ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಕಳೆದ ಜೂನ್ ತಿಂಗಳ ಮಾರಾಟದಲ್ಲಿ ಸರ್ವಕಾಲಿಕ ದಾಖಲೆ ಕಂಡುಕೊಂಡಿದೆ.

2014 ಜೂನ್ ತಿಂಗಳಲ್ಲಿ ಮಾರುತಿ ಬರೋಬ್ಬರಿ 1,12,773 ಯುನಿಟ್‌ಗಳ ಮಾರಾಟವನ್ನು ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 84,455 ಯುನಿಟ್ ಮಾತ್ರ ಮಾರಾಟವಾಗಿತ್ತು. ಈ ಮೂಲಕ ದಾಖಲೆ ಸಂಖ್ಯೆಯ ಮಾರಾಟ ಕಂಡುಕೊಂಡಿದೆ. ಇದರೊಂದಿಗೆ ಒಟ್ಟಾರೆ ಶೇಕಡಾ 33.5ರಷ್ಟು ವರ್ಧನೆ ದಾಖಲಿಸಿಕೊಂಡಿರುವ ಮಾರುತಿ ಸಂಸ್ಥೆಯು, ದೇಶದ ವಾಹನೋದ್ಯಮ ಪುನಶ್ಚೇತನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

ಈ ಪೈಕಿ 2014 ಜೂನ್ ತಿಂಗಳಲ್ಲಿ 1,00,964 ಯುನಿಟ್‌ಗಳ ದೇಶೀಯ ಮಾರಾಟ ಕಂಡಿದೆ. ಕಳೆದ ಬಾರಿ ಇದು 77,002 ಯುನಿಟ್‌ಗಳಾಗಿದ್ದು ಶೇಕಡಾ 31.1ರಷ್ಟು ಏರಿಕೆ ಕಂಡುಬಂದಿದೆ.

ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

ಸಣ್ಣ ಕಾರುಗಳಾದ ಮಾರುತಿ800, ಆಲ್ಟೊ, ಎ ಸ್ಟಾರ್ ಮತ್ತು ವ್ಯಾಗನಾರ್ ಮಾರಾಟಗಳಲ್ಲಿ ಶೇಕಡಾ 52.1ರಷ್ಟು ಏರುಗತಿ ಕಂಡುಬಂದಿದ್ದು, 2014 ಜೂನ್ ತಿಂಗಳಲ್ಲಿ ಒಟ್ಟು 47,618 ಯುನಿಟ್‌ ಮಾರಾಟವಾಗಿದೆ. ಕಳೆದ ವರ್ಷವಿದು 31,314 ಯುನಿಟ್‌ಗಳಾಗಿತ್ತು.

ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

ಅದೇ ರೀತಿ ಸ್ವಿಫ್ಟ್, ಎಸ್ಟಿಲೊ ಹಾಗೂ ರಿಟ್ಜ್ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟವು ಶೇಕಡಾ 6.2ರಷ್ಟು ವರ್ಧನೆಯಾಗಿದ್ದು, ಒಟ್ಟು 22,293 ಯುನಿಟ್ ಮಾರಾಟವಾಗಿದೆ. ಕಳೆದ ವರ್ಷವಿದು 20,996 ಯುನಿಟ್‌ಗಳಾಗಿತ್ತು.

ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

ಇನ್ನು ಕಾಂಪಾಕ್ಟ್ ಸೆಡಾನ್ ಡಿಜೈರ್ ಜೂನ್ ತಿಂಗಳಲ್ಲಿ 15,990 ಯುನಿಟ್‌ ಮಾರಾಟ ದಾಖಲಿಸಿದ್ದು, ಶೇಕಡಾ 27.4ರಷ್ಟು ಮಾರಾಟ ವೃದ್ಧಿಯಾಗಿದೆ. ಕಳೆದ ವರ್ಷವಿದು 12548 ಯುನಿಟ್‌ಗಳಾಗಿತ್ತು.

ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

ಅದೇ ರೀತಿ ಮಿಡ್ ಸೈಜ್ ಎಸ್‌ಎಕ್ಸ್4 ಸೆಡಾನ್ ಕಾರು ಮಾರಾಟದಲ್ಲಿ ಶೇಕಡಾ 2.5ರಷ್ಟು ಏರಿಕೆಯಾಗಿದ್ದು, 2014 ಜೂನ್ ತಿಂಗಳಲ್ಲಿ 322 ಯುನಿಟ್ ಮಾರಾಟ ದಾಖಲಾಗಿದೆ. ಕಳೆದ ಸಾಲಿನಲ್ಲಿ ಇದು 314 ಯುನಿಟ್‌ಗಳಾಗಿತ್ತು.

ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

ಏತನ್ಮಧ್ಯೆ ಜಿಪ್ಸಿ, ಗ್ರಾಂಡ್ ವಿಟರಾ ಹಾಗೂ ಎರ್ಟಿಗಾ ಬಹು ಬಳಕೆಯ ವಾಹನಗಳು ಜೂನ್ ತಿಂಗಳಲ್ಲಿ 5,003 ಯುನಿಟ್ ಮಾರಾಟ ದಾಖಲಿಸಿದೆ. ಕಳೆದ ಬಾರಿಯಿದು 4997 ಯುನಿಟ್‌ಗಳಾಗಿತ್ತು.

ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

ಇನ್ನುಳಿದಂತೆ ಓಮ್ನಿ ಹಾಗೂ ಇಕೊ ಮಾರಾಟವು ಶೇಕಡಾ 42.5ರಷ್ಟು ವೃದ್ಧಿಯಾಗಿದ್ದು, 2014 ಜೂನ್ ತಿಂಗಳಲ್ಲಿ 9,738 ಯುನಿಟ್ ಮಾರಾಟ ದಾಖಲಿಸಿದೆ. ಕಳೆದ ವರ್ಷವಿದು 6,833 ಯುನಿಟ್ ಮಾತ್ರವಾಗಿತ್ತು.

ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟ

ಅಂತಿಮವಾಗಿ ರಫ್ತು ವಿಭಾಗದಲ್ಲೂ ಶೇಕಡಾ 58.4ರಷ್ಟು ವೃದ್ಧಿ ದಾಖಲಿಸಿದ್ದು, ಈ ಅವಧಿಯಲ್ಲಿ ಒಟ್ಟು 11,809 ಯುನಿಟ್ ಮಾರಾಟ ದಾಖಲಾಗಿದೆ. 2013 ಜೂನ್ ವರ್ಷದಲ್ಲಿ 7,453 ಯುನಿಟ್‌ಗಳಾಗಿತ್ತು ಎಂದು ಮಾರುತಿ ಸುಜುಕಿ ಪ್ರಕಟಣೆಯಲ್ಲಿ ತಿಳಿಸಿದೆ.

Most Read Articles

Kannada
English summary
Japanese automobile giant and India's largest selling car manufacturer Maruti Suzuki has recorded an increase in sales. The manufacturer has reported selling 1,12,773 vehicles in June, 2014, while 84,455 vehicles were sold in June, 2013 in total sales.
Story first published: Monday, July 7, 2014, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X