ಸ್ವಿಫ್ಟ್‌ಗೆ ಕಂಟಕವಾದ ಹ್ಯುಂಡೈ ಐ10 'ಗ್ರಾಂಡ್' ಸಕ್ಸಸ್

By Nagaraja

ಎರಡು ತಿಂಗಳುಗಳ ಹಿಂದಯಷ್ಟೇ ಲಗ್ಗೆಯಿಟಿದ್ದ ಹ್ಯುಂಡೈ ಗ್ರಾಂಡ್ ಐ10 ದೇಶದ ಮಾರುಕಟ್ಟೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಯಶ ಸಾಧಿಸಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಎಲ್ಲರ ನಿರೀಕ್ಷೆಗಳನ್ನು ಮೀರಿ ನಿಂತಿರುವ ಗ್ರಾಂಡ್ ಐ10 ಈಗಾಗಲೇ 21,000ಕ್ಕೂ ಹೆಚ್ಚು ಯಶಸ್ವಿ ಗ್ರಾಹಕರನ್ನು ಪಡೆದುಕೊಂಡಿದೆ.

ಐ10 ಹಾಗೂ ಐ20 ಆವೃತ್ತಿಗಳ ನಡುವೆ ಕಾಣಿಸಿಕೊಂಡಿದ್ದ ಹ್ಯುಂಡೈ ಗ್ರಾಂಡ್ ಐ10, ದೇಶದ ನಂಬರ್ ವನ್ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಜನಪ್ರಿಯ ಸ್ವಿಫ್ಟ್ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿತ್ತು.

ಸ್ವಿಫ್ಟ್‌ಗೆ ಕಂಟಕವಾದ ಹ್ಯುಂಡೈ ಐ10 'ಗ್ರಾಂಡ್' ಸಕ್ಸಸ್

ನಿಖರವಾಗಿ ಹೇಳಬೇಕೆಂದರೆ ಸೆಪ್ಟೆಂಬರ್ 3ರಂದು ಲಾಂಚ್ ಆಗಿದ್ದ ಹ್ಯುಂಡೈ ಗ್ರಾಂಡ್ ಐ10 ಪ್ರಾರಂಭಿಕ ದರ 4.29 ಲಕ್ಷ ರು.ಗಳಾಗಿವೆ.

ಸ್ವಿಫ್ಟ್‌ಗೆ ಕಂಟಕವಾದ ಹ್ಯುಂಡೈ ಐ10 'ಗ್ರಾಂಡ್' ಸಕ್ಸಸ್

ಪ್ರಸ್ತುತ ಹ್ಯುಂಡೈ ಕಾರುಗಳ ಪೈಕಿ ಈ ಅವಧಿಯಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯುಂಡೈ ಕಾರೆಂಬ ಹೆಗ್ಗಳಿಕೆಗೆ ಗ್ರಾಂಡ್ ಐ10 ಪಾತ್ರವಾಗಿದೆ.

ಸ್ವಿಫ್ಟ್‌ಗೆ ಕಂಟಕವಾದ ಹ್ಯುಂಡೈ ಐ10 'ಗ್ರಾಂಡ್' ಸಕ್ಸಸ್

ಸೆಪ್ಟೆಂಬರ್ ತಿಂಗಳಲ್ಲಿ 10,258 ಯುನಿಟ್ ಮಾರಾಟವಾಗಿದ್ದರೆ ಅಕ್ಟೋಬರ್ ಇದನ್ನು ಮೀರಿಸಿ 11,519 ಯುನಿಟ್‌ಗಳ ಸೇಲ್ಸ್ ದಾಖಲಿಸಿಕೊಂಡಿದೆ.

ಸ್ವಿಫ್ಟ್‌ಗೆ ಕಂಟಕವಾದ ಹ್ಯುಂಡೈ ಐ10 'ಗ್ರಾಂಡ್' ಸಕ್ಸಸ್

ಅಕ್ಷರಶ ಮಾರುತಿ ಸ್ವಿಫ್ಟ್ ಕಾರಿಗೆ ನೇರ ಪೈಪೋಟಿ ಎನಿಸಿಕೊಂಡಿರುವ ಗ್ರಾಂಡ್ ಐ10, ಅತ್ಯಾಕರ್ಷಕ ಫೀಚರ್‌ಗಳೊಂದಿಗೆ ಆಗಮನವಾಗಿದೆ.

ಸ್ವಿಫ್ಟ್‌ಗೆ ಕಂಟಕವಾದ ಹ್ಯುಂಡೈ ಐ10 'ಗ್ರಾಂಡ್' ಸಕ್ಸಸ್

ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಗ್ರಾಂಡ್ ಐ10 ಆಗಮನವಾಗಿದೆ. ಅಲ್ಲದೆ ಹ್ಯುಂಡೈ ಫ್ಯೂಯಿಡಿಕ್ ವಿನ್ಯಾಸವನ್ನು ಪಡೆದುಕೊಂಡಿದೆ.

ಸ್ವಿಫ್ಟ್‌ಗೆ ಕಂಟಕವಾದ ಹ್ಯುಂಡೈ ಐ10 'ಗ್ರಾಂಡ್' ಸಕ್ಸಸ್

2 ಡಿನ್ ಇಂಟೇಗ್ರೇಟಡ್ ಆಡಿಯೋ ಸಿಸ್ಟಂ ಜತೆ 1 ಜಿಬಿ ಇಂಟೆಗ್ರಲ್ ಮೆಮರಿ, ಸ್ಟೀರಿಂಗ್ ಮೌಂಟೆಡ್ ಆಡಿಯೋ, ಬ್ಲೂಟೂತ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್ ಹಾಗೂ ಫುಶ್ ಬಟನ್ ಕೀ ಆಯ್ಕೆಯಿದೆ. ಅಲ್ಲದೆ ಹೊರಗಿನ ರಿಯರ್ ವ್ಯೂ ಮಿರರ್ ಹಾಗೂ ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಸುರಕ್ಷತಾ ಮಾನದಂಡಗಳನ್ನು ಹೊಂದಿದೆ.

Most Read Articles

Kannada
English summary
Launched to compete with Maruti Suzuki Swift, the new Grand i10 has now been the been the best selling Hyundai car in the country since it was launched
Story first published: Saturday, November 2, 2013, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X