ಬರುತ್ತಿದೆ ಹೋಂಡಾ ಜಾಝ್‌‌ ನೇರ ಪ್ರತಿಸ್ಫರ್ಧಿ ಹ್ಯುಂಡೈ ಐ30

By Nagaraja

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು, ತೆರೆಮರೆಯಲ್ಲಿ ನೂತನ ಕಾರೊಂದನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಬಹುನಿರೀಕ್ಷಿತ ಮುಂಬರುವ ಹೋಂಡಾ ಜಾಝ್‌ಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ.

ಈ ಎಲ್ಲ ಬೆಳವಣಿಗೆಗಳು ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೆ ಇಂತಹ ಆರೋಗ್ಯಕರ ಪೈಪೋಟಿಯು ಗ್ರಾಹಕರಿಗೆ ಇನ್ನಷ್ಟು ಉತ್ತಮ ಕಾರುಗಳ ಆಯ್ಕೆಗೆ ಉತ್ತೇಜನ ತುಂಬಲಿದೆ.

ಬರುತ್ತಿದೆ ಹೋಂಡಾ ಜಾಝ್‌‌ ನೇರ ಪ್ರತಿಸ್ಫರ್ಧಿ ಹ್ಯುಂಡೈ ಐ30

ಈ ಬಗ್ಗೆ ಸ್ಪಷ್ಟನೆ ನೀಡಿರುವ ಹ್ಯುಂಡೈ ಮೋಟಾರು ಇಂಡಿಯಾ ಹಿರಿಯ ಉಪಾಧ್ಯಕ್ಷ ರಾಕೇಶ್ ಶ್ರೀವಾಸ್ತವಾ, ನೂತನ ಐ30 ಕಾರು ಈಗಿರುವ ಐ20 ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ ಎಂದಿದ್ದಾರೆ.

ಬರುತ್ತಿದೆ ಹೋಂಡಾ ಜಾಝ್‌‌ ನೇರ ಪ್ರತಿಸ್ಫರ್ಧಿ ಹ್ಯುಂಡೈ ಐ30

ಪ್ರೀಮಿಯಂ ಐ20 ಮೇಲ್ದರ್ಜೆಯಲ್ಲಿ ಇನ್ನಷ್ಟು ಮಾರಾಟದ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಕಾರು ಮಾಲಿಕರು ಹೆಚ್ಚಿನ ವೈಶಿಷ್ಟ್ಯಗಳನ್ನು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಐ30 ಗಮನಾರ್ಹ ಪ್ರದರ್ಶನ ನೀಡುವ ಸಾಧ್ಯತೆಯಿದೆ.

ಬರುತ್ತಿದೆ ಹೋಂಡಾ ಜಾಝ್‌‌ ನೇರ ಪ್ರತಿಸ್ಫರ್ಧಿ ಹ್ಯುಂಡೈ ಐ30

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ದೀಪಾವಳಿ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ನೂತನ ಕಾರು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಹಾಗಿದ್ದರೂ ಇದು ಐ30 ಎಂದು ಹೆಸರಿನಿಂದ ಅರಿಯಲ್ಪಡುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಬರುತ್ತಿದೆ ಹೋಂಡಾ ಜಾಝ್‌‌ ನೇರ ಪ್ರತಿಸ್ಫರ್ಧಿ ಹ್ಯುಂಡೈ ಐ30

ಅಂದರೆ ಮುಂದಿನ ತಲೆಮಾರಿನ ಐ20, ಹೊಸ ಹೆಸರಿನಿಂದ ಗುರುತಿಸಿಕೊಳ್ಳಲಿದೆ. ಅದೇ ಹೊತ್ತಿಗೆ ಐ20 ಮಾರಾಟ ಈಗಿನ ಹಾಗೆಯೇ ಮುಂದುವರಿಯಲಿದೆ.

ಬರುತ್ತಿದೆ ಹೋಂಡಾ ಜಾಝ್‌‌ ನೇರ ಪ್ರತಿಸ್ಫರ್ಧಿ ಹ್ಯುಂಡೈ ಐ30

ನಿಸ್ಸಂಶವಾಗಿಯೂ ನೂತನ ಹ್ಯುಂಡೈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು, ಮುಂಬರುವ ಬಹುನಿರೀಕ್ಷಿತ ಹೋಂಡಾ ಜಾಝ್ ಆವೃತ್ತಿಗೆ ನೇರ ಪ್ರತಿಸ್ಪರ್ಧಿಯೆನಿಸಿಕೊಳ್ಳಲಿದೆ. ಅಂದ ಹಾಗೆ ಹೋಂಡಾ ಜಾಝ್ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಬರುತ್ತಿದೆ ಹೋಂಡಾ ಜಾಝ್‌‌ ನೇರ ಪ್ರತಿಸ್ಫರ್ಧಿ ಹ್ಯುಂಡೈ ಐ30

ಇನ್ನು ಹ್ಯುಂಡೈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಪ್ರಾರಂಭಿಕ ದರ 10 ಲಕ್ಷ ರು.ಗಳಿಗೂ ಕೆಳಗಿರುವ ಸಾಧ್ಯತೆಯಿದೆ. ಪ್ರಸ್ತುತ ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಐ30, ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಕಡಿಮೆ ಶಕ್ತಿಯ 1.4 ಲೀಟರ್ ಎಂಜಿನ್ 100 ಅಶ್ವಶಕ್ತಿ (137 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 182 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಪಡೆದುಕೊಂಡಿದೆ.

Most Read Articles

Kannada
English summary
Hyundai Motor India Senior Vice-President, Rakesh Srivastava has confirmed that the company will launch a new hatchback placed above the i20.
Story first published: Monday, June 2, 2014, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X