2014 ಮೊದಲಾರ್ಧದಲ್ಲಿ ಬಿಡುಗಡೆಯಾದ ಕಾರುಗಳಿವು!

By Nagaraja

ನಿರೀಕ್ಷೆಯಂತೆಯೇ 2014 ಸಾಲಿನಲ್ಲಿ ಅನೇಕ ಹೊಸ ಮಾದರಿಗಳ ಪ್ರವೇಶವಾಗಿದೆ. ಇದು ವಾಹನೋದ್ಯಮದ ಪುನಶ್ಚೇತನದ ದೃಷ್ಟಿಕೋನದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಇದರಂತೆ 2014 ಸಾಲಿನ ಮೊದಲಾರ್ಧದಲ್ಲಿ ಅಂದರೆ ಜನವರಿಯಿಂದ ಜೂನ್ ತಿಂಗಳ ವರೆಗೆ ಬಿಡುಗಡೆಯಾದ ಪ್ರಮುಖ ಮಾದರಿಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ನವದಹೆಲಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋ ಭರ್ಜರಿಯಾಗಿ ಆಯೋಜನೆಯಾಗಿತ್ತು. ಇದರಂತೆ ಅನೇಕ ಹೊಸ ಮಾದರಿಗಳು ಅನಾವರಣಗೊಂಡಿದ್ದವು. ಇದರ ಬೆನ್ನಲ್ಲೇ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಹೊಸ ಮಾದರಿಗಳನ್ನು ಪರಿಚಯಿಸಿದೆ.

2014 ಮೊದಲಾರ್ಧದಲ್ಲಿ ಬಿಡುಗಡೆಯಾದ ಕಾರುಗಳಿವು!

ದೇಶದ ಅಗ್ರ ವಾಹನ ತಯಾರಕ ಸಂಸ್ಥೆಗಳ ಜೊತೆಗೆ 2014ನೇ ಮೊದಲಾರ್ಧದಲ್ಲಿ ಅಚ್ಚರಿಯ ಎಂಟ್ರಿ ಬಿಡುಗಡೆಯಾಗಿದ್ದವು. ಈ ಎಲ್ಲದರ ಸಮಗ್ರವಾಗಿ ಚರ್ಚಿಸೋಣವೇ...

ಹೋಂಡಾ ಸಿಟಿ

ಹೋಂಡಾ ಸಿಟಿ

ಕಳೆದ ಆರು ತಿಂಗಳಲ್ಲಿ ಬಿಡುಗಡೆಯಾಗಿರುವ ಕಾರುಗಳ ಪೈಕಿ ಹೋಂಡಾ ಸಿಟಿ ಗೇಮ್ ಚೇಂಜರ್ ಎನಿಸಿಕೊಂಡಿದೆ. ಪರಿಷ್ಕೃತ ರೂಪದಲ್ಲಿ ಬಿಡುಗಡೆಯಾಗಿದ್ದ ಹೋಂಡಾ ಸಿಟಿ ಡೀಸೆಲ್ ವೆರಿಯಂಟ್‌ನಲ್ಲೂ ಆಗಮನವಾಗಿತ್ತು.

ಹೋಂಡಾ ಸಿಟಿ

ಹೋಂಡಾ ಸಿಟಿ

ಅಮೇಜ್ ಬಳಿಕ ಅದೇ ಯಶಸ್ಸನ್ನು ಮುಟ್ಟಲು ಹೋಂಡಾ ಸಿಟಿ ಸೆಡಾನ್ ಕಾರಿಗೆ ಸಾಧ್ಯವಾಗಿದೆ. ಇದರ ಬೇಸ್ ಪೆಟ್ರೋಲ್ ವೆರಿಯಂಟ್ ದರ 7.42 ಲಕ್ಷ ರು.ಗಳಾಗಿವೆ. ಗರಿಷ್ಠ ಇಂಧನ ಕ್ಷಮತೆ ಇತರ ಮಾದರಿಗಿಂತಲೂ ಹೋಂಡಾ ಕಾರುಗಳನ್ನು ಭಿನ್ನವಾಗಿಸಿದೆ.

ಹೋಂಡಾ ಸಿಟಿ

ಹೋಂಡಾ ಸಿಟಿ

ಇವನ್ನೂ ಓದಿ: ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ

ಇದೇ ಮೊದಲ ಬಾರಿ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಮಾದರಿಯಲ್ಲಿ ಬಿಡುಗಡೆಯಾಗಿದ್ದ ಮಾರುತಿ ಸುಜುಕಿ ಸೆಲೆರಿಯೊ, ಹಾಟ್ ಕೇಕ್ ರೀತಿಯಲ್ಲೇ ಮಾರಾಟವಾಗುತ್ತಿದೆ. ಇದು ಕೈಗೆಟಕುವ (3.90 ಲಕ್ಷ ರು.) ಬೆಲೆಗಳಲ್ಲೂ ದೊರಕುತ್ತಿದೆ.

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ ಬಿಡುಗಡೆಯಾದ ಎರಡೇ ತಿಂಗಳಲ್ಲಿ 32,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು. ಇದೀಗ ಗ್ರಾಹಕರ ಬೇಡಿಕೆ ಮುಟ್ಟುವ ಸಲುವಾಗಿ ತಿಂಗಳಲ್ಲಿ 10,000 ಯುನಿಟ್ ನಿರ್ಮಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ

ಇವನ್ನೂ ಓದಿ: ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್

ಹ್ಯುಂಡೈ ಎಕ್ಸ್‌ಸೆಂಟ್

ಹ್ಯುಂಡೈ ಎಕ್ಸ್‌ಸೆಂಟ್

ಹೋಂಡಾ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರಿ ಓಟವನ್ನು ತಡೆ ಹಿಡಿಯುವಲ್ಲಿ ಒಂದು ಹಂತದ ವರೆಗೆ ಎಕ್ಸ್‌ಸೆಂಟ್‌ಗೆ ಸಾಧ್ಯವಾಗಿದೆ ಅಂದರೆ ತಪ್ಪಾಗಲಾರದು. ಹ್ಯುಂಡೈ ಕಾರುಗಳ ಮೇಲಿನ ನಂಬಿಕೆಯೇ ಎಕ್ಸ್‌ಸೆಂಟ್ ಯಶಸ್ಸಿಗೆ ಕೈಗನ್ನಡಿಯಾಗಿದೆ. ಇದರ ಪ್ರಾರಂಭಿಕ ದರ 4.66 ಲಕ್ಷ ರು.ಗಳಾಗಿವೆ.

ಹ್ಯುಂಡೈ ಎಕ್ಸ್‌ಸೆಂಟ್

ಹ್ಯುಂಡೈ ಎಕ್ಸ್‌ಸೆಂಟ್

ಮ್ಯೂಸಿಕ್ ಸ್ಟೋರೆಜ್ ಹಾಗೂ ಹಿಂದುಗಡೆ ಪ್ರಯಾಣಿಕರಿಗೆ ಎಸಿ ವೆಂಟ್ಸ್‌ಗಳಂತಹ ಸೌಲಭ್ಯಗಳನ್ನು ಒದಗಿಸಿದ್ದ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆಯಾದ ಮೊದಲ ತಿಂಗಳಲ್ಲೇ 7,000 ಯುನಿಟ್‌ಗಳ ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು.

ಹ್ಯುಂಡೈ ಎಕ್ಸ್‌ಸೆಂಟ್

ಹ್ಯುಂಡೈ ಎಕ್ಸ್‌ಸೆಂಟ್

ಇವನ್ನೂ ಓದಿ: ಎಲ್ಲವನ್ನು ಮೀರಿಸುವಂತಹ ಕಾಂಪಾಕ್ಟ್ ಸೆಡಾನ್

ದಟ್ಸನ್ ಗೊ

ದಟ್ಸನ್ ಗೊ

ನಿಜಕ್ಕೂ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಅಚ್ಚರಿಯ ಸೇರ್ಪಡೆಯಾಗಿದೆ. ಎಂಟ್ರಿ ಲೆವೆಲ್ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ದಟ್ಸನ್ ಗೊ ಪ್ರಾರಂಭಿಕ ದರ 3.12 ಲಕ್ಷ ರು.ಗಳಾಗಿದೆ.

ದಟ್ಸನ್ ಗೊ

ದಟ್ಸನ್ ಗೊ

ನಿಸ್ಸಾನ್ ಒಡೆತನದಲ್ಲಿರುವ ದಟ್ಸನ್ ಗೊ ಮೊದಲ ಮೂರು ತಿಂಗಳಲ್ಲಿ 6,800 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಪ್ರಮುಖವಾಗಿಯೂ ಹ್ಯುಂಡೈ ಇಯಾನ್ ಹಾಗೂ ಮಾರುತಿ ಆಲ್ಟೊ ಕೆ10 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ.

ದಟ್ಸನ್ ಗೊ

ದಟ್ಸನ್ ಗೊ

ಇವನ್ನೂ ಓದಿ: -ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಫೋರ್ಡ್ ಫಿಯೆಸ್ಟಾ

ಫೋರ್ಡ್ ಫಿಯೆಸ್ಟಾ

ಇತ್ತೀಚೆಗಷ್ಟೇ ಫೋರ್ಡ್ ಫಿಯೆಸ್ಟಾ ಮಾದರಿ ಬಿಡುಗಡೆ ಮಾಡಿತ್ತು. ಇದು ಎಂಟು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಫೋರ್ಡ್ ಫಿಯೆಸ್ಟಾ ಪ್ರತಿ ಲೀಟರ್‌ಗೆ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಫೋರ್ಡ್ ಫಿಯೆಸ್ಟಾ

ಫೋರ್ಡ್ ಫಿಯೆಸ್ಟಾ

ಫೋರ್ಡ್ ಫಿಯೆಸ್ಟಾ ಪ್ರಾರಂಭಿಕ ದರ 7.69 ಲಕ್ಷ ರು.ಗಳಾಗಿದ್ದು, ಇದರಲ್ಲಿ ಅತ್ಯಾಧುನಿಕ್ ಸಿಂಕ್ (sync) ತಂತ್ರಜ್ಞಾನವು ಚಾಲಕರಿಗೆ ಹೆಚ್ಚು ಸುರಕ್ಷತೆಯನ್ನು ಖಾತ್ರಿಪಡಿಸಲಿದೆ.

ಫೋರ್ಡ್ ಫಿಯೆಸ್ಟಾ

ಫೋರ್ಡ್ ಫಿಯೆಸ್ಟಾ

ಇವನ್ನೂ ಓದಿ: ದೇಶದ ರಸ್ತೆಗೆ 2014 ಫೋರ್ಡ್ ಫಿಯೆಸ್ಟಾ ಭರ್ಜರಿ ಎಂಟ್ರಿ

Most Read Articles

Kannada
English summary
The year 2014 jump started with the 12th edition of Auto Expo showcasing several new models. The truth is, the Indian automobile industry has seen better days over the last two years. The industry is slowly reviving again though - launches of new models are a very good sign of growth.
Story first published: Thursday, July 10, 2014, 10:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X