ಕಳೆದ 2 ದಶಕದಲ್ಲೇ ಮೊದಲ ಬಾರಿ ಆಲ್ಟೊಗೆ ನಂ.1 ಸ್ಥಾನ ನಷ್ಟ

By Nagaraja

ದಶಕಗಳಷ್ಟು ಕಾಲ ದೇಶದ ನಂ.1 ಕಾರು ಎನಿಸಿಕೊಂಡಿದ್ದ ಮಾರುತಿ ಆಲ್ಟೊ ನಿಧಾನವಾಗಿ ತನ್ನ ಆವೇಗವಾಗಿ ಕಳೆದುಕೊಳ್ಳುತ್ತಿದೆಯೇ ಎಂಬ ಸಂಶಯ ಇನ್ನಷ್ಟು ಬಲವಾಗುತ್ತಿದೆ. ಎಂಟ್ರಿ ಲೆವೆಲ್ ಕಾರು ಸೆಗ್ಮೆಂಟ್‌ನಿಂದ ಗ್ರಾಹಕರು ಹೆಚ್ಚು ಸೌಲಭ್ಯಗಳುಳ್ಳ ಸೆಗ್ಮೆಂಟ್‌ನತ್ತ ವಾಲುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.

ಇವನ್ನೂ ಓದಿ: 2014 ಮೇ ತಿಂಗಳ ಮಾರಾಟ; ಟಾಪ್ 5 ಪಟ್ಟಿ ಯಾವುವು?

ಅಂದರೆ ಇನ್ನು ಮುಂದೆ ಮಾರುತಿ ಆಲ್ಟೊ ದೇಶದ ಅತ್ಯಂತ ಹೆಚ್ಚು ಮಾರಾಟವಾದ ಕಾರಲ್ಲ. ಬದಲಾಗಿ ಈ ಸ್ಥಾನವನ್ನು ಮಾರುತಿಯದ್ದೇ ಆಗಿರುವ ಸ್ವಿಫ್ಟ್ ಡಿಜೈರ್ ಕಸಿದುಕೊಂಡಿದೆ. ಇಲ್ಲಿ ವಿಶೇಷವಾದ ಸಂಗತಿಯೆಂದರೆ ಮಾರುತಿ ಆಲ್ಟೊಗೆ ಕನಿಷ್ಠ ಎರಡನೇ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಈ ಸ್ಥಾನವನ್ನು ಮಗದೊಂದು ಮಾರುತಿ ಮಾದರಿಯಾಗಿರುವ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರು ಬಾಚಿಕೊಂಡಿದೆ.

ಆಲ್ಟೊಗೆ ನಂ.1 ಕಸಿದುಕೊಂಡ ಡಿಜೈರ್

ಕಳೆದೆರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆಲ್ಟೊ ಮೂರನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹವೆನಿಸಿದೆ. ಇದೀಗ ಬಿಡುಗಡೆಯಾಗಿರುವ 2014 ಮೇ ತಿಂಗಳ ಮಾರಾಟ ಅಂಕಿಅಂಶಗಳು ಎಲ್ಲರ ಊಹೆಗಳನ್ನು ಬುಡಮೇಲುಗೊಳಿಸಿದೆ.

ಆಲ್ಟೊಗೆ ನಂ.1 ಸ್ಥಾನ ಕಸಿದುಕೊಂಡ ಡಿಜೈರ್

ವರದಿಗಳ ಪ್ರಕಾರ 2014 ಮೇ ತಿಂಗಳಲ್ಲಿ 18,953 ಯುನಿಟ್ ಮಾರಾಟ ಕಂಡಿರುವ ಡಿಜೈರ್ ಪ್ರಥಮ ಸ್ಥಾನಕ್ಕೆ ನೆಗೆದಿದೆ. ಅದೇ ರೀತಿ ಅಗ್ರಸ್ಥಾನದಲ್ಲಿದ್ದ ಆಲ್ಟೊಗೆ 17,311 ಯುನಿಟ್ ಮಾರಾಟ ಮಾತ್ರ ಸಾಧ್ಯವಾಗಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ. ಹಾಗೆಯೇ ಎರಡನೇ ಸ್ಥಾನದಲ್ಲಿರುವ ಸ್ವಿಫ್ಟ್ 17,936 ಯುನಿಟ್ ಮಾರಾಟ ಕಂಡಿದೆ.

ಆಲ್ಟೊಗೆ ನಂ.1 ಸ್ಥಾನ ಕಸಿದುಕೊಂಡ ಡಿಜೈರ್

ಮಾರುತಿ ಪಾಲಿಗೆ ಹಾಟ್ ಕೇಕ್ ಎಂದೇ ಪರಿಗಣಿಸಲ್ಪಟ್ಟಿದ್ದ ಆಲ್ಟೊ ಕಳೆದ 20 ವರ್ಷಗಳಿಂದ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇದೀಗ ಗ್ರಾಹಕರು ಹೆಚ್ಚು ಪ್ರೀಮಿಯಂ ಸೌಲಭ್ಯಗಳುಳ್ಳ ಕಾರಿನತ್ತ ವಾಲುತ್ತಿರುವುದು ಕಂಡುಬಂದಿದೆ.

ಆಲ್ಟೊಗೆ ನಂ.1 ಸ್ಥಾನ ಕಸಿದುಕೊಂಡ ಡಿಜೈರ್

2008ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಡಿಜೈರ್ ಹೆಚ್ಚು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಆಟೋಮ್ಯಾಟಿಕ್ ವೆರಿಯಂಟ್‌ಗಳಲ್ಲೂ ಲಭ್ಯವಿದೆ. ಆದರೆ ಆಲ್ಟೊದಲ್ಲಿ ಇಂತಹ ಸೌಲಭ್ಯಗಳಿಲ್ಲ.

ಆಲ್ಟೊಗೆ ನಂ.1 ಸ್ಥಾನ ಕಸಿದುಕೊಂಡ ಡಿಜೈರ್

800 ಸಿಸಿ ಎಂಜಿನ್ ಹೊಂದಿರುವ ಆಲ್ಟೊ ದೆಹಲಿ ಎಕ್ಸ್ ಶೋ ರೂಂ ದರ 2.76 ಲಕ್ಷ ರು. ಗಳಿಂದ ಆರಂಭವಾಗುತ್ತಿದೆ. ಅದೇ ಹೊತ್ತಿಗೆ ಡಿಜೈರ್ ವೆರಿಯಂಟ್‌ಗೆ ಅನುಗುಣವಾಗಿ 5ರಿಂದ 7.3 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.

ಆಲ್ಟೊಗೆ ನಂ.1 ಸ್ಥಾನ ಕಸಿದುಕೊಂಡ ಡಿಜೈರ್

ವಿಷಯ ಏನೇ ಆಗಿರಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡ ದೇಶದ ಅಗ್ರ ನಾಲ್ಕು ಸ್ಥಾನಗಳನ್ನು ಮಾರುತಿಯೇ ಆಲಂಕರಿಸಿಕೊಂಡಿದೆ. ಇದು ಮಾರುತಿ ಏಕೆ ನಂ.1 ಎಂಬುದನ್ನು ಪದೇ ಪದೇ ನಿರೂಪಿಸುತ್ತಿದೆ.

ಆಲ್ಟೊಗೆ ನಂ.1 ಸ್ಥಾನ ಕಸಿದುಕೊಂಡ ಡಿಜೈರ್

ಈ ಎಲ್ಲ ಬೆಳವಣಿಗೆಗಳು ಗ್ರಾಹಕರು ಸ್ವಿಫ್ಟ್ ಹಾಗೂ ಡಿಜೈರ್‌ಗಳಂತಹ ದೊಡ್ಡ ಕಾರುಗಳತ್ತ ಅಪ್‌ಗ್ರೇಡ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಹಾಗೆಯೇ ದೇಶದ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆಯಿರುವುದು ಡಿಜೈರ್‌ಗೆ ವರದಾನವಾಗಿ ಪರಿಣಮಿಸಿದೆ.

ಆಲ್ಟೊಗೆ ನಂ.1 ಸ್ಥಾನ ಕಸಿದುಕೊಂಡ ಡಿಜೈರ್

ಸಾಮಾನ್ಯ ಸೆಡಾನ್ ಕಾರುಗಳಿಗೆ ಶೇಕಡಾ 24ರಷ್ಟು ಅಬಕಾರಿ ಸುಂಕವಿರುವಾಗ ನಾಲ್ಕು ಮೀಟರ್ ಪರಿಧಿಯೊಳಗಿನ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಶೇಕಡಾ 12ರಷ್ಟು ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇದರಿಂದಲೇ ಗ್ರಾಹಕರಿಗೆ ಕೈಗೆಟಕುವ ದರಗಳಲ್ಲಿ ದೊರೆಯುತ್ತಿದೆ. ಇದೇ ವಿಭಾಗದಲ್ಲಿ ಹ್ಯುಂಡೈ ಎಕ್ಸ್‌ಸೆಂಟ್, ಹೋಂಡಾ ಅಮೇಜ್, ಮಹೀಂದ್ರ ವೆರಿಟೊಗಳಂತಹ ಮಾದರಿಗಳು ಸಹ ಪೈಪೋಟಿ ಒಡ್ಡುತ್ತಿದೆ.

Most Read Articles

Kannada
Story first published: Thursday, June 12, 2014, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X