ಅಬ್ಬಬ್ಬಾ, ಮಾರುತಿ ಸ್ವಿಫ್ಟ್ ಮೈಲೇಜ್ 48.2 ಕೀ.ಮೀ.

By Nagaraja

ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕೂಡಾ ಒಂದಾಗಿದೆ. ಇಂಧನ ಕ್ಷಮತೆ, ನಿರ್ವಹಣೆ ಹಾಗೂ ಗುಣಮಟ್ಟದ ವಿಚಾರದಲ್ಲೂ ಸ್ವಿಫ್ಟ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈಗ ಪರಿಚಯವಾಗುತ್ತಿರುವ ಹೊಸ ಸ್ವಿಫ್ಟ್ ಅವತಾರ ಪ್ರತಿ ಲೀಟರ್‌ಗೆ 48.2 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಇತ್ತೀಚೆಗಷ್ಟೇ ನಡೆದ ಇಂಟರ್ ನ್ಯಾಷನಲ್ ಗ್ರೀನ್ ಮೊಬಿಲಿಟಿ ಎಕ್ಸ್ ಪೋದಲ್ಲಿ (ಜಿಎಂಎಕ್ಸ್ 2015) ಪ್ರದರ್ಶನಗೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ರೇಂಜ್ ಎಕ್ಸ್‌ಟೆಂಡರ್ ಹೈಬ್ರಿಡ್ ಕಾನ್ಸೆಪ್ಟ್ ಮಾದರಿಯು ನಂಬಲಾಗದಷ್ಟು ಮೈಲೇಜ್ ನೀಡುತ್ತಿದೆ.

ಮಾರುತಿ ಸ್ವಿಫ್ಟ್ ರೇಂಜ್ ಎಕ್ಸ್‌ಟೆಂಡರ್ ಹೈಬ್ರಿಡ್ ಕಾರು

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಂಡಿದ್ದ ಮಾರುತಿ ಸುಜುಕಿ ಸ್ವಿಫ್ಟ್ ರೇಂಜ್ ಎಕ್ಸ್‌ಟೆಂಡರ್ ಆವೃತ್ತಿಯು ಇದೀಗ ಎರಡನೇ ಬಾರಿಗೆ ಸಾರ್ವಜನಿಕ ದರ್ಶನ ಪಡೆಯುತಿದೆ. ಪ್ರಸ್ತುತ ಕಾನೆಪ್ಟ್ ಹಂತದಲ್ಲಿರುವ ಹೊಸ ಸ್ವಿಫ್ಟ್ ಕಾರು ಯಾವಾಗ ರಸ್ತೆ ಪ್ರವೇಶಿಸಲಿದೆ ಎಂಬುದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮಾರುತಿ ಸ್ವಿಫ್ಟ್ ರೇಂಜ್ ಎಕ್ಸ್‌ಟೆಂಡರ್ ಹೈಬ್ರಿಡ್ ಕಾರು

ಯುರೋಪ್‌ನ ಸ್ವಿಫ್ಟ್ ತಳಹದಿಯಲ್ಲಿ ಈ ಪ್ಲಗ್ ಇನ್ ಹೈಬ್ರಿಡ್ ಮಾದರಿಯನ್ನು ರಚಿಸಲಾಗಿದೆ. ಇದರಲ್ಲಿ ಸಾಮಾನ್ಯ ಪೆಟ್ರೋಲ್ ಎಂಜಿನ್ ಹೊರತಾಗಿ ವಿದ್ಯುತ್ ಚಾಲಿತ ಮೋಟಾರು ಇರಲಿದೆ.

ಮಾರುತಿ ಸ್ವಿಫ್ಟ್ ರೇಂಜ್ ಎಕ್ಸ್‌ಟೆಂಡರ್ ಹೈಬ್ರಿಡ್ ಕಾರು

ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ ಮಾರುತಿ ಸ್ವಿಫ್ಟ್ ರೇಂಜ್ ಎಕ್ಸ್‌ಟೆಂಡರ್ 25.5 ಕೀ.ಮೀ. ಮೈಲೇಜ್ ನೀಡಲಿದೆ. ಇನ್ನು ಇದರ 3 ಸಿಲಿಂಡರ್ 658 ಸಿಸಿ ಪೆಟ್ರೋಲ್ ಎಂಜಿನ್ 73 ಅಶ್ವಶಕ್ತಿ ಉತ್ಪಾದಿಸಲಿದ್ದು, ಸಿಂಗಲ್ ಸ್ಪಿಡ್ ಆಟೋ ಗೇರ್ ಬಾಕ್ಸ್ ಪಡೆಯಲಿದೆ.

ಮಾರುತಿ ಸ್ವಿಫ್ಟ್ ರೇಂಜ್ ಎಕ್ಸ್‌ಟೆಂಡರ್ ಹೈಬ್ರಿಡ್ ಕಾರು

1600 ಕೆ.ಜಿ ತೂಕವನ್ನು ಹೊಂದಿರುವ ಈ ಕಾರಿನಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ಇರಲಿದ್ದು, 200 ವಾಟ್ ಸಾಕೆಟ್ ಮುಖಾಂತರ 1.5 ತಾಸಿನಲ್ಲಿ ಚಾರ್ಜ್ ಮಾಡಿಸಬಹುದಾಗಿದೆ.

ಮಾರುತಿ ಸ್ವಿಫ್ಟ್ ರೇಂಜ್ ಎಕ್ಸ್‌ಟೆಂಡರ್ ಹೈಬ್ರಿಡ್ ಕಾರು

ಇನ್ನು ಪರಿಷ್ಕೃತ ಆಡಿಯೋ ಸಿಸ್ಟಂ ಪಡೆದುಕೊಂಡಿದ್ದು, ಸಣ್ಣದಾದ ಡಿಸ್‌ಪ್ಲೇ ಪರದೆ, ಸ್ಟ್ಯಾಟ್/ಸ್ಟಾಪ್ ಬಟನ್, ರಿಮೋಟ್ ಕೀಲೆಸ್ ಎಂಟ್ರಿ, ರಿಯರ್ ಡಿಸ್ಕ್ ಬ್ರೇಕ್ ಮುಂತಾದ ಸೌಲಭ್ಯಗಳನ್ನು ಪಡೆಯಲಿದೆ. ಅಂದ ಹಾಗೆ ಹೊಸ ಸ್ವಿಫ್ಟ್ ಹೈಬ್ರಿಡ್ ಕಾರು 2017ರ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

Most Read Articles

Kannada
English summary
Maruti Swift Range Extender Hybrid Showcased at GMX 2015; Mileage 48.2kmpl
Story first published: Tuesday, March 3, 2015, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X