ಡಿಜೈರ್ ಸ್ಪರ್ಧಿ ಹೊಸ ಫೋರ್ಡ್ ಕಾರಿನ ಹೆಸರು ಏನು ಗೊತ್ತೇ?

By Nagaraja

ಅಮೆರಿಕ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ಭಾರತದಲ್ಲಿ ನೂತನ ಸೆಡಾನ್ ಕಾರೊಂದನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಅಷ್ಟಕ್ಕೂ ಈ ಹೊಸ ಕಾರು ಯಾವುದು ಎಂಬುದನ್ನು ತಿಳಿಯುವ ಕುತೂಹಲ ನಮ್ಮದ್ದಾಗಿತ್ತು.

ಇದಕ್ಕೀಗ ಸ್ಪಷ್ಟ ಉತ್ತರ ದೊರಕಿದ್ದು, ಹೊಸ ಫೋರ್ಡ್ ಕಾರು 'ಫಿಗೊ ಆಸ್ಪೈರ್' ಎಂಬ ಹೆಸರಿನಿಂದ ಅರಿಯಲ್ಪಡಲಿದೆ. ತವರೂರಾದ ಅಮೆರಿಕ ಹಾಗೂ ಬ್ರೆಜಿಲ್ ಮಾರುಕಟ್ಟೆಯನ್ನು ಈಗಾಗಲೇ ತಲುಪಿರುವ ಫೋರ್ಡ್ ಆಸ್ಪೈರ್ ಭಾರತ ವಾಹನ ಮಾರುಕಟ್ಟೆಯತ್ತ ದೃಷ್ಟಿ ನೆಟ್ಟಿದೆ.

ಫೋರ್ಡ್ ಹೊಸ ಕಾಂಪಾಕ್ಟ್ ಸೆಡಾನ್ ಕಾರು - ಫಿಗೊ ಆಸ್ಪೈರ್

2015ರಲ್ಲಿ ಹೊಸ ಪೀಳಿಗೆಯ ಫಿಗೊ ಬಿಡುಗಡೆ ಮಾಡುವುದು ಸಂಸ್ಥೆಯ ಇರಾದೆಯಾಗಿದೆ. ಇಕೊಸ್ಪೋರ್ಟ್‌ಗಳಂತಹ ಯಶಸ್ವಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳನ್ನು ಭಾರತಕ್ಕೆ ಪರಿಚಯಿಸಿರುವ ಫೋರ್ಡ್ ಸೆಡಾನ್ ಕಾರಿನಲ್ಲೂ ಮೋಡಿ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಫೋರ್ಡ್ ಹೊಸ ಕಾಂಪಾಕ್ಟ್ ಸೆಡಾನ್ ಕಾರು - ಫಿಗೊ ಆಸ್ಪೈರ್

ಸೆಡಾನ್ ಕಾರು ಮಾತ್ರವಲ್ಲದೆ ಇನ್ನಿತರ ಶ್ರೇಣಿಯ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಫೋರ್ಡ್ ಹೊಂದಿದೆ. ಇದರಲ್ಲಿ ಆಸ್ಪೈರ್ ಹೊರತಾಗಿ ಎಲ್ಲ ಹೊಸತನದ ಎಂಡೀವರ್ ಎಸ್‌ಯುವಿ, ಮುಂದಿನ ಪೀಳಿಗೆಯ ಫಿಗೊ ಹ್ಯಾಚ್‌ಬ್ಯಾಕ್ ಪ್ರಮುಖವಾಗಿದೆ.

ಫೋರ್ಡ್ ಹೊಸ ಕಾಂಪಾಕ್ಟ್ ಸೆಡಾನ್ ಕಾರು - ಫಿಗೊ ಆಸ್ಪೈರ್

ವಿಶೇಷವೆಂದರೆ ಫೋರ್ಡ್ ಹೊಸ ಆಸ್ಪೈರ್ ಕಾರು ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ. ಭಾರತದಲ್ಲಿ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫೋರ್ಡ್ ಆಗಮನವಾಗುವ ಇನ್ನಷ್ಟು ಪೈಪೋಟಿಗೆ ಕಾರಣವಾಗಲಿದೆ.

ಫೋರ್ಡ್ ಹೊಸ ಕಾಂಪಾಕ್ಟ್ ಸೆಡಾನ್ ಕಾರು - ಫಿಗೊ ಆಸ್ಪೈರ್

ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಈಗಾಗಲೇ ಮಾರುತಿ ಸ್ವಿಫ್ಟ್ ಡಿಜೈರ್, ಹ್ಯುಂಡೈ ಎಕ್ಸ್‌ಸೆಂಟ್, ಹೋಂಡಾ ಅಮೇಜ್ ಹಾಗೂ ಟಾಟಾ ಜೆಸ್ಟ್ ಮಾದರಿಗಳು ಉತ್ತಮ ಮಾರಾಟ ಕಂಡುಕೊಳ್ಳುತ್ತಿದೆ. ಹಾಗಿರುವಾಗ ಫೋರ್ಡ್ ಹೇಗೆ ಚಮತ್ಕಾರ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಫೋರ್ಡ್ ಹೊಸ ಕಾಂಪಾಕ್ಟ್ ಸೆಡಾನ್ ಕಾರು - ಫಿಗೊ ಆಸ್ಪೈರ್

ಹೊಸ ಆಸ್ಪೈರ್ ಕಾರಿನಲ್ಲಿ ಹ್ಯಾಚ್‌ಬ್ಯಾಕ್‌ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ಹಾಗಿದ್ದರೂ ಸೌಲಭ್ಯ ಹಾಗೂ ಸುರಕ್ಷತೆಯ ವಿಚಾರಕ್ಕೆ ಬಂದಾಗ ಬದಲಾವಣೆ ಕಂಡುಬರಲಿದೆ.

Most Read Articles

Kannada
English summary
The American manufacturer has planned to launch next-generation Figo in India during 2015, along with the Figo compact sedan. Now the main question is what would Ford call it first compact sedan in India. They have opted to name its offering as the ‘Figo Aspire'.
Story first published: Tuesday, March 3, 2015, 9:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X