ಬ್ರೆಜಿಲ್‌ನಲ್ಲಿ ಅರಳಿದ ಇಕೊಸ್ಪೋರ್ಟ್‌‌ನ 3 ಕಾನ್ಸೆಪ್ಟ್‌ಗಳು

By Nagaraja

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ 2014 ಸಾವೋ ಪಾಲೋ ಮೋಟಾರು ಶೋದಲ್ಲಿ ಮೂರು ನೂತನ ಇಕೊಸ್ಪೋರ್ಟ್ ಕಾನ್ಸೆಪ್ಟ್‌ಗಳ ಪರಿಚಯವಾಗಿದೆ. ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ಇಕೊಸ್ಪೋರ್ಟ್ ಮಾದರಿಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಅಥವಾ ಗ್ರಾಹಕರ ಬಯಕೆಗಳಿಗೆ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಈ ಆಟೋ ಶೋದಲ್ಲಿ ಉತ್ತರ ದೊರಕಿದೆ.

ನಿಮ್ಮ ಮಾಹಿತಿಗಾಗಿ, ಇಕೊಸ್ಪೋರ್ಟ್ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ದೇಶಗಳಲ್ಲಿ ಬ್ರೆಜಿಲ್ ಒಂದಾಗಿದೆ. ಈ ನಿಟ್ಟಿನಲ್ಲಿ ಹೊಸ ಅವತಾರದೊಂದಿಗೆ ಇಕೊಸ್ಪೋರ್ಟ್ ಅನಾವರಣಗೊಳಿಸಲು ಇದೇ ಸರಿಯಾದ ಸಂದರ್ಭ ಎಂಬುದನ್ನು ಸಂಸ್ಥೆ ಮನಗಂಡಿದೆ. ಅಷ್ಟಕ್ಕೂ ಸಾವೋ ಪಾಲೋದಲ್ಲಿ ಅನಾವರಣಗೊಂಡಿರುವ ಇಕೊಸ್ಪೋರ್ಟ್‌ನ ಮೂರು ಹೊಸ ಕಾನ್ಸೆಪ್ಟ್ ಮಾದರಿಗಳು ಯಾವುದು ಅಂತೀರಾ? ಮುಂದಕ್ಕೆ ಓದಿ...

ಬ್ರೆಜಿಲ್‌ನಲ್ಲಿ ಅರಳಿದ ಇಕೊಸ್ಪೋರ್ಟ್‌‌ನ 3 ಕಾನ್ಸೆಪ್ಟ್‌ಗಳು

ಇಲ್ಲಿ ಒಂದಲ್ಲ ಎರಡಲ್ಲ ಬದಲಾಗಿ ಮೂರು ಇಕೊಸ್ಪೋರ್ಟ್ ಕಾನ್ಸೆಪ್ಟ್‌ಗಳನ್ನು ಸಾವೋ ಪಾಲೋದಲ್ಲಿ ಪ್ರದರ್ಶಿಸಲಾಗಿದೆ. ಅವುಗಳೆಂದರೆ ಇಕೊಸ್ಪೋರ್ಟ್ ಬ್ಯೂಟಿ, ಬೀಸ್ಟ್ ಮತ್ತು ಸ್ಟ್ರೋಮ್. ಸಹಜವಾಗಿಯೇ ಬ್ರೆಜಿಲ್ ಅತಿದೊಡ್ಡ ಹಾಗೂ ಜಗತ್ತಿನ ಅತ್ಯಂತ ಪ್ರತಿಷ್ಠಿತ ಆಟೋ ಶೋಗಳಲ್ಲಿ ಒಂದಾಗಿರುವ ಸಾವೋ ಪಾಲೋ ವಾಹನ ಪ್ರೇಮಿಗಳ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇಕೊಸ್ಪೋರ್ಟ್ ಬ್ಯೂಟಿ ಕಾನ್ಸೆಪ್ಟ್

ಇಕೊಸ್ಪೋರ್ಟ್ ಬ್ಯೂಟಿ ಕಾನ್ಸೆಪ್ಟ್

ಬ್ರೆಜಿಲ್‌ನಲ್ಲಿ ಪ್ರದರ್ಶನವಾಗಿರುವ ಮೂರು ಪರಿಕಲ್ಪನೆಗಳ ಪೈಕಿ ಬ್ಯೂಟಿ ಕಾನ್ಸೆಪ್ಟ್ ಅತ್ಯಂತ ಕಡಿಮೆ ಬದಲಾವಣೆಗಳನ್ನು ಪಡೆದುಕೊಂಡಿದೆ. ಇದು 18 ಇಂಚಿನ ಅಲಾಯ್ ವೀಲ್ ಜೊತೆ ಸ್ಟೈಲಿಷ್ ಪ್ರೊಫೈಲ್ ಚಕ್ರ, ಬ್ಲ್ಯಾಕ್ ರೂಫ್ ಜೊತೆ ಮೆಟ್ಯಾಲಿಕ್ ಫಿನಿಶ್, ರೂಫ್ ರೈಲ್, ಮ್ಯಾಟ್ ಫಿನಿಶ್ ಗ್ರಿಲ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಲೋವರ್ ಬಂಪರ್‌ನಲ್ಲಿ ಗಾರ್ಡ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇಕೊಸ್ಪೋರ್ಟ್ ಬ್ಯೂಟಿ ಕಾನ್ಸೆಪ್ಟ್

ಇಕೊಸ್ಪೋರ್ಟ್ ಬ್ಯೂಟಿ ಕಾನ್ಸೆಪ್ಟ್

ಇನ್ನು ಕಾರಿನೊಳಗೆ ನಾಲ್ಕು ಪ್ರಯಾಣಿಕರಿಗಾಗಿ ಲೆಥರ್ ಸೀಟು, ವೈಯಕ್ತಿಕ ಕಲರ್ ಸ್ಕ್ರೀನ್, ಇಂಟರ್‌ನೆಟ್, ಚಲನಚಿತ್ರ, ಮ್ಯೂಸಿಕ್, ಕಲರ್ ಬಾಡಿ ಹ್ಯಾಂಡಲ್, ಡ್ಯಾಶ್‌ಬೋರ್ಡ್, ಟಚ್‌ಸ್ಕ್ರೀನ್ ಮತ್ತು ನೇವಿಗೇಷನ್ ನಿಯಂತ್ರಣವನ್ನು ಪಡೆದುಕೊಂಡಿದೆ.

ಬೀಸ್ಟ್ ಕಾನ್ಸೆಪ್ಟ್

ಬೀಸ್ಟ್ ಕಾನ್ಸೆಪ್ಟ್

ಬಿಳಿ ಮುತ್ತಿನ ಬಣ್ಣವನ್ನು ಹೊಂದಿಂರುವ ಫೋರ್ಡ್ ಬೀಸ್ಟ್ ಕಾನ್ಸೆಪ್ಟ್, ಕಪ್ಪು ಹಾಗೂ ಕೆಂಪು ಬಣ್ಣದ ಮಿಶ್ರಣವನ್ನು ಪಡೆದುಕೊಂಡಿದೆ. ಇದು ಸೆಂಟರ್ ಬೊನೆಟ್‌ನಲ್ಲಿ ದೊಡ್ಡದಾದ ಏರ್ ಡ್ಯಾಮ್, ಕಾರಿನ ಮೇಲ್ಗಡೆ ಕೆಂಪು ಪಟ್ಟಿ, ಹೆಕ್ಸಾಗಾನಲ್ ಗ್ರಿಲ್, ಔಟ್‌ಸೈಡ್ ರಿಯರ್ ವ್ಯೂ ಮಿರರ್, ಸಿಲ್ವರ್ ಸ್ಕಿಡ್ ಪ್ಲೇಟ್, ಡೋರ್ ಹ್ಯಾಂಡಲ್ ಮುಂತಾದ ವಿಶಿಷ್ಟತೆಗಳನ್ನು ಪಡೆದುಕೊಳ್ಳಲಿದೆ.

ಸ್ಟ್ರೋಮ್ ಕಾನ್ಸೆಪ್ಟ್

ಸ್ಟ್ರೋಮ್ ಕಾನ್ಸೆಪ್ಟ್

ಹೆಸರಲ್ಲೇ ಸೂಚಿಸಿರುವಂತೆಯೇ ಮೇಲೆ ತಿಳಿಸಿರುವ ಎರಡು ಕಾನ್ಸೆಪ್ಟ್‌ಗಂತಲೂ ತುಂಬಾ ವಿಭಿನ್ನವಾದ ಬದಲಾವಣೆಗಳನ್ನು ಸ್ಟ್ರೋಮ್ ಕಾನ್ಸೆಪ್ಟ್ ಪಡೆದುಕೊಂಡಿದೆ. ಇದು ಪ್ಲಾಸ್ಟಿಕ್ ಕ್ಲಾಡಿಂಗ್, ವೀಲ್ ಆರ್ಚ್ ಮುಂತಾದ ವಿಶಿಷ್ಟತೆಗಳನ್ನು ಕಾಣಬಹುದಾಗಿದೆ.

ಸ್ಟ್ರೋಮ್ ಕಾನ್ಸೆಪ್ಟ್

ಸ್ಟ್ರೋಮ್ ಕಾನ್ಸೆಪ್ಟ್

ಫೋರ್ಡ್‌ನ ಪಿಕಪ್ ಟ್ರಕ್ ಎಫ್150 ರಾಪ್ಟರ್‌ನಿಂದ ಸ್ಪೂರ್ತಿ ಪಡೆದಿರುವ ಈ ಕಾನ್ಸೆಪ್ಟ್ 15 ಇಂಚಿನ ಮಡ್ ಟರೈನ್ ಆಫ್ ರೋಡ್ ಚಕ್ರ, ರೂಫ್ ರೈಲ್, ಗ್ರೇ ಫಿನಿಶ್ ಬೊನೆಟ್, ಸೈಡ್ ಕ್ಲಾಡಿಂಗ್ ಎಂಬಿತ್ಯಾದಿ ಸೌಲಭ್ಯಗಳನ್ನು ಪಡೆದುಕೊಂಡಿದೆ.


Most Read Articles

Kannada
English summary
American carmaker Ford has come up with as many as three new concepts based on its high selling EcoSport compact SUV at the ongoing 2014 Sao Paulo International Motor Show.
Story first published: Thursday, October 30, 2014, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X