ಮುಂದಿನ 2 ವರ್ಷಗಳಲ್ಲಿ ಮಾರುತಿಯಿಂದ 6 ಹೊಸ ಮಾದರಿ

By Nagaraja

ದೇಶದ ಒಟ್ಟು ಮಾರುಕಟ್ಟೆಯ ಶೇಕಡಾ 50ರಷ್ಟು ಮಾರಾಟವನ್ನು ವಶಪಡಿಸಿಕೊಂಡಿರುವ ಮಾರುತಿ ಸುಜುಕಿ, ನಿರಂತರ ಅಂತರಾಳದಲ್ಲಿ ನೂತನ ಮಾದರಿಗಳನ್ನು ಪರಿಚಯಿಸುತ್ತಲೇ ಬಂದಿದೆ.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ದೇಶದ ನಂ.1 ಕಾರು ಸಂಸ್ಥೆ ಕೂಡಾ ಆಗಿರುವ ಮಾರುತಿ ಮುಂದಿನ ಎರಡು ವರ್ಷಗಳಲ್ಲಿ ಆರು ನೂತನ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಈ ಮೊದಲೇ ಫೆಬ್ರವರಿ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ನಡೆದಿರುವ 2014 ಆಟೋ ಎಕ್ಸ್ ಪೋದಲ್ಲಿ ನೂತನ ಮಾದರಿಗಳನ್ನು ಅನಾವರಣಗೊಳಿಸಿದ್ದ ಮಾರುತಿ, ಇದೀಗ ಕೊಟ್ಟ ಮಾತನ್ನು ಪಾಲಿಸುವಲ್ಲಿ ಬದ್ಧವಾಗಿದೆ.

ಮುಂದಿನ 2 ವರ್ಷಗಳಲ್ಲಿ ಮಾರುತಿಯಿಂದ 6 ಹೊಸ ಮಾದರಿ

ನಿಸ್ಸಂಶವಾಗಿಯೂ ಆರ್ಥಿಕ ಹಿಂಜರಿತವು ಎಲ್ಲ ವಾಹನ ತಯಾರಕ ಸಂಸ್ಥೆಗಳ ಹಾಗೆಯೇ ಅಗ್ರ ಮಾರುತಿ ಸಂಸ್ಥೆಯನ್ನು ಬಾಧಿಸಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಮಾರುತಿ ಸೆಲೆರಿಯೊ ಹೊರತುಪಡಿಸಿದರೆ ಇತರ ಮಾದರಿಗಳು ನಿರೀಕ್ಷಿದಷ್ಟು ಮಾರಾಟ ಕಾಣುತ್ತಿಲ್ಲ ಎಂಬುದನ್ನು ಸಂಸ್ಥೆ ಮನಗಂಡಿದೆ.

ಮುಂದಿನ 2 ವರ್ಷಗಳಲ್ಲಿ ಮಾರುತಿಯಿಂದ 6 ಹೊಸ ಮಾದರಿ

ಭಾರತದಲ್ಲಿ ಮಾರುತಿ ಆರು ನೂತನ ಮಾದರಿಗಳು ದೇಶಕ್ಕೆ ಸದ್ಯದಲ್ಲೇ ಪರಿಚಯವಾಗಲಿದೆ ಎಂಬುದು ಸದ್ಯದ ಹಾಟ್ ನ್ಯೂಸ್. ಈ ಪೈಕಿ ಎಸ್ ಕ್ರಾಸ್ ಮತ್ತು ಸಿಯಾಝ್ ಈಗಾಗಲೇ ಬಿಡುಗಡೆಗೆ ತಯಾರಾಗಿ ನಿಂತಿದೆ.

ಮುಂದಿನ 2 ವರ್ಷಗಳಲ್ಲಿ ಮಾರುತಿಯಿಂದ 6 ಹೊಸ ಮಾದರಿ

ಇವೆರಡರ ಜೊತೆಗೆ ಹೆಚ್ಚು ಸೌಲಭ್ಯಗಳುಳ್ಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಸುಜುಕಿ ಎಕ್ಸ್‌ಎ ಆಲ್ಪಾ ತಲಹದಿಯ ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆ ಮಾಡುವ ಯೋಜನೆಯಿದೆ. ಈ ಎಲ್ಲ ಮಾದರಿಗಳು 6ರಿಂದ 14 ಲಕ್ಷ ರು.ಗಳ ವರೆಗಿನ ಬಜೆಟ್ ರೇಂಜ್‌ನಲ್ಲಿ ಆಗಮನವಾಗಲಿದೆ. ಈ ಮೂಲಕ ಹೆಚ್ಚು ಪ್ರೀಮಿಯಂ ಕಾರುಗಳತ್ತ ಮಾರುತಿ ಮುಖ ಮಾಡಲಿದೆ.

ಮುಂದಿನ 2 ವರ್ಷಗಳಲ್ಲಿ ಮಾರುತಿಯಿಂದ 6 ಹೊಸ ಮಾದರಿ

ಎಕ್ಸ್‌ಎ ಆಲ್ಪಾ

ನಿರೀಕ್ಷಿತ ಲಾಂಚ್: 2016ರಲ್ಲಿ

ಬಜೆಟ್: 6ರಿಂದ 9 ಲಕ್ಷ ರು.

ಪ್ರತಿಸ್ಪರ್ಧಿ: ಫೋರ್ಡ್ ಇಕೊಸ್ಪೋರ್ಟ್

ಪ್ರೀಮಿಯಂ ಮಾದರಿ

ನಿರೀಕ್ಷಿತ ಲಾಂಚ್: 2016ರಲ್ಲಿ

ಬಜೆಟ್: 5.5ರಿಂದ 8.5 ಲಕ್ಷ ರು.

ಪ್ರತಿಸ್ಪರ್ಧಿ: ಹ್ಯುಂಡೈ ಐ20, ಹೋಂಡಾ ಜಾಝ್

ಮುಂದಿನ 2 ವರ್ಷಗಳಲ್ಲಿ ಮಾರುತಿಯಿಂದ 6 ಹೊಸ ಮಾದರಿ

ಸಿಯಾಜ್

ನಿರೀಕ್ಷಿತ ಲಾಂಚ್: 2014

ಬಜೆಟ್: 7ರಿಂದ 11 ಲಕ್ಷ ರು.

ಪ್ರತಿಸ್ಪರ್ಧಿ: ವರ್ನಾ, ಸಿಟಿ

ಎಸ್ ಕ್ರಾಸ್

ನಿರೀಕ್ಷಿತ ಲಾಂಚ್: 2015

ಬಜೆಟ್: 8ರಿಂದ 12 ಲಕ್ಷ ರು.

ಪ್ರತಿಸ್ಪರ್ಧಿ: ಡಸ್ಟರ್, ಸ್ಕಾರ್ಪಿಯೊ

Most Read Articles

Kannada
English summary
Maruti Suzuki was present at the 2014 Auto Expo, which was held in New Delhi. The Japanese automobile giant showcased its current line up of vehicles along with future products. Currently the small cars are the preferred vehicles by the Japanese manufacturer.
Story first published: Wednesday, June 25, 2014, 18:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X