ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು

ನೆರೆಯ ಚೀನಾ ರಾಷ್ಟ್ರದಲ್ಲಿ ನಡೆದ ಅಪಘಾತವೊಂದರಲ್ಲಿ ಜಗತ್ತಿನ ಅತಿ ಜನಪ್ರಿಯ ಸೂಪರ್ ಕಾರುಗಳಲ್ಲಿ ಒಂದಾಗಿರುವ ಲಂಬೊರ್ಗಿನಿ ಅವೆಂಟಡೊರ್, ಬಸ್ಸಿಗೆ ಮುಖಾಮುಖಿ ಢಿಕ್ಕಿಯಾದ ಘಟನೆಯೊಂದು ವರದಿಯಾಗಿದೆ.

ಆದರೆ ಈ ದುರ್ಘಟನೆಯಿಂದ ಚಾಲಕ ಅದೃಷ್ಟವಶಾತ್ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಂಟೆಗೆ 80 ಕೀ.ಮೀ. ವೇಗದಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದೆ. ಹಾಗಿದ್ದರೂ ವಿಶ್ವದರ್ಜೆಯ ಬಿಡಿಭಾಗಗಳಿಂದ ನಿರ್ಮಿಸಲಾಗಿರುವ ಲಂಬೊರ್ಗಿನಿ ಸಂಪೂರ್ಣ ನಜ್ಜುಗುಜ್ಜಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು

ವರದಿಗಳ ಪ್ರಕಾರ ಚೀನಾದ ಅನ್‌ಹುಯಿ ಪ್ರಾಂತ್ಯದ ಹೆಫೈ ನಗರದಲ್ಲಿ ದುರಂತ ಸಂಭವಿಸಿದೆ. ಕಾರನ್ನು ಓವರ್‌ಟೇಕ್ ಮಾಡುವ ಗೋಜಿಗೆ ಹೋಗಿರುವ ಲಂಬೊರ್ಗಿನಿ ಅವೆಂಟಡೊರ್ ಎದುರುಗಡೆಯಿಂದ ಬರುತ್ತಿದ್ದ ಬಸ್ಸಿಗೆ ಢಿಕ್ಕಿಯಾಗಿದೆ.

ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು

ಪ್ರಾಥಮಿಕ ವರದಿಗಳ ಪ್ರಕಾರ ಗಂಟೆಗೆ 80 ಕೀ.ಮೀ. ವೇಗದಲ್ಲಿ ಲಂಬೊರ್ಗಿನಿ ಅವೆಂಟಡೊರ್ ಸಂಚರಿಸುತ್ತಿತ್ತು. ಆದರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು

ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರುವ ಲಂಬೊರ್ಗಿನಿ ಅವೆಂಟಡೊರ್ ಎಲ್‌ಪಿ700-4 ಮುಂಭಾಗವು ಸಂಪೂರ್ಣ ಚೂರು ಚೂರಾಗಿದೆ.

ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು

ಆದರೆ ಗಂಟೆಗೆ 300 ಕೀ.ಮೀ.ಗಳಷ್ಟು ವೇಗತೆಯಲ್ಲಿ ಸಂಚರಿಸಲು ಸಾಮರ್ಥ್ಯವುಳ್ಳ ಲಂಬೊರ್ಗಿನಿ ಇಷ್ಟು ಕಡಿಮೆ ವೇಗದಲ್ಲಿ ಸಂಚರಿಸಿರುವ ಹೊರತಾಗಿಯೂ ಸಂಪೂರ್ಣವಾಗಿ ಹೊಡೆದು ಹೋಗಿರುವುದು ಸಂದೇಹಕ್ಕೆ ಕಾರಣವಾಗಿದೆ.

ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು

ಹಾಗಿದ್ದರೂ ನಿಖರ ಸುರಕ್ಷತಾ ಮಾನದಂಡಗಳಿಂದಾಗಿ ಲಂಬೊರ್ಗಿನಿ ಕಾರು ಚಾಲಕ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆ ಬಸ್ ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು

ಮಗದೊಂದು ಕುತೂಹಲಕಾರಿ ಅಂಶವೆಂದರೆ ಲಂಬೊರ್ಗಿನಿ ಅವೆಂಟಡೊರ್ ಸೂಪರ್ ಕಾರಿನಲ್ಲಿ ಲೈಸನ್ಸ್ ಪ್ಲೇಟ್ ಹಾಕಿಸದೆಯೇ ಚಲಾಯಿಸಲಾಗಿತ್ತು. ಇದು ಕಾನೂನು ಪ್ರಕಾರ ಅಪರಾಧವಾಗಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು

ಒಟ್ಟಿನಲ್ಲಿ ಸಂಪೂರ್ಣವಾಗಿ ಒಡೆದು ಹೋಗಿರುವ ಲಂಬೊರ್ಗಿನಿ ಅವೆಂಟಡೊರ್ ಕಾರನ್ನು ಗ್ಯಾರೇಜ್‌ಗೆ ರವಾನಿಸಲಾಗಿದ್ದು, ರಿಪೇರಿ ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X