ಹೋಂಡಾ ಮೊಬಿಲಿಯೊ ಎಂಪಿವಿ ಅನಾವರಣ

ಅಮೇಜ್, ಸಿಟಿಗಳಂತಹ ಸೆಗ್ಮೆಂಟ್ ಬೆಸ್ಟ್ ಕಾರುಗಳನ್ನು ಭಾರತಕ್ಕೆ ಪರಿಚಯಿಸಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಪ್ರಸ್ತುತ ಸಾಗುತ್ತಿರುವ 12ನೇ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ನೂತನ ಮೊಬಿಲಿಯೊ ಎಂಪಿವಿ ಕಾರನ್ನು ಅನಾವರಣಗೊಳಿಸಿದೆ.

ದೆಹಲಿ ಆಟೋ ಎಕ್ಸ್ ಪೋ ಲೈವ್

ಇದೇ ಸಂದರ್ಭದಲ್ಲಿ ಮೂರನೇ ಜನಾಂಗದ ಹೋಂಡಾ ಜಾಝ್ ಕಾರನ್ನು ಸಹ ಅನಾವರಣಗೊಳಿಸಲಾಗಿತ್ತು. (ವರದಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ)

ಹೋಂಡಾ ಮೊಬಿಲಿಯೊ ಎಂಪಿವಿ ಅನಾವರಣ

ವಿಶೇಷವಾಗಿಯೂ ಏಷ್ಯಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಮೊಬಿಲಿಯೊ ವಿನ್ಯಾಸ ರಚಿಸಲಾಗಿದೆ. ಇದು ವಿಶಾಲವಾದ ಕ್ಯಾಬಿನ್ ಸ್ಪೇಸ್ ಹೊಂದಿದ್ದು, ಒಟ್ಟು ಮೂರು ಸಾಲುಗಳಲ್ಲಾಗಿ ಏಳು ಮಂದಿಗೆ ಆರಾಮವಾಗಿ ಪಯಣಿಸಬಹುದಾಗಿದೆ.

ಹೋಂಡಾ ಮೊಬಿಲಿಯೊ ಎಂಪಿವಿ ಅನಾವರಣ

ಮೇಲೆ ಸೂಚಿಸಲಾದ ಎರಡು ಮಾದರಿಗಳು 2014-15ರ ಸಾಲಿನಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಇದೇ ಸಂದರ್ಭದಲ್ಲಿ ಹೋಂಡಾ ಎಕ್ಸ್‌ಎಸ್1 ಕ್ರಾಸೋವರ್ ಯುಟಿಲಿಟಿ ವಾಹನವನ್ನು ಪ್ರದರ್ಶನಕ್ಕಿಡಲಾಗಿತ್ತು.

ಹೋಂಡಾ ಮೊಬಿಲಿಯೊ ಎಂಪಿವಿ ಅನಾವರಣ

2013ನೇ ಸಾಲಿನಲ್ಲೇ ಜಕಾರ್ತದಲ್ಲಿ ನಡೆದ ಇಂಡೋನೇಷ್ಯಾ ಅಂತರಾಷ್ಟ್ರೀಯ ಮೋಟಾರು ಶೋ ಪ್ರವೇಶಿಸಿದ್ದ ಹೋಂಡಾ ಮೊಬಲಿಯೊ ಈ ಮೂಲಕ ಭಾರತಕ್ಕೂ ದಾಪುಗಾಲನ್ನಿಟ್ಟಿದೆ. ಇದು ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಸವಾಲನ್ನು ಎದುರಿಸಲಿದೆ.

ಹೋಂಡಾ ಮೊಬಿಲಿಯೊ ಎಂಪಿವಿ ಅನಾವರಣ

ಅಮೇಜ್ ತರಹನೇ ಮೊಬಿಲಿಯೊ ಕೂಡಾ ಬ್ರಿಯೊ ತಲಹದಿಯಲ್ಲಿ ರೂಪಿತವಾಗಿದೆ. ಹಾಗೆಯೇ 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಪಡೆಯುವ ನಿರೀಕ್ಷೆಯಿದೆ. ಇದು ಕೂಡಾ ಅಮೇಜ್ ಆವೃತ್ತಿಗೆ ಸಮಾನವಾಗಿರಲಿದೆ.

Most Read Articles

Kannada
English summary
Honda Cars showcases MPV Mobilio at 2014 Auto Expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X