ಮುಂದಿನ ಅತಿ ದೊಡ್ಡ ಹ್ಯುಂಡೈ ಐಎಕ್ಸ್25 ಬಿಡುಗಡೆಗೆ ದೇಶ ಸಜ್ಜು

By Nagaraja

ಮಾರುತಿ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರಿನ ಬಳಿಕ ದೇಶದ ಅತಿ ದೊಡ್ಡ ಲಾಂಚ್ ಎಂದೇ ಪರಿಗಣಿಲ್ಪಟ್ಟಿರುವ ಹ್ಯುಂಡೈ ಐಎಕ್ಸ್25 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಆಗಮನಕ್ಕೆ ಕಾಲ ಸನ್ನಿಹಿತವಾಗುತ್ತಿದೆ. ಇದರಂತೆ ಈ ಬಹುನಿರೀಕ್ಷಿತ ಎಸ್‌ಯುವಿಗೆ ಸಂಬಂಧಿಸಿದ ಕೆಲವೊಂದು ಗಮನಾರ್ಹ ಮಾಹಿತಿಗಳು ಹೊರಬಿದ್ದಿವೆ.

ಇದಕ್ಕೂ ಮೊದಲು 2014 ಬೀಜಿಂಗ್ ಮೋಟಾರು ಶೋದಲ್ಲಿ ಅನಾವರಣಗೊಂಡಿದ್ದ ಹ್ಯುಂಡೈ ಐಎಕ್ಸ್25 ಕಾಂಪಾಕ್ಟ್ ಎಸ್‌ಯುವಿ, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇನ್ನೊಂದೆಡೆ ಸಮಕಾಲೀನ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಅತಿ ಹೆಚ್ಚಿನ ಮಾರಾಟ ಸಾಧಿಸುತ್ತಿದೆ. ಈ ಹಿನ್ನಲೆಯಲ್ಲಿ ಹ್ಯುಂಡೈ ಹೊಸ ಕಾಂಪಾಕ್ಟ್ ಎಸ್‌ಯುವಿ ಭಾರತ ಮಾರುಕಟ್ಟೆಯಲ್ಲೂ ಸದ್ದು ಮಾಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ರೆನೊ ಡಸ್ಟರ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಮಾದರಿಗೆ ನೇರ ಪ್ರತಿಸ್ಪರ್ಧಿಯಾಗಲಿರುವ ಹ್ಯುಂಡೈ ಐಎಕ್ಸ್25, ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾಗಳಿಗೆ ಸೆರೆ ಸಿಕ್ಕಿವೆ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ದರ ಕಾಯ್ದುಕೊಳ್ಳಬೇಕಾಗಿರುವುದು ಅತಿ ಮುಖ್ಯವಾಗಿದೆ.

ವಿನ್ಯಾಸ

ವಿನ್ಯಾಸ

ನೇರವಾಗಿ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವುದರಿಂದ ಈ ಹಿಂದೆ ಬೀಜಿಂಗ್ ಮೋಟಾರು ಶೋದಲ್ಲಿ ಅನಾವರಣಗೊಳಿಸಿರುವುದಕ್ಕಿಂತಲೂ ವಿಭಿನ್ನ ಕಾರನ್ನು ನೀವಿಲ್ಲಿ ನೋಡಬಹುದಾಗಿದೆ. ಇದರಲ್ಲಿ ಹೆಚ್ಚು ಪ್ರೀಮಿಯಂ ಅನ್ನುವುದಕ್ಕಿಂತಲೂ ಹೊಸ ಪರಿಣಾಮಕಾರಿ ಫ್ಲೂಯಿಡಿಕ್ ಡಿಸೈನ್ 2.0 ತತ್ವಶಾಸ್ತ್ರ ಅನುಸರಿಸಲಾಗಿದೆ.

ಆಯಾಮ

ಆಯಾಮ

ಪ್ರೀಮಿಯಂ ಸಾಂಟಾಫೆಗಿಂತಲೂ ಕೆಳಗಡೆ ಗುರುತಿಸಿಕೊಳ್ಳಲಿರುವ ಹೊಸ ಕಾರು, ಈ ಕೆಳಕಂಡ ಆಯಾಮಗಳನ್ನು ಪಡೆಯಲಿದೆ.

ಉದ್ದ - 4270mm

ಅಗಲ - 1780mm

ಎತ್ತರ - 1630mm

ವೀಲ್ ಬೇಸ್ - 2590mm

ಎಂಜಿನ್ ಮತ್ತು ಪವರ್

ಎಂಜಿನ್ ಮತ್ತು ಪವರ್

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವೆರಿಯಂಟ್‌ಗಳಲ್ಲಿ ಹೊಸ ಹ್ಯುಂಡೈ ಐಎಕ್ಸ್25 ಆಗಮನವಾಗಲಿದೆ. ಇದು 1.4 ಲೀಟರ್ ವಿಟಿವಿಟಿ ಪೆಟ್ರೋಲ್ ಮತ್ತು 1.6 ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಹ್ಯುಂಡೈ ವರ್ನಾದಲ್ಲಿರುವುದಕ್ಕೆ ಸಮಾನವಾಗಿದೆ.

1.4 ಲೀಟರ್ ವಿಟಿವಿಟಿ (VTVT) ಪೆಟ್ರೋಲ್ - 106bhp, 135Nm

1.6-litre ಸಿಆರ್‌ಡಿಐ (CRDi) ಡೀಸೆಲ್ - 126bhp, 260Nm

ನಿರೀಕ್ಷಿತ ಮೈಲೇಜ್

ನಿರೀಕ್ಷಿತ ಮೈಲೇಜ್

1.4 ಲೀಟರ್ ಪೆಟ್ರೋಲ್ - 17Km/l

1.6 ಲೀಟರ್ ಡೀಸೆಲ್ - 22Km/l

ನಿರೀಕ್ಷಿತ ಬೆಲೆ, ಬಿಡುಗಡೆ

ನಿರೀಕ್ಷಿತ ಬೆಲೆ, ಬಿಡುಗಡೆ

ಇನ್ನು ಹೊಸ ಐಎಕ್ಸ್25 ಕಾಂಪಾಕ್ಟ್ ಎಸ್‌ಯುವಿ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಅಲ್ಲದೆ 7.50 ಲಕ್ಷ ರು.ಗಳಿಂದ 11 ಲಕ್ಷ ರು.ಗಳ ನಡುವಣ ದರ ವ್ಯಾಪ್ತಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಂದ ಹಾಗೆ ಹ್ಯುಂಡೈ ಹೊಸ ಕಾಂಪಾಕ್ಟ್ ಎಸ್‌ಯುವಿ ಮುಂದಿನ ವರ್ಷ (2015) ಭಾರತಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದೆ.

Most Read Articles

Kannada
English summary
Ahead of its official launch next month, few details and brochure of the Hyundai ix25 has been leaked on internet.
Story first published: Monday, September 29, 2014, 11:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X