ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

By Nagaraja

ಕಳೆದ ವರ್ಷ ಭಾರತಕ್ಕೆ ದಟ್ಸನ್ ಸಣ್ಣ ಕಾರು ಬ್ರಾಂಡ್ ಅನ್ನು ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್ ಪರಿಚಯಿಸಿತ್ತು.

ಇದರಂತೆ ದಟ್ಸನ್ ಗೊ ಸಣ್ಣ ಕಾರು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಚೆನ್ನೈನಲ್ಲಿ ಓರಗಡಂನಲ್ಲಿ ಸ್ಥಿತಗೊಂಡಿರುವ ನಿಸ್ಸಾನ್-ರೆನೊ ಘಟಕದಲ್ಲಿ ದಟ್ಸನ್ ಗೊ ನಿರ್ಮಾಣ ಆರಂಭಗೊಂಡಿರುವುದಾಗಿ ಕಂಪನಿ ಸ್ಪಷ್ಟಪಡಿಸಿದೆ. ಇದು ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ನಿಮ್ಮ ಮಾಹಿತಿಗಾಗಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಮಾರ್ಚ್ ತಿಂಗಳಲ್ಲಿ ವಿತರಣೆಯಾಗಲಿದೆ. ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಇದು ನಿಸ್ಸಾನ್ ಮೈಕ್ರಾದಲ್ಲಿರುವ 1.2 ಲೀಟರ್ ಎಚ್‌ಆರ್12ಡಿಇ ತ್ರಿ ಸಿಲಿಂಡರ್ ಎಂಜಿನ್‌ಗಿಂತಲೂ ಸ್ವಲ್ಪ ಭಿನ್ನವಾಗಿರಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿರಿಸಿ ದಟ್ಸನ್ ಗೊ ಉತ್ಪಾದನೆ ಸಾಗಲಿದೆ. ಇದು ರಷ್ಯಾ ಹಾಗೂ ಇಂಡೋನೇಷ್ಯಾದಲ್ಲೂ ಮಾರಾಟವಾಗಲಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ಪ್ರಮುಖವಾಗಿ ಮಾರುತಿ ಆಲ್ಟೊ ಕೆ10 ಪ್ರತಿಸ್ಪರ್ಧಿಯಾಗಿ ದಟ್ಸನ್ ಸಣ್ಣ ಕಾರು ಗುರಿತಿಸಿಕೊಳ್ಳಲಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ಅಂದ ಹಾಗೆ ದಟ್ಸನ್ ಗೊ ಬೆನ್ನಲ್ಲೇ ಗೊ ಪ್ಲಸ್ ಎಂಪಿವಿ ಮತ್ತು ಎಲ್2 ಸಣ್ಣ ಕಾರು ಸಹ ಆಗಮನವಾಗಲಿದೆ. ಇದು ಗೊ ಹ್ಯಾಚ್‌ಬ್ಯಾಕ್‌ಗಿಂತಲೂ ಕೆಳ ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ಮೂಲಗಳ ಪ್ರಕಾರ ದಟ್ಸನ್ ಗೊ ದರ ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಅಲ್ಲದೆ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ನಿಸ್ಸಾನ್ ಮೈಕ್ರಾ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ದಟ್ಸನ್ ಗೊ ಸಣ್ಣ ಕಾರು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ದಟ್ಸನ್ ಗೊ ವಿನ್ಯಾಸ ಹಾಗೂ ಹೆಚ್ಚಿನ ಸ್ಥಳಾವಕಾಶ ಈಗಾಗಲೇ ವಿಮರ್ಶಕರ ಮನ ಗೆಲ್ಲುವಲ್ಲಿ ಯಶಸ್ಸನ್ನು ಕಂಡಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ಆರಂಭದಲ್ಲಿ ದೇಶದಲ್ಲಿ ಸ್ಥಿತಗೊಂಡಿರುವ 150ರಷ್ಟು ನಿಸ್ಸಾನ್ ಡೀಲರುಗಳ ಮುಖಾಂತರ ದಟ್ಸನ್ ಗೊ ಪ್ಲಸ್ ಮಾರಾಟವಾಗಲಿದೆ. ಮುಂದಿನ ದಿನಗಳಲ್ಲಿ ದಟ್ಸನ್ ತನ್ನದೇ ಆದ ವಿಭಿನ್ನ ವಾಹನ ಪ್ರದರ್ಶನ ಮಳಿಗೆಯನ್ನು ದೇಶೆದೆಲ್ಲೆಡೆ ತೆರೆದುಕೊಳ್ಳುವ ಯೋಜನೆಯನ್ನಿಟ್ಟುಕೊಂಡಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ದೇಶದಲ್ಲಿ ಎಂಟ್ರಿ ಲೆವೆಲ್ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ದಟ್ಸನ್ ಹೊಂದಿದೆ.

ಕೌಂಟ್ ಡೌನ್ ಶುರು; ದಟ್ಸನ್ ಗೊ ನಿರ್ಮಾಣ ಆರಂಭ

ಇದರೊಂದಿಗೆ ಎಂಟ್ರಿ ಲೆವೆಲ್ ಮಾರುಕಟ್ಟೆಯಲ್ಲೂ ಪ್ರತಿಸ್ಪರ್ಧೆ ಕೂಡಾ ಹೆಚ್ಚಲಿದೆ. ಇದು ಭಾರತ ವಾಹನ ಮಾರುಕಟ್ಟೆ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿದೆ.

Most Read Articles

Kannada
English summary
Datsun today announced the start of the production of Datsun GO hatchback in India in an event presided over by Vincent Cobee, Global Head, Datsun. The automaker's entry level vehicle will be manufactured in Renault-Nissan's facility in Oragadam,Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X