ಡಿಸಿ ಮೋಹದ ಬಲೆಗೆ ಬಿದ್ದ ಇನ್ನೋವಾ

By Nagaraja

ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರನ್ನು ಮಾರ್ಪಾಡುಗೊಳಿಸುವುದರಲ್ಲಿ ನಿಸ್ಸೀಮವಾಗಿರುವ ದೇಶದ ಮುಂಚೂಣಿಯ ಡಿಸೈನ್ ಸಂಸ್ಥೆಯಾಗಿರುವ ಡಿಸಿ ಡಿಸೈನ್ ಮಗದೊಂದು ಆಕರ್ಷಕ ಕಾರಿಗೆ ಕೆತ್ತನೆ ಪ್ರಯೋಗ ಮಾಡಿದೆ.

ಹೌದು, ಈ ಬಾರಿ ಡಿಸಿ ಮೋಹದ ಬಲೆಗೆ ಸಿಲುಕಿರುವುದು ದೇಶದ ಅತ್ಯಂತ ಜನಪ್ರಿಯ ಬಹು ಬಳಕೆಯ ಕಾರಾಗಿರುವ ಟೊಯೊಟಾ ಇನ್ನೋವಾ. 2005ನೇ ಇಸವಿಯಲ್ಲಿ ದೇಶಕ್ಕೆ ಮೊದಲ ಬಾರಿ ಪರಿಚಯವಾಗಿರುವ ಇನ್ನೋವಾ ಈಗಲೂ ಉತ್ತಮ ಬೇಡಿಕೆ ಕಾಯ್ದುಕೊಳ್ಳಲು ಯಶಸ್ವಿಯಾಗಿದೆ.

ಡಿಸಿ ಮೋಹದ ಬಲೆಗೆ ಬಿದ್ದ ಇನ್ನೋವಾ

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಮುಂಭಾಗದಲ್ಲಿ ಸಂಪೂರ್ಣ ವಿಭಿನ್ನವಾದ ವಿನ್ಯಾಸ ತಂತ್ರಗಾರಿಕೆಯನ್ನು ಡಿಸಿ ಡಿಸೈನ್ ಅನುಸರಿಸಿದೆ. ಇದು ಪರಿಷ್ಕೃತ ಗ್ರಿಲ್, ಹೆಡ್ ಲೈಟ್, ಫಾಗ್ ಲ್ಯಾಂಪ್ ಜೊತೆಗೆ ಬದಿಯಲ್ಲಿ ಕ್ಲಾಡಿಂಗ್ ಪಡೆದುಕೊಂಡಿದೆ.

ಡಿಸಿ ಮೋಹದ ಬಲೆಗೆ ಬಿದ್ದ ಇನ್ನೋವಾ

ಇನ್ನು ಕಾರಿನೊಳಗೆ ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ. ಅಲ್ಲದೆ ಮರದ ಸ್ಪರ್ಶವನ್ನು ನೀವು ನೋಡಬಹುದಾಗಿದೆ. ಮೀಡಿಯಾ ಕಂಟ್ರೋಲ್ ಸಂಪೂರ್ಣ ಹೊಸತನವನ್ನು ಕಾಯ್ದುಕೊಂಡಿದೆ.

ಡಿಸಿ ಮೋಹದ ಬಲೆಗೆ ಬಿದ್ದ ಇನ್ನೋವಾ

ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರ ಕಾಣಸಿಗುವ ಮೂನ್ ಲೈಟಿಂಗ್ ಸೌಲಭ್ಯವನ್ನು ನೀವು ಅನುಭವಿಸಬಹುದಾಗಿದೆ. ಇದು ನಿಜಕ್ಕೂ ದುಬಾರಿ ಕಾರಿನ ಅನುಭವ ನೀಡಲಿದೆ.

ಡಿಸಿ ಮೋಹದ ಬಲೆಗೆ ಬಿದ್ದ ಇನ್ನೋವಾ

ಅಂತೆಯೇ ಗರಿಷ್ಠ ಗುಣಮಟ್ಟತೆಯ ವಿಭಜಿತ ಆಸನ ವ್ಯವಸ್ಥೆಯನ್ನು ಕೊಡಲಾಗಿದೆ. ಇದರಲ್ಲಿಯೇ ಎಸಿ ಕಂಟ್ರೋಲ್ ಇನ್ನಿತರ ಸೌಲಭ್ಯಗಳು ನೆರವಾಗಲಿದೆ. ಒಟ್ಟಿನಲ್ಲಿ ಗರಿಷ್ಠ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ.

ಡಿಸಿ ಮೋಹದ ಬಲೆಗೆ ಬಿದ್ದ ಇನ್ನೋವಾ

ಇದು ಡಿಸಿಯಿಂದ ವಿನ್ಯಾಸಗೊಂಡಿರುವ ಟೊಯೊಟಾ ಇನ್ನೋವಾ ಕಾರಿನ ಆಂತರಿಕ ನೋಟ. ಇದು 10 ವಿಧಗಳಲ್ಲಿ ಹೊಂದಾಣಿಸಬಹುದಾದ ಪವರ್ ಸೀಟು, 15.7 ಸ್ಕ್ರೀನ್ ಪರದೆ, ಮಡಚಬಹುದಾದ ಟೇಬಲ್ ವ್ಯವಸ್ಥೆ ಇನ್ನಿತರ ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಡಿಸಿ ಮೋಹದ ಬಲೆಗೆ ಬಿದ್ದ ಇನ್ನೋವಾ

ಅಷ್ಟಕ್ಕೂ ನಿಮ್ಮ ಇನ್ನೋವಾ ಕಾರಿನಲ್ಲಿ ಇಂತಹ ಬದಲಾವಣೆಗಳನ್ನು ಬಯಸುವುದಾದ್ದಲ್ಲಿ ಇನ್ಯಾಕೆ ತಡ ಮಾಡುವೀರಾ? ಈ ಕೂಡಲೇ ಡಿಸಿ ಡಿಸೈನ್ ಸಂಪರ್ಕಿಸಿ

ಡಿಸಿ ಮೋಹದ ಬಲೆಗೆ ಬಿದ್ದ ಇನ್ನೋವಾ

ನಿಮ್ಮ ಮಾಹಿತಿಗಾಗಿ, ಪ್ರಖ್ಯಾತ ವಾಹನ ವಿನ್ಯಾಸಗಾರ ದಿಲೀಪ್ ಛಾಬ್ರಿಯಾ ಎಂಬವರು ದೆಹಲಿ ಮೂಲದ ಡಿಸಿ ಡಿಸೈನ್ ಸಂಸ್ಥೆಯ ಸೂತ್ರಧಾರಿಯಾಗಿದ್ದಾರೆ. ಇವರ ನೇತೃತ್ವದಲ್ಲಿ ಈಗಾಗಲೇ ಅನೇಕ ಜನಪ್ರಿಯ ಮಾದರಿಗಳು ಮಾರ್ಪಾಡುಗೊಂಡಿದೆ.

Most Read Articles

Kannada
English summary
DC Design customized Toyota Innova
Story first published: Friday, November 28, 2014, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X