಟ್ಸನ್ ಭಾರತೀಯ ರಸ್ತೆ ಪರಿಸ್ಥಿತಿ ಹಾಗೂ ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಬಜೆಟ್ ಕಾರುಗಳನ್ನು ಪರಿಚಯಿಸುವುದರಲ್ಲಿ ಬದ್ಧವಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದ ವರ್ಷವಷ್ಟೇ ಹೊಚ್ಚ ಹೊಸತಾದ ದಟ್ಸನ್ ಗೊ ಸಣ್ಣ ಕಾರನ್ನು ಪರಿಚಯಿಸಿತ್ತು. ಇದೀಗ ಇದೇ ತಳಹದಿಯಲ್ಲಿ ನಾಲ್ಕು ಮೀಟರ್ ಉದ್ದ ಮಿತಿಯೊಳಗೆ ಆಕರ್ಷಕ ಏಳು ಸೀಟುಗಳ ಎಂಪಿವಿ ಕಾರನ್ನು ಸಿದ್ಧಗೊಳಿಸಿದೆ. ಆದರೆ ಹೊಸ ದಟ್ಸನ್ ಗೊ ಪ್ಲಸ್ ಕಾರಿಗೆ ಸಂಸ್ಥೆಯು ಬೆಲೆ ನಿಗದಿಪಡಿಸಿರುವುದು ನಿಜ್ಜಕ್ಕೂ ಅಚ್ಚರಿಗೆ ಕಾರಣವಾಗಿದೆ. ಸಂಪೂರ್ಣ ಮಾಹಿತಿಗಾಗಿ ಮುಂದಕ್ಕೆ ಓದಿರಿ.

ದಟ್ಸನ್ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಭರ್ಜರಿ ಬಿಡುಗಡೆ

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಡಿ - 3.79 ಲಕ್ಷ ರು.
  • ಡಿ1 - 3.82 ಲಕ್ಷ ರು.
  • ಎ - 4.15 ಲಕ್ಷ ರು.
  • ಟಿ - 4.61 ಲಕ್ಷ ರು.
  • ದಹ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

    • ಡಿ - 3.96 ಲಕ್ಷ ರು.
    • ಡಿ1 - 3.98 ಲಕ್ಷ ರು.
    • ಎ - 4.33 ಲಕ್ಷ ರು.
    • ಟಿ - 4.81 ಲಕ್ಷ ರು.
    • ಐಚ್ಛಿಕ ಏರ್ ಬ್ಯಾಗ್

      ಐಚ್ಛಿಕ ಏರ್ ಬ್ಯಾಗ್

      ಅಷ್ಟೇ ಯಾಕೆ ಟಾಪ್ ಎಂಡ್ ಟಿ ವೆರಿಯಂಟ್‌ನಲ್ಲಿ ಆಪ್ಷನಲ್ ಏರ್ ಬ್ಯಾಗ್ ಆಯ್ಕೆಯನ್ನು ನೀಡಿರುವುದು ನಿಜಕ್ಕೂ ಅಚ್ಚರಿಯೆನಿಸಿದೆ. ಏಕೆಂದರೆ ಇದುವರೆಗೆ ದಟ್ಸನ್ ಕಾರುಗಳ ಸುರಕ್ಷತೆಯ ಬಗ್ಗೆ ಆತಂಕಗಳು ಎದ್ದಿದ್ದವು. ಇವೆಲ್ಲವನ್ನು ನಿಭಾಯಿಸುವಲ್ಲಿ ದಟ್ಸನ್ ಯಶಸ್ವಿಯಾಗಿದೆ.

      ದಟ್ಸನ್ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಭರ್ಜರಿ ಬಿಡುಗಡೆ

      ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ಹೇಳುವಂತೆಯೇ ದಟ್ಸನ್ ಗೊ ಪ್ಲಸ್ ಹೊಸ ಸಂಪ್ರದಾಯದ ಆರಂಭವಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲರೂ ಹೆಚ್ಚಿನ ಸೌಲಭ್ಯವನ್ನು ನಿರೀಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ದಟ್ಸನ್ ಗೊ ಪ್ಲಸ್ ಕಾರು ಕಂಪ್ಲೀಟ್ ಫ್ಯಾಮಿಲಿ ಕಾರು ಎನಿಸಿಕೊಳ್ಳಲಿದೆ.

      ದಟ್ಸನ್ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಭರ್ಜರಿ ಬಿಡುಗಡೆ

      ಇದರ 1.2 ಲೀಟರ್ ಎಂಜಿನ್ 67 ಅಶ್ವಶಕ್ತಿ ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇದು 0-100 ಕೀ.ಮೀ. ದೂರವನ್ನು 14.5 ಸೆಕೆಂಡುಗಳಲ್ಲಿ ವೇಗವರ್ಧಿಸಲಿದೆ.

      ಪ್ಲಸ್ ಪಾಯಿಂಟ್

      ಪ್ಲಸ್ ಪಾಯಿಂಟ್

      • ಕಾಂಪಾಕ್ಟ್ ಎಂಪಿವಿ ಮಾದರಿ (ಸಬ್ ಫೋರ್ ಮೀಟರ್),
      • ದೈನಂದಿನ ಪ್ರಯಾಣಕ್ಕೆ ಸೂಕ್ತ,
      • ಬಜೆಟ್ ಕಾರು,
      • ಪ್ರಭಾವಿ ಮೈಲೇಜ್,
      • ಏಳು ಸೀಟು
      • ಮುಂಗಡ ಬುಕ್ಕಿಂಗ್ ವಿಶೇಷತೆ

        ಮುಂಗಡ ಬುಕ್ಕಿಂಗ್ ವಿಶೇಷತೆ

        ಮೊದಲ 100 ಗ್ರಾಹಕರಿಗೆ ವಿಶೇಷ ಸ್ವಾಗತ ಪ್ಯಾಕೇಜ್,

        ಬುಕ್ಕಿಂಗ್ ನಗದು 11,000 ರು.

        ಪ್ರಿ ಬುಕ್ಕಿಂಗ್ ಶೇ. 100ರಷ್ಟು ರಿಫಂಡ್

        ಆಯಾಮ

        ಆಯಾಮ

        • ಉದ್ದ: 3,995 ಎಂಎಂ
        • ಅಗಲ: 1,635ಎಂಎಂ
        • ಎತ್ತರ: 1,490ಎಂಎಂ
        • ವೀಲ್ ಬೇಸ್: 2,450ಎಂಎಂ
        • ಬೂಟ್ ಸ್ಪೇಸ್ : 347 ಲೀಟರ್ (3ನೇ ಸಾಲು ಮಡಚಿದಾಗ)
        • ದಟ್ಸನ್ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಭರ್ಜರಿ ಬಿಡುಗಡೆ

          ಅಂದ ಹಾಗೆ ದಟ್ಸನ್ ಗೊ ಪ್ಲಸ್ ಚೆನ್ನೈನ ಓರಗಡಂ ಘಟಕದಲ್ಲಿ ನಿರ್ಮಾಣವಾಗಲಿದೆ. ಅಂತೆಯೇ ಎರಡು ವರ್ಷಗಳ ವಾರಂಟಿ ಲಭ್ಯವಾಗಲಿದೆ.


Most Read Articles

Kannada
English summary
Datsun Go Plus India Launch, Price, Specs, Features & Details
Story first published: Thursday, January 15, 2015, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X