ಯಾರಿವಳು ಭಾರತಕ್ಕೆ ಕಾಲಿಟ್ಟ ತ್ರಿವಳಿ ಸುರ ಸುಂದರಿಯರು

ಜಾಗತಿಕ ಮಾರುಕಟ್ಟೆಯ ಕೇಂದ್ರ ಬಿಂದುವಾಗುತ್ತಿರುವ ಭಾರತ ವರ್ಷದಿಂದ ವರ್ಷಕ್ಕೆ ಬಳೆಯುತ್ತಲ್ಲೇ ಇವೆ. ಇದರಂತೆ ದೇಶದ ಕೋಟ್ಯಾಧಿಪತಿಗಳ ಸಂಖ್ಯೆ ಸಹ ವರ್ಧಿಸುತ್ತಲೇ ಇವೆ.

ಈ ಎಲ್ಲ ಅಂಶಗಳು ಯುರೋಪ್‌ಗ ದುಬಾರಿ ಕಾರು ತಯಾರಕರ ಗಮನ ಸೆಳೆಯಲು ಕಾರಣವಾಗಿತ್ತು. ಈ ಹಿಂದೆ ಫೆರಾರಿ, ಲಂಬೋರ್ಗಿನಿ ಹಾಗೂ ಬುಗಾಟಿಗಳಂತಹ ಸೂಪರ್ ಕಾರು ತಯಾರಕ ಸಂಸ್ಥೆಗಳು ದೇಶದಲ್ಲಿ ಬೀಡುಬಿಟ್ಟಿದ್ದವು.

ಇದಕ್ಕೆ ಮತ್ತಷ್ಟು ಸೇರ್ಪಡೆಯೆಂಬಂತೆ ಪಗಾನಿ, ಸ್ಪೈಕರ್ ಮತ್ತು ಲೋಟಸ್‌ಗಳಂತಹ ಸುರ ಸುಂದರಿಯರು ಭಾರತಕ್ಕೆ ಹೆಜೆಯನ್ನಿಡಲು ಸಜ್ಜಾಗುತ್ತಿದ್ದಾರೆ. ಅಷ್ಟಕ್ಕೂ ಈ ಸುರ ಸುಂದರಿಯರ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ನಿಮ್ಮಲ್ಲಿದೆಯೇ ಹಾಗಿದ್ದರೆ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಸದ್ಯದಲ್ಲೇ ಭಾರತಕ್ಕೆ ಮತ್ತಷ್ಟು ಸೂಪರ್ ಕಾರುಗಳ ಎಂಟ್ರಿ

ಬೆಳೆದು ಬರುತ್ತಿರುವ ಭಾರತ ಮುಂದಿನ ದಿನಗಳಲ್ಲಿ ವಿಶ್ವದಲ್ಲೇ ಅತ್ಯಂತ ಪ್ರಭಾವಿಶಾಲಿ ಮಾರುಕಟ್ಟೆಗಳಲ್ಲಿ ಒಂದೆನಿಸಲಿದೆ. ಇದರಂತೆ ಜಗತ್ತಿನ ಐಷಾರಾಮಿ ಕಂಪನಿಗಳು ಸಹ ಭಾರತದ ಕಾರು ಮಾರುಕಟ್ಟೆಯನ್ನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದೆ.

ಸ್ಪೈಕರ್

ಸ್ಪೈಕರ್

ಸ್ಪೈಕರ್ ಹಾಲೆಂಡ್ ಮೂಲದ ಗರಿಷ್ಠ ನಿರ್ವಹಣಾ ಕಾರು ಸಂಸ್ಥೆಯಾಗಿದೆ. ಪ್ರಸ್ತುತ ಭಾರತದ ಸ್ಥಳೀಯ ಜತೆಗಾರನ ಹುಡುಕಾಟದಲ್ಲಿರುವ ಸ್ಪೈಕರ್ 2013ರ ವರ್ಷಾಂತ್ಯದಲ್ಲಿ ನೂತನ ಸಿ8 ಏಲಿರಾನ್ (Aileron) ಕಾರನ್ನು ಪರಿಚಯಿಸಲಿದೆ.

ಸ್ಪೈಕರ್

ಸ್ಪೈಕರ್

ಸ್ಪೈಕರ್ ಸಿ8 ಏಲಿರಾನ್ ಸೂಪರ್ ಕಾರು ಆಡಿಯ 4.3 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 400 ಅಶ್ವಶಕ್ತಿ (480 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗರಿಷ್ಠ ಗಂಟೆಗೆ 300 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಕಾರನ್ನು ಸ್ಪೈಕರ್ ಬಿ6 ವೆನಾಟರ್ ಹಿಂಬಾಲಿಸಲಿದೆ.

ಪಗಾನಿ

ಪಗಾನಿ

ಇಟಲಿಯ ಸುರ ಸುಂದರಿಯಾಗಿರುವ ಪಗಾನಿ ಸದ್ಯದಲ್ಲೇ ಭಾರತ ಎಂಟ್ರಿ ಕೊಡಲಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಜಗತ್ತಿನ ಅತಿ ವೇಗದಲ್ಲಿ ಚಲಿಸುವ ಕಾರುಗಳಲ್ಲಿ ಒಂದಾಗಿರುವ ಹ್ಯೂರಾ (Pagani Hauyra) ಉತ್ಪಾದನೆಯನ್ನು ಪಗಾನಿ ಹೊಂದಿದೆ. ಹಾಗೆಯೇ ಇದರಲ್ಲಿ ಅತ್ಯಾಧುನಿಕ ತಂತ್ರಗಾರಿಕೆಗಳನ್ನು ಆಳವಡಿಸಲಾಗಿದೆ. ಈ ಹೈಪರ್ ಕಾರು ಎಎಂಜಿಯಿಂದ ವಿಶೇಷವಾಗಿಯೂ ಅಭಿವೃದ್ಧಿಪಡಿಸಲಾಗಿರುವ 700 ಅಶ್ವಶಕ್ತಿ ಉತ್ಪಾದಿಸಲ್ಪಡುವ 6 ಲೀಟರ್ ವಿ12 ಕಸ್ಟಮ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.

ಪಗಾನಿ ಹ್ಯೂರಾ (Pagani Hauyra)

ಪಗಾನಿ ಹ್ಯೂರಾ (Pagani Hauyra)

ಹಾಗಿದ್ದರೂ ಪಗಾನಿ ಭಾರತ ಎಂಟ್ರಿ ಇನ್ನು ಪ್ರಾರಂಭಿಕ ಹಂತದಲ್ಲಿದೆ. ಈ ಬಗ್ಗೆ 2014ರ ವೇಳೆಗೆ ಸ್ಪಷ್ಟ ಮಾಹಿತಿ ಲಭಿಸುವ ಸಾಧ್ಯತೆಯಿದೆ.

ಲೋಟಸ್

ಲೋಟಸ್

ಲೋಟಸ್ ಬ್ರಿಟನ್ ಮೂಲದ ಸೂಪರ್ ಸ್ಪೋರ್ಟ್ಸ್ ತಯಾರಕ ಸಂಸ್ಥೆಯಾಗಿದೆ. ಅಂದ ಹಾಗೆ ಜಗತ್ತಿನಲ್ಲಿ ಹಗುರವಾದ ಹಾಗೂ ಅತ್ಯುತ್ತಮ ಸ್ಪೋರ್ಟ್ಸ್ ಕಾರು ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿರುವ ಲೋಟಸ್ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡುವ ಯೋಜನೆ ಹೊಂದಿದೆ.

ಸದ್ಯದಲ್ಲೇ ಭಾರತಕ್ಕೆ ಮತ್ತಷ್ಟು ಸೂಪರ್ ಕಾರುಗಳ ಎಂಟ್ರಿ

ಮೇಲೆ ತಿಳಿಸಲಾದ ಎಲ್ಲ ಮೂರು ಕಾರು ತಯಾರಕ ಸಂಸ್ಥೆಗಳು ನಿಗದಿತ ಮಾದರಿಗಳನ್ನಷ್ಟೇ ಉತ್ಪಾದಿಸುತ್ತಿದೆ ಎಂಬುದು ವಿಶೇಷತೆಯಾಗಿದೆ. ಅಂದರೆ ಗುಣಮಟ್ಟತೆಗೆ ಹೆಚ್ಚಿನ ಆದ್ಯತೆ ಕೊಡುತ್ತದೆ. ಹಾಗೆಯೇ ನಿರ್ಧಿಷ್ಟ ಡೀಲರ್‌ಶಿಪ್‌ಗಳನ್ನು ಮಾತ್ರ ಹೊಂದಿರುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಐಷಾರಾಮಿ ದೇಶದ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ.

Most Read Articles

Kannada
English summary
The number of millionaires in India are growing every year and this is attracting the attention of ultra expensive car makers from Europe. Names such as Ferrari, Lamborghini, Koenigsegg and Bugatti are already here, but there are other big names which are now planning to make their entry into India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X