ವರ್ಷಾಂತ್ಯದಲ್ಲಿ ಅಂಬಾಸಿಡರ್ ಕಾಂಪಾಕ್ಟ್ ಕಾರು ರಸ್ತೆಗೆ

By Nagaraja

'ಭಾರತೀಯ ಕಾರುಗಳ ರಾಜ' ಅಂಬಾಸಿಡರ್ ವರ್ಷಾಂತ್ಯದಲ್ಲಿ ಹೊಸ ವಿನ್ಯಾಸ ಪಡೆದುಕೊಳ್ಳಲಿದೆ. ಹೌದು, ನೂತನ ಅಂಬಾಸಿಡರ್ ಕಾಂಪಾಕ್ಟ್ ಕಾರು ವರ್ಷಾಂತ್ಯದಲ್ಲಿ ರಸ್ತೆಗಿಳಿಸುವ ಬಗ್ಗೆ ಹಿಂದೂಸ್ತಾನ್ ಮೋಟಾರ್ಸ್ ಸೂಚನೆ ನೀಡಿದೆ.

ಹಿಂದೂಸ್ತಾನ್ ಮೋಟಾರ್ಸ್ ಸಿಇಒ ಉತ್ತಮ್ ಬೋಸ್ ಇದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ದೇಶದ ಕಾರು ಮಾರುಕಟ್ಟೆಯಲ್ಲಿ ಗತಕಾಲದ ವೈಭವ ಮರುಕಳಿಸುವುದು ಕಂಪನಿಯ ಗುರಿಯಾಗಿದೆ.

ಸಣ್ಣ ಅಂಬಿ

ಸಣ್ಣ ಅಂಬಿ

ಕಂಪನಿಯ ಪ್ರಕಾರ ನೂತನ ಅಂಬಿ (ಅಂಬಾಸಿಡರ್) ನಾಲ್ಕು ಸಬ್ ಮೀಟರ್ ಉದ್ದದ ಪರಿಮಿತಿಯೊಳಗೆ ಆಗಮನವಾಗಲಿದೆ. ಇದರಿಂದಾಗಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಸಣ್ಣ ಅಂಬಿ

ಸಣ್ಣ ಅಂಬಿ

ಉದ್ದ ಕಡಿಮೆಯಾಗಿರುವುದರಿಂದ ಸಹಜವಾಗಿಯೇ ಬೂಟ್ ಸ್ಪೇಸ್‌ಗೆ ಕತ್ತರಿ ಪ್ರಯೋಗವಾಗಿದೆ. ಹಾಗಿದ್ದರೂ ಇದನ್ನು ಹ್ಯಾಚ್‌ಬ್ಯಾಕ್ ಕಾರೆಂದು ಕರೆಯುವ ಹಾಗಿಲ್ಲ. ಇಂದೊಂದು ನೈಜ ಕಾಂಪಾಕ್ಟ್ ಕಾರಾಗಿದೆ.

ಕೋಲ್ಕತ್ತಾದಲ್ಲಿ ಅಂಬಾಸಿಡರ್ ಟ್ಯಾಕ್ಸಿ (ಚಿತ್ರದಲ್ಲಿ)

ಕೋಲ್ಕತ್ತಾದಲ್ಲಿ ಅಂಬಾಸಿಡರ್ ಟ್ಯಾಕ್ಸಿ (ಚಿತ್ರದಲ್ಲಿ)

ಕಾರಿನ ಹೆಸರು ಹಾಗೂ ಲಾಂಚ್ ದಿನಾಂಕದ ಬಗ್ಗೆ ನಿಖರ ಮಾಹಿತಿ ದೊರಕಿಲ್ಲ. ಹಾಗಿದ್ದರೂ ಸಾಂಪ್ರದಾಯಿಕ ಅಂಬಾಸಿಡರ್ ಹೆಸರು ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಆಧುನಿಕ ಲುಕ್, ಹೊಸ ವೈಶಿಷ್ಟ್ಯ

ಆಧುನಿಕ ಲುಕ್, ಹೊಸ ವೈಶಿಷ್ಟ್ಯ

ಇತ್ತೀಚೆಗಿನ ಕಾರುಗಳಲ್ಲಿ ಕಾಣಿಸಿಕೊಳ್ಳುವ ಎಲ್ಲ ಆಧುನಿಕ ಫೀಚರ್‌ಗಳನ್ನು ನಿಮಗೆ ಅಂಬಾಸಿಡರ್‌ನಲ್ಲಿ ಕಾಣಸಿಗಬಹುದು. ಇದು ಯುವ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಕಂಪನಿ ಭರವಸೆ ವ್ಯಕ್ತಪಡಿಸಿದೆ.

ಅಂಬಾಸಿಡರ್‌ಗೆ ಡಿಸಿ ಡಿಸೈನ್ ಟಚ್ (ಚಿತ್ರದಲ್ಲಿ)

ಅಂಬಾಸಿಡರ್‌ಗೆ ಡಿಸಿ ಡಿಸೈನ್ ಟಚ್ (ಚಿತ್ರದಲ್ಲಿ)

ಇಂದಿಗೂ ಶಾಸಕ ಹಾಗೂ ಸಂಸದರೂ ತಮ್ಮ ಅಧಿಕೃತ ಪ್ರವಾಸಗಳಿಗಾಗಿ ಅಂಬಾಸಿಡರ್ ಕಾರುಗಳನ್ನು ನೆಚ್ಚಿಕೊಂಡಿದ್ದಾರೆ. ಇದು ಗ್ರಾಮೀಣ ಹಾಗೂ ಉಪ ನಗರ ಪ್ರದೇಶಗಳಲ್ಲಿ ಇಂದಿಗೂ ವಿಐಪಿ ಕಾರೆನಿಸಿಕೊಂಡಿದೆ.

ಅಂಬಾಸಿಡರ್ ಸಾನಿಧ್ಯ

ಅಂಬಾಸಿಡರ್ ಸಾನಿಧ್ಯ

20ನೇ ಶತಮಾನದಲ್ಲಿ ಅಂಬಾಸಿಡರ್ ಯಶಸ್ಸನ್ನು ಯಾರಿಂದಲೂ ತಳ್ಳಿಹಾಕುವಂತಿಲ್ಲ. ಹಾಗೆಯೇ 21ನೇ ಶತಮಾನದಲ್ಲೂ ತನ್ನ ಸಾನಿಧ್ಯವನ್ನು ನಿರೂಪಿಸಿರುವ ಅಂಬಾಸಿಡರ್ ಆಧುನಿಕ ವಿನ್ಯಾಸಗಳೊಂದಿಗೆ ರಿ ಎಂಟ್ರಿ ಕೊಡಲಿದೆ.

ಅಂಬಾಸಿಡರ್

ಅಂಬಾಸಿಡರ್

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
The compact Ambassador will be introduced sometime during the end of this year. The new vehicle will be an attempt by HM to boost its rather limited sales numbers by tapping into a different segment of market looing for a car smaller than the bulky sedan.
Story first published: Tuesday, July 23, 2013, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X