ಹೊಸ ಷೆವರ್ಲೆ ಬೀಟ್ ಲಾಂಚ್; ನಿಮ್ಮ ನಿರೀಕ್ಷೆ ಏನು?

By Nagaraja

ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್, ಪ್ರತಿಷ್ಠಿತ ದೆಹಲಿ ಆಟೋ ಎಕ್ಸ್ ಪೋದಲ್ಲಿ ನೂತನ ಷೆವರ್ಲೆ ಬೀಟ್ ಹ್ಯಾಚ್‌ಬ್ಯಾಕ್ ಕಾರನ್ನು ಲಾಂಚ್ ಮಾಡಿದೆ.

2014 ಆಟೋ ಎಕ್ಸ್ ಪೋ ಲೈವ್

ಜನರಲ್ ಮೋಟಾರ್ಸ್ ಪೈಕಿ ಷೆವರ್ಲೆ ಬೀಟ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರಾಗಿದೆ. ಇದಲ್ಲದೆ ಈ 12ನೇ ಆಟೋ ಶೋದಲ್ಲಿ ಷೆವರ್ಲೆ ಆಡ್ರಾ ಕಾನ್ಸೆಪ್ಟ್ ಎಸ್‌ಯುವಿ ಕೂಡಾ ಅನಾವರಣಗೊಳಿಸಲಾಗಿದೆ.

ಹೊಸ ಷೆವರ್ಲೆ ಬೀಟ್ ಲಾಂಚ್; ನಿಮ್ಮ ನಿರೀಕ್ಷೆ ಏನು?

ಒಟ್ಟು ಮೂರು ಇಂಧನ ಆಯ್ಕೆಗಳಲ್ಲಿ ಷೆವರ್ಲೆ ಬೀಟ್ ಲಭ್ಯವಾಗಿಲಿದೆ. ಅವುಗಳೆಂದರೆ,

  • ಪೆಟ್ರೋಲ್,
  • ಡೀಸೆಲ್ ಮತ್ತು
  • ಎಲ್‌ಪಿಜಿ
  • ಹೊಸ ಷೆವರ್ಲೆ ಬೀಟ್ ಲಾಂಚ್; ನಿಮ್ಮ ನಿರೀಕ್ಷೆ ಏನು?

    ಒಟ್ಟು 10 ವಿಭಿನ್ನ ವೆರಿಯಂಟ್‌ಗಳಲ್ಲಿ ಲಭ್ಯವಾಗಿರುವ ಷೆವರ್ಲೆ ಬೀಟ್ ದರ 4.06 ಲಕ್ಷ ರು.ಗಳಿಂದ 6.10 ಲಕ್ಷ ರು.ಗಳ ವರೆಗಿದೆ.

    ಹೊಸ ಷೆವರ್ಲೆ ಬೀಟ್ ಲಾಂಚ್; ನಿಮ್ಮ ನಿರೀಕ್ಷೆ ಏನು?

    ಇನ್ನು ಭಾರತ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮಾನ್ಯತೆ ಪ್ರಕಾರ ನೂತನ ಷೆವರ್ಲೆ ಡೀಸೆಲ್ ವೆರಿಯಂಟ್ ಪ್ರತಿ ಲೀಟರ್‌ಗೆ 25.44 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಇದರ ಪೆಟ್ರೋಲ್ ಹಾಗೂ ಎಲ್‌ಪಿಜಿ ವೆರಿಯಂಟ್‌ಗಳು ಅನುಕ್ರಮವಾಗಿ ಲೀಟರ್‌ಗೆ 18.6 ಹಾಗೂ 13.3 ಕೀ.ಮೀ.ಗಳಷ್ಟು ಮೈಲೇಜ್ ನೀಡಲಿದೆ.

    ಹೊಸ ಷೆವರ್ಲೆ ಬೀಟ್ ಲಾಂಚ್; ನಿಮ್ಮ ನಿರೀಕ್ಷೆ ಏನು?

    ಮತ್ತೊಂದೆಡೆ ಬೆಂಗಳೂರಿನಲ್ಲಿ ಜನರಲ್ ಮೋಟಾರ್ಸ್ ತಾಂತ್ರಿಕ ಕೇಂದ್ರದಲ್ಲಿ ಭಾರತೀಯ ವಿನ್ಯಾಸಗಾರರಿಂದ ಅಭಿವೃದ್ಧಿ ಪಡಿಸಲಾಗಿರುವ ಷೆವರ್ಲೆ ಆಡ್ರಾ ಕಾನ್ಸೆಫ್ಟ್ ಎಸ್‌ಯುವಿ, 2014 ಆಟೋ ಎಕ್ಸ್ ಪೋ ಮೂಲಕ ಜಾಗತಿಕ ಎಂಟ್ರಿ ಪಡೆದುಕೊಂಡಿದೆ.

    ಹೊಸ ಷೆವರ್ಲೆ ಬೀಟ್ ಲಾಂಚ್; ನಿಮ್ಮ ನಿರೀಕ್ಷೆ ಏನು?

    ಅಂತಿಮ ಷೆವರ್ಲೇ ಉನ್ನತ ವೆರಿಯಂಟ್ ಡ್ಯುಯಲ್ ಏರ್ ಬ್ಯಾಗ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್‌ಗಳಂಹತ ಸೌಲಭ್ಯಗಳನ್ನು ಪಡೆಯಲಿದೆ.

Most Read Articles

Kannada
English summary
GM India launches new Chevrolet Beat at 2014 Auto Expo
Story first published: Wednesday, February 5, 2014, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X