ಮಾರುತಿ ಸೆಲೆರಿಯೊ ಆಕರ್ಷಕ ಒಳಮೈ ಚಿತ್ರಗಳು ಬಿಡುಗಡೆ

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಮಾರುತಿ ಸುಜುಕಿ ಬಹುನಿರೀಕ್ಷಿತ ಸೆಲೆರಿಯೊ ಕಾರಿನ ಹೊರಮೈ ಸೇರಿದಂತೆ ಮುಂಭಾಗದ ವಿನ್ಯಾಸದ ಬಗೆಗಿನ ಚಿತ್ರಣಗಳನ್ನು ತೋರಿಸಿದ್ದೆವು. ಇದಕ್ಕೊಂದು ಸೇರ್ಪಡೆಯೆಂಬಂತೆ ಮಾರುತಿ ಎ-ಸ್ಟಾರ್ ಬದಲಿ ಕಾರೆನಿಸಿಕೊಂಡಿರುವ ಸೆಲೆರಿಯೊ ಕಾರಿನ ಒಳಮೈ ಚಿತ್ರಗಳು ಇದೀಗ ಹೊರಬಂದಿವೆ.

ಇದಕ್ಕಾಗಿ ಮೋಟಾರ್ ಬೀಮ್ ಡಾಟ್ ಕಾಮ್‌ಗೆ ನಾವು ಮೊದಲು ಕೃತಜ್ಞತೆ ಸಲ್ಲಿಸಲು ಇಚ್ಛಿಸುತ್ತೇವೆ. ನೂತನ ಸೆಲೆರಿಯೊ ಇಂಟಿರಿಯರ್ ಭಾಗಗಳು ಹೆಚ್ಚು ತಾಜಾತನದ ವಿನ್ಯಾಸವನ್ನು ಪಡೆದುಕೊಂಡಿದೆ. ತನ್ನ ಸಮೀಪ ಪ್ರತಿಸ್ಪರ್ಧಿ ಹ್ಯುಂಡೈ ಐ10ಗಳಂತಹ ಕಾರುಗಳಿಗೆ ಹೋಲಿಸಿದರೆ ಸೆಲೆರಿಯೊ ಇಂಟಿರಿಯರ್ ಅಷ್ಟೊಂದು ಉನ್ನತ ಮಟ್ಟದಲ್ಲಿಲ್ಲದಿದ್ದರೂ ಈಗಾಗಲೇ ಹೊರ ನಡೆಯುತ್ತಿರುವ ಎಸ್ಟಾರ್‌ಗಿಂತಲೂ ಹೆಚ್ಚು ಗುಣಮಟ್ಟತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. (ಫೋಟೊ ಕೃಪೆ: ಮೋಟಾರ್ ಬೀಮ್)

ಮಾರುತಿ ಸೆಲೆರಿಯೊ ಆಕರ್ಷಕ ಒಳಮೈ ಚಿತ್ರಗಳು ಬಿಡುಗಡೆ

ಇಲ್ಲಿ ಸೆಲೆರಿಯೊ ಝಡ್‌ಎಕ್ಸ್‌ಐ ವೆರಿಯಂಟ್ ಚಿತ್ರಗಳನ್ನು ಹೊರಬಿಡಲಾಗಿದೆ. ಇದರಲ್ಲಿ ಸೆಮಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಿದೆ. ನೂತನ ಸೆಲೆರಿಯೊದಲ್ಲಿ ಡ್ಯಾಶ್‌ಬೋರ್ಡ್ ಮೌಂಟೆಡ್ ಗೇರ್ ಲಿವರ್ ಲೇಔಟ್ ನೋಡಬಹುದಾಗಿದೆ. ಇದು ಹ್ಯುಂಡೈ ಐ10ಗೆ ಸಾಮತ್ಯೆ ಪಡೆದುಕೊಂಡಿದೆ.

ಮಾರುತಿ ಸೆಲೆರಿಯೊ ಆಕರ್ಷಕ ಒಳಮೈ ಚಿತ್ರಗಳು ಬಿಡುಗಡೆ

ಇಲ್ಲಿ ನೀವು ಪಿ, ಆರ್, ಎನ್ ಮತ್ತು ಡಿಗಳೆಂಬ ಡ್ರೈವ್ ಮೋಡ್‌ಗಳನ್ನು ನೋಡಬಹುದು. ಅದೆ ಹೊತ್ತಿಗೆ ಮ್ಯಾನುವಲ್ ಮೋಡ್ ಎಡಭಾಗದಲ್ಲಿ ಸ್ಥಿತಗೊಂಡಿದೆ. ಇದು ಪ್ಲಸ್ ಮತ್ತು ನೆಗೆಟಿವ್ ಶಿಫ್ಟ್‌ಗಳನ್ನು ಪಡೆದುಕೊಂಡಿದೆ. ಇನ್ನು ಸ್ಟೀರಿಂಗ್ ಮಾರುತಿ ಸ್ವಿಫ್ಟ್‌ಗೆ ಸಾಮತ್ಯೆ ಪಡೆದರೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ತಾಜಾತನವನ್ನು ಪಡೆದಿದೆ. ಹಾಗೆಯೇ ಮ್ಯೂಸಿಕ್ ಸಿಸ್ಟಂ ಲಗತ್ತಿಸಲಾಗಿದೆ.

ಮಾರುತಿ ಸೆಲೆರಿಯೊ ಆಕರ್ಷಕ ಒಳಮೈ ಚಿತ್ರಗಳು ಬಿಡುಗಡೆ

ಕ್ಯಾಬಿನ್ ಸ್ಪೇಸ್‌ನಲ್ಲೂ ಎಸ್ಟಾರ್‌ಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಸೆಲೆರಿಯೊ ಕಾಪಾಡಿಕೊಂಡಿದೆ. ಇದು ಹಿಂದುಗಡೆ ಪ್ರಯಾಣಿಕರಿಗೂ ಆರಾಮದಾಯಕತೆ ಕಲ್ಪಿಸಲಿದೆ. ಒಟ್ಟಿನಲ್ಲಿ ನೂತನ ಸೆಲೆರಿಯೊ ಆವೃತ್ತಿ ಎಸ್ಟಾರ್ ಮತ್ತು ಜೆನ್ ಎಸ್ಟಿಲೊಗೊ ಉತ್ತಮ ಬದಲಿ ಕಾರಾಗಿರಲಿದೆ.

ಮಾರುತಿ ಸೆಲೆರಿಯೊ ಆಕರ್ಷಕ ಒಳಮೈ ಚಿತ್ರಗಳು ಬಿಡುಗಡೆ

ಅಂತಿಮವಾಗಿ ನೂತನ ಸೆಲೆರಿಯೊ 1.0 ಲೀಟರ್ ಕೆ10 ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದರ ಜತೆಗೆ ಆಲ್ ನ್ಯೂ 800ಸಿಸಿ 2 ಸಿಲಿಂಡರ್ ಡೀಸೆಲ್ ಎಂಜಿನ್ ಕೂಡಾ ಇರಲಿದೆ.

ಮಾರುತಿ ಸೆಲೆರಿಯೊ ಆಕರ್ಷಕ ಒಳಮೈ ಚಿತ್ರಗಳು ಬಿಡುಗಡೆ

ಮುಂಬರುವ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಸೆಲೆರಿಯೊ ಲಾಂಚ್ ಆಗಲಿದ್ದು, ಪೆಟ್ರೋಲ್ ಆವೃತ್ತಿಯ ದರ 4.60 ಲಕ್ಷ ರು.ಗಳಿಂದ 5.95 ಲಕ್ಷ ರು.ಗಳ ವರೆಗಿರುವ ಸಂಭವವಿದೆ.

Most Read Articles

Kannada
Story first published: Thursday, January 23, 2014, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X