ಬಂದೇ ಬಿಡ್ತು ಹೊಸ ಸ್ವಿಫ್ಟ್ ಡಿಜೈರ್; ಮೈಲೇಜ್ 26.59 ನಂಬ್ತೀರಾ?

By Nagaraja

ನಿರಂತರ ಅಂತರಾಳದಲ್ಲಿ ದೇಶದ ವಾಹನ ಮಾರುಕಟ್ಟೆಗೆ ಹೊಸ ಹೊಸ ಮಾದರಿಗಳನ್ನು ಪರಿಚಯಿಸುತ್ತಾ ಬಂದಿರುವ ದೇಶದ ಅಗ್ರ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇದೀಗ ತನ್ನ ಅತ್ಯಂತ ಜನಪ್ರಿಯ ಸ್ವಿಫ್ಟ್ ಡಿಜೈರ್ ಮಾದರಿಯ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಎಲ್ಲ ಹೊಸತನದಿಂದ ಕೂಡಿರುವ ಹೊಸ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರಿನ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 5.07 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್ 7.81 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಷ್ಟಕ್ಕೂ ಹೊಸ ಡಿಜೈರ್ ಕಾರು ಸೆಗ್ಮೆಂಟ್‌ನಲ್ಲಿ ಅತಿ ಗರಿಷ್ಠ 26.59 ಲೀಟರ್ ಮೈಲೇಜ್ ನೀಡುತ್ತದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಸಂಪೂರ್ಣ ವಿವರಗಳಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆ

ಹೊಸ ಸ್ವರೂಪವನ್ನು ಪಡೆದುಕೊಂಡಿರುವ ದೇಶದ ಅತ್ಯಂತ ಹೆಚ್ಚು ಮಾರಾಟದ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ಡಿಜೈರ್ ಡೀಸೆಲ್ ವೆರಿಯಂಟ್ ಪ್ರತಿ ಲೀಟರ್‌ಗೆ 26.59 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಹಿಂದಿನ ಮಾದರಿಗಿಂತಲೂ ಶೇಕಡಾ 13ರಷ್ಟು ಹೆಚ್ಚಾಗಿದೆ. ಹಾಗೆಯೇ ಪೆಟ್ರೋಲ್ ವೆರಿಯಂಟ್ ಪ್ರತಿ ಲೀಟರ್‌ಗೆ 20.85 ಕೀ.ಮೀ. ಮೈಲೇಜ್ ನೀಡಲಿದ್ದು, ಹಿಂದಿನ ಮಾದರಿಗಿಂತಲೂ ಶೇಕಡಾ 9ರಷ್ಟು ಸುಧಾರಣೆ ಕಂಡಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆ

ನೂತನ ಸ್ವಿಫ್ಟ್ 1.3 ಲೀಟರ್ ಡೀಸೆಲ್ ಎಂಜಿನ್ ಕೂಡಾ ಪಡೆಯಲಿದ್ದು, 5.99 ಲಕ್ಷ ರು.ಗಳಿಂದ 7.81 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ. ಹಾಗೆಯೇ ಪೆಟ್ರೋಲ್ 1.2 ಲೀಟರ್ ವೆರಿಯಂಟ್ 5.07 ಲಕ್ಷ ರು.ಗಳಿಂದ 6.8 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ (ಎಲ್ಲವೂ ಎಕ್ಸ್ ಶೋ ರೂಂ ದೆಹಲಿ ಬೆಲೆ).

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆ

ಹೊಸ ಸ್ವಿಫ್ಟ್ ಡಿಜೈರ್ ಪುಶ್ ಸ್ಟ್ಯಾರ್ಟ್/ಸ್ಟಾಪ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಅಲಾಯ್ ವೀಲ್, ಬ್ಲೂಟೂತ್ ಜೊತೆ ಆಡಿಯೋ ಮುಂತಾದ ಪ್ರೀಮಿಯೇ ಸೌಲಭ್ಯಗಳನ್ನು ಪಡೆಯಲಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆ

ದೇಶದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ಡಿಜೈರ್ ಮೊದಲ ಬಾರಿಗೆ 2008ನೇ ಇಸವಿಯಲ್ಲಿ ಬಿಡುಗಡೆಯಾಗಿತ್ತಲ್ಲದೆ 9.12 ಲಕ್ಷ ಯುನಿಟ್‌ಗಳಷ್ಟು ಮಾರಾಟ ಕಂಡಿದೆ. ಬಳಿಕ 2012ರಲ್ಲಿ ಹೊಸ ರೂಪ ಪಡೆದ ಸ್ವಿಫ್ಟ್ ಡಿಜೈರ್, ಕಳೆದ ಮೂರು ತಿಂಗಳಲ್ಲಿ ಎಂಟ್ರಿ ಲೆವೆಲ್ ಸೆಡಾನ್ ಕಾರುಗಳ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟ ಕಂಡುಕೊಂಡಿದೆ.

ಹೊರಮೈ

ಹೊರಮೈ

  • ಮೊಷನ್ ಥೀಮ್ ಅಲಾಯ್ ವೀಲ್,
  • ಫ್ರಂಟ್ ಫಾಗ್ ಲ್ಯಾಂಪ್ ಜೊತೆ ಬಿಜಲ್ ಓರ್ನಮೆಂಟ್ ಕ್ರೋಮ್,
  • ಹೆಡ್ ಲ್ಯಾಂಪ್ ಜೊತೆ ಹೊಸ ನೋಟ,
  • ವಿದ್ಯುನ್ಮಾನವಾಗಿ ಮಡಚಬಹುದಾದ ಓಆರ್‌ವಿಎಂ,
  • ಫ್ರಂಟ್ ಗ್ರಿಲ್ ಕ್ರೋಮ್,
  • ಒಳಮೈ

    ಒಳಮೈ

    • ಎಂಜಿನ್ ಪುಶ್ ಸ್ಟ್ಯಾಟ್ ಸ್ಟಾಪ್,
    • ರಿಯರ್ ಆಕ್ಸೆಸರಿ ಸೊಕೆಟ್,
    • ಆಡಿಯೋ ಜೊತೆ ಬ್ಲೂಟೂತ್,
    • ವುಡನ್ ಪ್ರಿಂಟ್ ಡ್ಯಾಶ್ ಬೋರ್ಡ್,
    • ಸ್ಟೀರಿಂಗ್‌ನಲ್ಲಿ ಬ್ಲೂಟೂತ್ ಕಂಟ್ರೋಲ್ ,
    • ಮ್ಯಾಪ್ ಲ್ಯಾಂಪ್,
    • ಹೆಚ್ಚಿನ ಸ್ಥಳಾವಕಾಶ,
    • ಸುರಕ್ಷತೆ

      ಸುರಕ್ಷತೆ

      ಹೆಚ್ಚಿನ ಕ್ಷಮತೆಯ ಬ್ರೇಕಿಂಗ್ ಸಿಸ್ಟಂ,

      ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,

      ರಿವರ್ಸ್ ಪಾರ್ಕಿಂಗ್ ಸೆನ್ಸಾರ್,

      ಬಣ್ಣಗಳು (ಏಳು)

      ಬಣ್ಣಗಳು (ಏಳು)

      ಪಿಯರ್ಲ್ ಆರ್ಕಟಿಕ್ ವೈಟ್,

      ಸಿಲ್ಕಿ ಸಿಲ್ವರ್,

      ಕೇವ್ ಬ್ಲ್ಯಾಕ್,

      ಫೆಸಿಫಿಕ್ ಬ್ಲೂ,

      ಮ್ಯಾಗ್ನಾ ಗ್ರೇ,

      ಆಲ್ಪ್ ಬ್ಲೂ,

      ಸಿಂಗರಿಯಾ ರೆಡ್,

      ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      ಡೀಸೆಲ್

      ಆಸನ - 5 ಪ್ರಯಾಣಿಕರಿಗೆ

      1238 ಸಿಸಿ ಡಿಡಿಐಎಸ್ ಡೀಸೆಲ್ ಎಂಜಿನ್

      ಅಶ್ವಶಕ್ತಿ - 84.3

      ತಿರುಗುಬಲ - 115

      ಇಂಧನ ವಿತರಣೆ - ಮಲ್ಟಿ ಪಾಯಿಂಟ್ ಇಂಜೆಕ್ಷನ್

      ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      ಪೆಟ್ರೋಲ್

      1197 ಸಿಸಿ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಜೊತೆ ವಿವಿಟಿ

      ಅಶ್ವಶಕ್ತಿ - 75

      ತಿರುಗುಬಲ - 190

      ಇಂಧನ ವಿತರಣೆ - ಕಾಮನ್ ರೈಲ್ ಡೈರಕ್ಟ್ ಇಂಜೆಕ್ಷನ್

      ಟ್ರಾನ್ಸ್‌ಮಿಷನ್

      ಟ್ರಾನ್ಸ್‌ಮಿಷನ್

      ಪೆಟ್ರೋಲ್ - 5 ಮ್ಯಾನುವಲ್/ 4 ಆಟೋಮ್ಯಾಟಿಕ್

      ಡೀಸೆಲ್ - 5 ಮ್ಯಾನುವಲ್

      ಆಯಾಮ

      ಆಯಾಮ

      ಉದ್ದ - 3995 ಎಂಎಂ

      ಅಗಲ - 1695 ಎಂಎಂ

      ಎತ್ತರ - 1555 ಎಂಎಂ

      ಚಕ್ರಾಂತರ - 2430 ಎಂಎಂ

      ಗ್ರೌಂಡ್ ಕ್ಲಿಯರನ್ಸ್ - 170 ಎಂಎಂ

      ಇಂಧನ ಟ್ಯಾಂಕ್ ಸಾಮರ್ಥ್ಯ - 42

Most Read Articles

Kannada
English summary
Maruti Suzuki Swift Dzire Facelift India Launch Price, Specs and Details
Story first published: Tuesday, February 24, 2015, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X