ಇಕೊಬೂಸ್ಟ್ ಎಂಜಿನ್ ಜೊತೆ ಫೋರ್ಡ್ ಫಿಯೆಸ್ಟಾ ಎಂಟ್ರಿ

By Nagaraja

ಫೋರ್ಡ್‌ನ ಇಕೊಬೂಸ್ಟ್ ಎಂಜಿನ್ ಸಮಕಾಲೀನ ಕಾಲಘಟ್ಟದಲ್ಲಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾದ ಎಂಜಿನ್ ಆಗಿದೆ. ಸಹಜವಾಗಿಯೇ ಇದರಿಂದ ಉತ್ತಮ ಬೇಡಿಕೆ ಕಾಯ್ದುಕೊಳ್ಳಲು ಫೋರ್ಡ್‌ಗೆ ಸಾಧ್ಯವಾಗಿದೆ. ಕೇವಲ ಭಾರತದಲ್ಲಷ್ಟೇ ಅಲ್ಲ ವಿದೇಶಿ ಮಾರುಕಟ್ಟೆಯಲ್ಲೂ ಇಕೊಬೂಸ್ಟ್ ಎಂಜಿನ್ ಹೊಂದಿದ ಫೋರ್ಡ್ ಕಾರುಗಳಿಗೆ ಹೆಚ್ಚಿನ ಮಾನ್ಯತೆಯಿದೆ.

ಇದನ್ನು ಗಮನಿಸಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಮಲೇಷ್ಯಾ ಮಾರುಕಟ್ಟೆಗೆ ನೂತನ ಇಕೊಬೂಸ್ಟ್ ಎಂಜಿನ್ ಜೊತೆ ಫಿಯೆಸ್ಟಾ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದೆ. ಇದು ಮುಂದಿನ ದಿನಗಳಲ್ಲಿ ಭಾರತ ಪ್ರವೇಶ ಪಡೆಯಲಿದೆಯೇ ಎಂಬುದು ಕಾರು ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ಇಕೊಬೂಸ್ಟ್ ಎಂಜಿನ್ ಜೊತೆ ಫೋರ್ಡ್ ಫಿಯೆಸ್ಟಾ ಎಂಟ್ರಿ

ನಿಮ್ಮ ಮಾಹಿತಿಗಾಗಿ, ಭಾರತದಲ್ಲಿ ಸೆಡಾನ್ ಶೈಲಿಯ ಫಿಯೆಸ್ಟಾ ಕಾರು ಮಾತ್ರ ಮಾರಾಟದಲ್ಲಿದೆ. ಸದ್ಯ ಭಾರತಕ್ಕೂ ಇಕೊಬೂಸ್ಟ್ ಎಂಜಿನ್ ಪರಿಚಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಇಕೊಬೂಸ್ಟ್ ಎಂಜಿನ್ ಜೊತೆ ಫೋರ್ಡ್ ಫಿಯೆಸ್ಟಾ ಎಂಟ್ರಿ

ಫೋರ್ಡ್‌ನ 998ಸಿಸಿ ಇಕೊಬೂಸ್ಟ್ ಎಂಜಿನ್ (1.0 ಲೀಟರ್) 3 ಸಿಲಿಂಡರ್ ಟರ್ಬೊಚಾರ್ಜರ್, 170 ಎನ್‌ಎಂ ಪೀಕ್ ಟಾರ್ಕ್ ಜತೆಗೆ 125 ಪಿಎಸ್ ಪವರ್ ಉತ್ಪಾದಿಸುತ್ತದೆ. ಜತೆಗೆ 6 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಹೊಂದಿರಲಿದೆ.

ಇಕೊಬೂಸ್ಟ್ ಎಂಜಿನ್ ಜೊತೆ ಫೋರ್ಡ್ ಫಿಯೆಸ್ಟಾ ಎಂಟ್ರಿ

ಫೋರ್ಡ್‌ನ ರೋಮನಿಯಾ ಘಟಕದಲ್ಲಿ ಇಕೊಬೂಸ್ಟ್ ಎಂಜಿನ್ ಉತ್ಪಾದನೆಯಾಗಲಿದೆ. ಪ್ರಸ್ತುತ ಎಂಜಿನ್ ಈಗಾಗಲೇ ಜಾಗತಿಕವಾಗಿ ವರ್ಷದ ಎಂಜಿನ್ (ಸತತ ಎರಡು ವರ್ಷ) ಪ್ರಶಸ್ತಿಗೂ ಭಾಜನವಾಗಿದೆ.

ಇಕೊಬೂಸ್ಟ್ ಎಂಜಿನ್ ಜೊತೆ ಫೋರ್ಡ್ ಫಿಯೆಸ್ಟಾ ಎಂಟ್ರಿ

ಮಲೇಷ್ಯಾದಲ್ಲಿ ಇಕೊಬೂಸ್ಟ್ ಹೊಂದಿರುವ ಫೋರ್ಡ್ ಫಿಯೆಸ್ಟಾ 17.29 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಇದು ದುಬಾರಿಯಾಗಿ ಅನಿಸಿದರೂ ಭಾರತಕ್ಕೆ ಈ ಎಂಜಿನ್ ಪರಿಚವಾದ್ದಲ್ಲಿ ಇಕೊಸ್ಪೋರ್ಟ್‌ಗೆ ಸಮಾನವಾದ ದರದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಇಕೊಬೂಸ್ಟ್ ಎಂಜಿನ್ ಜೊತೆ ಫೋರ್ಡ್ ಫಿಯೆಸ್ಟಾ ಎಂಟ್ರಿ

ಅದೇ ಹೊತ್ತಿಗೆ ಮೂರು ನೂತನ ಬಣ್ಣಗಳ ಆಯ್ಕೆಯನ್ನು ನೂತನ ಫೋರ್ಡ್ ಫಿಯೆಸ್ಟಾ ಪಡೆದುಕೊಂಡಿದೆ. ಅವುಗಳೆಂದರೆ ಟ್ರು ರೆಡ್, ಆರ್ಕಿಟಿಕ್ ವೈಟ್ ಮತ್ತು ಬ್ಲ್ಯಾಕ್.

Most Read Articles

Kannada
English summary
Ford offers their Fiesta with a 1.5-litre engine, however, with their revolutionary EcoBoost engine, it was a definite match in the light hatchback.
Story first published: Monday, May 5, 2014, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X