ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಪ್ರತ್ಯಕ್ಷ

By Nagaraja

ಅಂತೂ ಮೊಬಿಲಿಯೊ ಪ್ರವೇಶಕ್ಕೆ ಕಾಲ ಕೂಡಿ ಬಂದಿದೆ. ಇದಕ್ಕೆ ಮುನ್ನಡಿಯಾಗಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಅಧಿಕೃತ ವೆಬ್‌ಸೈಟ್‌ನಲ್ಲಿ ನೂತನ ಮೊಬಿಲಿಯೊ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಪ್ರತ್ಯಕ್ಷಗೊಂಡಿದೆ.

ಬಹುನಿರೀಕ್ಷಿತ ಹೋಂಡಾ ಮೊಬಿಲಿಯೊ, ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಹಾಗೂ ಇನ್ನಷ್ಟೇ ಲಾಂಚ್ ಆಗಬೇಕಾಗಿರುವ ದಟ್ಸನ್ ಗೊ ಪ್ಲಸ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ವರದಿಗಳ ಪ್ರಕಾರ 2014ನೇ ಸಾಲಿನ ದ್ವಿತಿಯಾರ್ಧದಲ್ಲಿ ಹೋಂಡಾ ಮೊಬಿಲಿಯೊ ಮಾರುಕಟ್ಟೆ ಪ್ರವೇಶಿಸಲಿದೆ. ಇದರಂತೆ ಗ್ರೇಟರ್ ನೋಯ್ಡಾದಲ್ಲಿರುವ ಸಂಸ್ಥೆಯ ಘಟಕದಲ್ಲಿ ನಿರ್ಮಾಣ ಆರಂಭಗೊಳ್ಳಲಿದೆ.

ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಪ್ರತ್ಯಕ್ಷ

ಹೋಂಡಾ ಬ್ರಿಯೊ ತಲಹದಿಯಲ್ಲಿ ರೂಪುಗೊಂಡಿರುವ ಮೊಬಿಲಿಯೊ, ಮುಂಭಾಗದಿಂದ ವೀಕ್ಷಿಸುವಾಗ ಈ ಸಣ್ಣ ಕಾರಿನ ವಿನ್ಯಾಸಕ್ಕೆ ಸಾಮತ್ಯೆ ಪಡೆದುಕೊಂಡಿದೆ. ಹಾಗಿದ್ದರೂ ಕಾರಿನ ಬದಿಯ ರಚನೆಯಲ್ಲಿ ಬದಲಾವಣೆ ಪಡೆದುಕೊಂಡಿದ್ದು, ಎಂಪಿವಿಗೆ ತಕ್ಕ ರೂಪ ಪಡೆದಿದೆ.

ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಪ್ರತ್ಯಕ್ಷ

ಇನ್ನು ಕಾರಿನ ಒಳಮೈ ಬಗ್ಗೆ ಮಾತನಾಡುವುದಾದ್ದಲ್ಲಿ, ಇತ್ತೀಚೆಗೆ ಬಿಡುಗಡೆಯಾಗಿರುವ ಹೋಂಡಾ ಕಾರುಗಳಿಗೆ ತಕ್ಕಂತೆ ಗರಿಷ್ಠ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲಾಗುವುದು.

ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಪ್ರತ್ಯಕ್ಷ

ಏಳು ಸೀಟಿನ ಆಸನ ವ್ಯವಸ್ಥೆ ನೀಡಿರುವುದು ದೊಡ್ಡ ಕುಟುಂಬವನ್ನು ಹೊಂದಿರುವವರ ಸಮಸ್ಯೆಗೂ ಪರಿಹಾರವಾಗಲಿದೆ. ಅಲ್ಲದೆ ಹಿಂದುಗಡೆ ಸೀಟನ್ನು ಮಡಚುವ ಮೂಲಕ ಹೆಚ್ಚು ಲಗ್ಗೇಜ್ ಸ್ಪೇಸ್ ಸಹ ಕಂಡುಕೊಳ್ಳಬಹುದಾಗಿದೆ.

ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಪ್ರತ್ಯಕ್ಷ

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮೊಬಿಲಿಯೊ ಆಗಮನವಾಗಲಿದೆ. ಇದು 88 ಪಿಎಸ್ ಪವರ್ ಉತ್ಪಾದಿಸಬಲ್ಲ ಬ್ರಿಯೊದ 1.2 ಅಥವಾ 119 ಪಿಎಸ್ ಪವರ್ ಉತ್ಪಾದಿಸುವ ಅಮೇಜ್‌ನ 1.5 ಲೀಟರ್ ಪೆಟ್ರೋಲ್ ಮತ್ತು 100 ಪಿಎಸ್‌ ಉತ್ಪಾದಿಸುವ ಸಿಟಿಯ 1.5 ಐ-ಡಿಟೆಕ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಬಾಕ್ಸ್ ಸಹ ಹೊಂದಿರಲಿದೆ.

ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಪ್ರತ್ಯಕ್ಷ

ಅಂತಿಮವಾಗಿ ದರದ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ಮೊಬಿಲಿಯೊ 5.5 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಪ್ರತ್ಯಕ್ಷ

ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ...

ಹೋಂಡಾ ಮೊಬಿಲಿಯೊ ವೀಡಿಯೋ

Post by DriveSpark.

Most Read Articles

Kannada
English summary
Honda Cars India Limited (HCIL) has started previewing the Mobilio MPV on their website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X